ವಾರ್ಷಿಕ ವಿಶೇಷ-2021

ವಾರ್ಷಿಕ ವಿಶೇಷ-2021

ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ

ಶೃತಿ ಮೇಲುಸೀಮೆ

ಕನ್ನಡ ಸಾಹಿತ್ಯ ಎನ್ನುವುದು ‘ಕಬ್ಬಿಣದ ಕಡಲೆ ಅಲ್ಲ, ಕಬ್ಬಿನ ರಸ ‘ ಎಂದು ಅರೆಯುವುದು ಅದರ ಹೊಳಹೊಕ್ಕಾಗ ಮಾತ್ರ. ಆದಿಕವಿ ಪಂಪನು ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕೃತಿ ಕಾವ್ಯ ರಚನೆ ಮಾಡುವ ಜ್ಞಾನ ಹೊಂದಿದ ಪರಿಣಿತರು ಎನ್ನುವುದು ಈಗಿನ ಕಾಲದಲ್ಲಿ ಸತ್ಯದ ಸಂಗತಿಯಾಗಿದೆ.

ಮಕ್ಕಳ ಸಾಹಿತ್ಯ ರಚನೆಯಿಂದ ಹಿಡಿದು, ವಯೋಭೇದವಿಲ್ಲದೆ ಎಲ್ಲ ವಯಸ್ಸಿನವರು ಸಹ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ ಕಾದಂಬರಿ, ಕಾವ್ಯ, ಗಜಲ್, ಚುಟುಕು, ವಚನ, ಧಾರಾವಾಹಿ ಇನ್ನೂ ಅನೇಕ ಪ್ರಕಾರಗಳ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಬಹಳ ಹೆಮ್ಮೆಯ ವಿಚಾರ.

ಕೋವಿಡ್-19 ಸಾಕ್ರಮಿಕ ಕಾಯಿಲೆಯಿಂದಾಗಿ ಇಡೀ ವಿಶ್ವವೇ ಮನೆಯೆಂಬ ಪಂಜರದಲ್ಲಿ ಬಂಧಿಯಾಗಬೇಕಾದ ಸಂಧರ್ಭ ಒದಗಿ ಬಂತು. ಇದರಿಂದಾಗಿ ಅನೇಕ ಜನರು ಪ್ರಾಣತೆತ್ತರು. ಮನೆ,ಸಂಸಾರ,ಸಂಬಂಧಗಳು, ಬಂಧು-ಬಾಂಧವ್ಯ ಬಗ್ಗೆ ಅರಿವು ಈಗಿನ ಜನತೆಗೆ ಉಂಟುಮಾಡಿತು. ಮನೆಯಲ್ಲಿದ್ದು ಮಾಡುವ ಹಲವಾರು ಕೆಲಸ ಕಾರ್ಯಗಳಿಗೆ ಮಾಡುವ ವಿಚಾರ ಮಂಥನ ನಮ್ಮ ಸಮಾಜದ ಮುಂದೆ ಬಂದಿತು.

ಆಗ ಯುವ ಸಮಾಜ ಹೆಚ್ಚಾಗಿ you tube, ವಾಟ್ಸಾಪ್, face book, ticktalk ಗಳ ಮೊರೆ ಹೋದರು. ಪ್ರಜ್ಞಾವಂತ ಸಮಾಜ ಸಾಹಿತ್ಯಾಸಕ್ತಿ, ಸಮಾಜ ಸೇವೆ, ಕೌಶಲ್ಯ ಅಭಿವೃದ್ಧಿ ಕಡೆಗೆ ತನ್ನನ್ನು ತಾನು ತೆರೆದು ಕೊಂಡಿತು.

ಈ ಅನೇಕ ಬಗೆಯ ಕವಿಗಳಿಗೆ, ಲೇಖಕರಿಗೆ, ಸಾಹಿತ್ಯ ಓದುಗರಿಗೆ ವೇದಿಕೆ ನೀಡಿದ್ದು ಈ ಅಂತರ್ಜಾಲದ ಪತ್ರಿಕೆಗಳು,ಸಮಾನ ಆಸಕ್ತ ಸಮುದಾಯಗಳ ಬ್ಲಾಗ್ಗಳು, ಇ- ವೃತ್ತ ಪತ್ರಿಕೆಗಳು ಇವುಗಳ ಸೇವೆ ಅಷ್ಟಿಟ್ಟಲ್ಲ. ಜನರಿಗೆ ಧೈರ್ಯ, ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಅವರಲ್ಲಿ ವಿಭಿನ್ನ ಆಸಕ್ತಿ ಮೂಡಿಸುತ್ತ ಬಂದಿತು.

ಇನ್ನೂ ಸ್ವ ಅನುಭವವನ್ನು ಹೇಳಿಕೊಳ್ಳಬೇಕೆಂದರೆ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತ ಓದಿನ ಬೇಸರವನ್ನು ಕಡಿಮೆ ಮಾಡಿಕೊಳ್ಳಲು ಆಗಾಗ್ಗೆ ಒಂದೊಂದು ಚುಟುಕು ಕವನಗಳನ್ನು ಬರೆಯುತ್ತಿದ್ದೆ. ಹೀಗೆ ಬರೆದಿದ್ದನ್ನು ನನ್ನ ಕುಟುಂಬ ಹಾಗೂ ಆತ್ಮೀಯರಲ್ಲಿ ಒಬ್ಬರಿಗೆ ಹಂಚಿಕೊಳ್ಳುತ್ತಿದ್ದೆ. ಈ ಕವನಗಳನ್ನೆಲ್ಲ ಒಂದು ಡೈರಿಯಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದೆ. ನನ್ನ ಆತ್ಮೀಯ ಸ್ನೇಹಿತೆ ಒಬ್ಬರು ನನಗೆ ಕೆಲವು ಸಾಹಿತ್ಯ ಬಳಗಗಳಿಗೆ ನನ್ನನ್ನು ಸೇರಿಸಿದರು. ಅಲ್ಲಿ ನೆಡೆಯುತ್ತಿದ್ದ ವಾರದ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ಮೊದಲನೇ ಕವನವೇ ‘ಅಮ್ಮಾ’ ಎಂಬ ವಿಷಯದ ಕುರಿತಾಗಿತ್ತು. ನಾನು ಈ ವಿಷಯ ಕುರಿತು ‘ನಾನು ಅಮ್ಮನಾದ ಬಗೆ’ ಎಂಬ ಶೀರ್ಷಿಕೆಯನ್ನಿಟ್ಟು ಬರೆದೆ ಅದಕ್ಕೆ ತೃತೀಯ ಸ್ಥಾನ ಸಿಕ್ಕಿದ್ದು ನನಗೆ ಜ್ಞಾನಪೀಠ ಪ್ರಶಸ್ತಿ ದೊರೆತಷ್ಟೇ ಸಂತೋಷವಾಗಿತ್ತು. ಆ ನಂತರ ನನಗೆ ಸಮಯ ದೊರೆತಾಗಲೆಲ್ಲ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಈ ಪ್ರಯತ್ನದಲ್ಲಿ ನನಗೆ ‘ಸಂಗಾತಿ ಪತ್ರಿಕೆ’ಯ ಪರಿಚಯವಾಗಿ ಇದರಲ್ಲಿಯೂ ಸಹ ನನ್ನ ಅನೇಕ ಕವಿತೆಗಳು, ಲೇಖನಗಳು ಪ್ರಕಟಗೊಂಡಿವೆ. ಈ ನನ್ನ ಸಾಹಿತ್ಯ ಪಯಣದಲ್ಲಿ ನನಗೆ ನೇರವಾದ ಸಾಹಿತ್ಯ ಸಂಗಾತಿ ಪತ್ರಿಕೆಯ ವ್ಯವಸ್ಥಾಪಕರಿಗೆ ನನ್ನ ಹೃದಯ ಪೂರ್ವಕ ವಂದನೆಗಳನ್ನು ಅರ್ಪಿಸುತ್ತಿದ್ದೇನೆ ಧನ್ಯವಾದಗಳು.


Leave a Reply

Back To Top