ಪರಿಪೂರ್ಣತೆ

ಕಾವ್ಯಯಾನ

ಪರಿಪೂರ್ಣತೆ

ಪ್ರೊ ರಾಜನಂದಾ ಘಾರ್ಗಿ

ಕಾಣಲಿಲ್ಲ ಮುಖದಲ್ಲಿ
ಇಲ್ಲ ಹೆಸರಲಿ ಆಕಾರದಲ್ಲಿ
ಪದವಿ ಪ್ರಶಸ್ತಿ ಗಳಲ್ಲಿ
ಹುಡುಕುತ್ತಿರುವೆ ನಿನ್ನನ್ನು…
ನೀ ಬರೆದ ಕವನಗಳಲ್ಲಿ
ಓದುವ ಪುಸ್ತಕಗಳಲ್ಲಿ
ತೊರುವ ಚಿಂತನೆಗಳಲ್ಲಿ
ಬರೆಯುವ ಲೇಖನಗಳಲ್ಲಿ
ನೀನಾಡುವ ಮಾತುಗಳಲ್ಲಿ
ನೀಡುವ ವ್ಯಾಖ್ಯಾನಗಳಲ್ಲಿ
ಬೇಟಿಮಾಡಿದ ತಾಣಗಳಲ್ಲಿ
ನೋಡಿದ ನೋಟಗಳಲ್ಲಿ
ಬೆಳೆಸಿದ ತೋಟಗಳಲ್ಲಿ
ಅರಳಿದ ಹೂವು ಗಳಲ್ಲಿ
ಹೂವು ಬೀರುವ ಸುಗಂಧದಲ್ಲಿ
ಸ್ನೇಹಿತರ ಗುಂಪುಗಳಲ್ಲಿ
ಅಭಿಮಾನಿಗಳ ಬಳಗದಲ್ಲಿ
ನಿನ್ನ ಸುತ್ತುವರೆದ ಪರಿಸರದಲ್ಲಿ
ಸಮಗ್ರತೆಯ ಪರಿಪೂರ್ಣತೆಯಲ್ಲಿ

*******************************

Leave a Reply

Back To Top