ಬನ್ನಿ ಬಂಗಾರವಾಗದೇ….!!

ಕಾವ್ಯಯಾನ

ಬನ್ನಿ ಬಂಗಾರವಾಗದೇ….

ಯಮುನಾ. ಕಂಬಾರ

ಬನ್ನಿ ಬಂಗಾರವಾಗದೇ
ಈ ಕರಗಳಲ್ಲಿ…….??

” ಕೊಳೆಯಲ್ಲಿ ” – ಕಮಲ ಅರಳುವುದು,
” ಗುಲಾಬಿ ” – ಮೈತೆರೆದು ತೋರುವುದು,
ಕೊನೆಗೆ , “ಸದ್ಭಾವ ” ಚೆಲ್ಲಿ ಕ್ಷಣ ಕಾಲವಾದರೂ ಸರಿ
ಅನಂತ ಆನಂದದ ಶರಧಿಯಲಿ ತೂಗುವುದು…..!!

ಕೊಳೆ ಹೇಗೆ ಅನ್ನವಾಯಿತು ಈ ಕಮಲಕ್ಕೆ…..!!!!! …????
ಬೇಗುದಿಯ ಆತ್ಮಗಳು ತಲೆದೂ ಗಿದ್ದು …… ಎಲ್ಲಿ…….??
ಲಾಲಸೆಗಳು, ಜಿದ್ದು ಹಠಗಳು ಮಡಿದದ್ದು…… ಎಲ್ಲಿ…..??
ಅಹಮಿಕೆಯ ನಾವೆಯಲೇ ತೇಲುವ – ” ಈ ಜಾತಿ , ವರ್ಗ, ಅಂತಸ್ತು ಕಣಗಳು
ಹಳ್ಳ ಹಿಡಿದದ್ದು ಹೇಗೆ…??
ಮತ್ತೆ ಕೊಳದ ಮಣ್ಣಲ್ಲಿ ಹೊಸ ನೋ ಟ ಪಡೆದದ್ದು ಹೇಗೆ…..??

ಅದಾವ ಮಾಯೆ
ತನ್ನ ಬೆಚ್ಚನೆಯ ಮಡಿಲಲ್ಲಿ ಮಮತೆ ಯ ಮುತ್ತುಗಳ ಕೊಟ್ಟು ಪೊರೆದದ್ದು ಹೇಗೆ…..!!??
ಕ್ರೂರ, ಅಜ್ಞಾನ ಅಸಹ್ಯ, ಅಂಧ
ಬಣ್ಣಗಳು ಮಲೆತು
ಸಮತೆ, ಪ್ರೀತಿ ಹಾಗೂ ಏಕತೆಯ ಹೊಸ ಹುಟ್ಟು ಪಡೆದದ್ದು ಹೇಗೆ…..!!??
ಜೊತೆಗೆ
ಕಮಲಕ್ಕೆ ಉಸಿರಾಗಿ ಬದುಕಿಗೆ
ಚಿರ ಯವ್ವನದ ನೆಲೆಯಾಗಿ ನಿಂತದ್ದು ಹೇಗೆ……!!??

ಈ ಕರಗಳಲ್ಲಿ ಬನ್ನಿ ಬಂಗಾರವಾಗದೆ….??!!

ಅದೇಕೆ ಇಲ್ಲ……??
ಚಂದ್ರ, ಮಂಗಳನ ಅಂಗಳಕ್ಕೆ
ಏಣಿ ಪೇರಿಸಿದ ಈ ಕರಗಳಿಗೆ,
ಹೃದಯ ಹೃದಯ ಕೃಷಿ ಮಾಡಿದ
ಈ ಬೆರಳುಗಳಿಗೆ,
ವಿಶ್ವವನೇ ಗಣಕ ಯಂತ್ರದಲಿ
ಅಡಗಿಸಿದ – ಈ ನರವ್ಯೂಹಗಳಿಗೆ,
“ಪ್ರೀತಿ ಎಂಬ ಸರಕೊಂದು” ಸವಾಲಾಗಿದೆಯೇ…ಈ ಮೆದುಳಿಗೆ……!!??

ಬನ್ನಿ ಬಂಗಾರವಾಗದೇ…
ಈ ಕರಗಳಿಗೆ……..!!??


Leave a Reply

Back To Top