ಗೆಲುವು-ಮಾಜಾನ್ ಮಸ್ಕಿ

ಕಾವ್ಯ ಸಂಗಾತಿ

ಗೆಲುವು

ಮಾಜಾನ್ ಮಸ್ಕಿ

ಬೆಟ್ಟದ ಹೂವಿನ
ನಗುವಿನಲ್ಲಿ
ಮನ ಅರಳಿ
ಮತ್ತೆ ಮತ್ತೆ ನೋಡುವ
ಬಯಕೆ ಮೂಡಿದೆ
ಉತ್ತುಂಗಕ್ಕೆ ಸ್ವಾಗತಿಸುವ
ನಿನ್ನ ಉತ್ಸಾಹಕ್ಕೆ
ಗೆರೆ ಬಿಚ್ಚಿ ಎತ್ತರಕ್ಕೆ
ಹಾರಲು ಮನ ಬಯಸುತ್ತಿದೆ
ಭಾಷೆ ಹಲವಾರು
ಭಾವ ಒಂದೇ
ಹಲವು ಹೂವುಗಳ ಪರಿಮಳ
ಮನ ಅರಳಿಸುವಂತೆ
ನಿನ್ನ ತನ್ಮಯ ಪ್ರೀತಿಯ
ಆಲಿಂಗನ ಬಯಸಿದೆ
ಹಲವಿನಲ್ಲಿ ಕೆಲವು
ಒಲವಿನ ದಿನಗಳು
ಆಸರೆಯ ಗೆಲುವು
ಕಾಣುತ್ತಿದೆ


ಮಾಜಾನ್ ಮಸ್ಕಿ

Leave a Reply

Back To Top