ಗಜಲ್

ಗಜಲ್

ಶಾಲಿನಿ ರುದ್ರಮುನಿ

ಗತ ಕಾಲದ ನೆನಪಲ್ಲ ದಿನನಿತ್ಯದ ಪರಿತಾಪ ದೊರೆ
ಪ್ರೀತಿ ದುಕಾನ್ ದಸ್ತಾನದಲಿ ಹುಸಿಕೋಪ ದೊರೆ

ಮಳೆ ಹಿಡಿದ ದಾರಿಲಿ ಮೌನ ಪ್ರೀತಿ ಮೆರವಣಿಗೆ
ಸರಿದ ಕಾಲದ ಕಾನನದಿ ಮಧುರ ಆಲಾಪ ದೊರೆ

ಸಾವಿರ ತಾರೆಗಳ ಬೆಳಕ ದಿಬ್ಬಣ ಮುಗಿಲ ಮ್ಯಾಲೆ
ಮನದಿ ನೆನಪ ತಾರೆಗಳ ಹಬ್ಬದ ಪ್ರದೀಪ ದೊರೆ

ನಿನ್ನ ಸಂಧಿಸುವ ಗಳಿಗೆ ಚಂದಿರನ ಬೆಳದಿಂಗಳು
ನೀ ಮುನಿದ ಗಳಿಗೆ ಮುಗಿಯದ ವಿಲಾಪ ದೊರೆ

ಶಾರು ಶಾಯರಿಯ ತುಂಬ ನೀನಾದೆ ಬಿಂಬ
ಪ್ರತಿ ದನಿಪದದಲಿ ನಿನ್ನದೆ ಒಲವಲೇಪ ದೊರೆ

*************************

Leave a Reply

Back To Top