ಕವಿತೆ
ನಾನೆಂತು ಮರೆಯಲಿ?
ಲೀಲಾ ಕಲಕೋಟಿ
ನಾನೆಂತು ಮರೆಯಲಿ?
ನೆನಪಿನ ಅಂಗಳದಿ ಸುರಿದ
ಮಲ್ಲಿಗೆಯ ಪರಿಮಳವ…
ನಾನೆಂತು ಮರೆಯಲಿ?
ನೀರಡಿಸಿದ ನೆಲಕೆಂದು
ಸುರಿದ ಮಳೆಗೆದ್ದ….
ಮಣ್ಣಿನ ಕಂಪವನು
ನಾನೆಂತು ಮರೆಯಲಿ?
ಚಿಗುರು ಮೂಡಿ ಹಸಿರು
ಎಲೆಗಳು ತಂಗಾಳಿಗೆ
ಮನ ಮುದಗೊಳಿಸಿದ್ದ
ನಾನೆಂತು ಮರೆಯಲಿ?
ಮೊಗ್ಗು ಬಿರಿದು ಗುಲಾಬಿ
ದಳಗಳು ನಳ ನಳಿಸುತ
ಅರಳುತಿರುವ ಪರಿಯ
ನಾನೆಂತು ಮರೆಯಲಿ?
ಸಂಜೆಯಾಗುತಿರಲು..
ಒಲವು, ಚೆಲುವು, ಗೆಲುವು
ಕನಸಿನಂತೆ ಕಳೆದು…….
ಕತ್ತಲೆ ಆಗುವ ಪರಿಯ
ನಾನೆಂತು ಮರೆಯಲಿ?
************************