ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ಗಝಲ್
ಅಮೃತಾ ಉಮೇಶ್ ಶೆಟ್ಟಿ
ಮನೆಯವರ ಸುಖಕ್ಕಾಗಿ ಮನಸಿನ ಹಿತವ ಕೊಂದವಳು ಅಮ್ಮ
ಪ್ರೀತಿಯ ಸಂಸಾರಕ್ಕೆ ಬೆಳಕ ದೀವಿಗೆವಾಗಿ ನಿಂದವಳು ಅಮ್ಮ
ಜಾರಿದ ಕಂಬನಿಗಳ ಮರೆಯಲ್ಲಿಯೇ ಒರೆಸಿ ಹೇಗೆ ನಗುವೆ
ತನ್ನವರ ಮೊಗದ ಖುಷಿಯ ಛಾಯೆಯಲಿ ಮಿಂದವಳು ಅಮ್ಮ
ಹಗಲಿರುಳು ದುಡಿದರೂ ಇನಿತು ದಣಿವೆಂದು ಹೇಳದೆ ಸಾಗುವೆಯಾ
ಪೌರುಷದ ದರ್ಪಕೆ ಹರುಷಗಳನು ಮಾರುತ ನೊಂದವಳು ಅಮ್ಮ
ಬದುಕಿನೆಲ್ಲೆಡೆ ದಾರಿಯ ಬವಣೆಗೆ ಬೆದರದೆ ಎಡೆಬಿಡದೆ ನಡೆದಳು
ಹೃದಯಗಳ ಒಳಗೆ ಮಧುರ ಭಾವನೆಗಳಿವೆ ಅಂದವಳು ಅಮ್ಮ
ಮಾತೆಯ ನಿತ್ಯದ ರೋದನೆ ಅಳಿಯಲೆಂದು ಅಮ್ಮಿಯ ಕೋರಿಕೆ
ಹಳೆಬೇರಿನಿಂದ ಹೊಸ ಚಿಗುರನು ಮೂಡಿಸಿ ತಂದವಳು ಅಮ್ಮ
ಅಮ್ಮನಿಗೆ ಒಳ್ಳೆಯ ಪದನಮನ….
ಮನೆಯವರ ಸುಖಕ್ಕಾಗಿ ಮಕ್ಕಳ ಏಳ್ಗೆಯೇ ಆ ತಾಯಿಯ ಬದುಕು. ಅವಳಿಗೆ ನಮೋ ನಮಃ…ಚೆನ್ನಾಗಿದೆ ಗಜಲ್ ಮೇಡಂ.