ಕಾವ್ಯ ಸಂಗಾತಿ
ನನಗಿಷ್ಟೇ ಸಾಕು
ಅರುಣಾ ನರೇಂದ್ರ
ಹಿಡಿ ತುಂಬಾ ನೀ ಕೊಟ್ಟ ಪ್ರೀತಿ
ಇನ್ನು ಇದೆ ಖಾಲಿಯಾಗಿಲ್ಲ
ದಿನವೂ ಇಷ್ಟಿಷ್ಟೇ ಸವಿಯುತ್ತೇನೆ
ಮುಗಿದು ಹೋಗಬಾರದೆಂದು
ಈ ಜನ್ಮಕ್ಕೆ ಸಾಕಾಗುತ್ತದೆ ಬಿಡು
ಇದ್ದುದರಲ್ಲೇ ಸಂತುಷ್ಟಳಾಗುವೆ
ಮತ್ತೆ ಬೊಗಸೆಯೊಡ್ಡುವುದಿಲ್ಲ
ಚಿಂತಿಸಬೇಡ ಗೆಳೆಯ
ಇಲ್ಲಿ ಯಾವುದು ಉಳಿಯುತ್ತದೆ ಹೇಳು
ಪ್ರೀತಿಗೆ ಮಾತ್ರ ಸಾವಿಲ್ಲವೆಂದು ಹೇಳುತ್ತಾರೆ
ನಗು ಮರೆತ ತುಟಿಯಲ್ಲಿ ಹೂ ಅರಳಿಸುತ್ತದೆ
ಇಷ್ಟು ಸಾಕಲ್ಲ.. ಇನ್ನೇನು ಬೇಕು
ಉಸಿರ ಕೊನೆಗಳಿಗೆಯಲ್ಲಿ
ಮಣ್ಣಾಗಿ ಬಾಚಿ ತಬ್ಬಿಕೊಳ್ಳುತ್ತದೆ
ಮಡಿಲಲ್ಲಿ ಹುದುಗಿಸಿಕೊಂಡು
ನಿರುಮ್ಮಳವಾಗಿಸುತ್ತದೆ ಇಷ್ಟು ಸಾಕಲ್ಲ….!
Excellent