ಬುದ್ಧನಾಗಲು

ಕವಿತೆ

ಬುದ್ಧನಾಗಲು

ಸುರೇಖಾ ರಾಠೋಡ್

Gautama Buddha figurine on brown wooden surface

ಬುದ್ಧನಾಗಲು
ಮನ ಶುದ್ದವಾಗಿರಬೇಕು…

ಬುದ್ಧನಾಗಲು
ಬದ್ಧರಾಗಬೇಕು…

ಬುದ್ಧನಾಗಲು
ಬುದ್ಧಿವಂತರಾಗಬೇಕು…

ಬುದ್ಧನಾಗಲು
ಭಾವನಾ ಜೀವಿಯಾಗಬೇಕು…

ಬುದ್ಧನಾಗಲು
ಕರುಣಾಮಯಿಯಾಗಬೇಕು…

ಬುದ್ಧನಾಗಲು
ಮಮತಾಮಯಿಯಾಗಬೇಕು…

ಬುದ್ಧನಾಗಲು
ಸಹನಾಮಯಿಯಾಗಬೇಕು…

ಬುದ್ಧನಾಗಲು
ಧೈರ್ಯ ಶಾಲಿಯಾಗಬೇಕು…

ಬುದ್ಧನಾಗಲು
ನಿರಪೇಕ್ಷವಾದಿಯಾಗಬೇಕು…

ಬುದ್ಧನಾಗಲು
ಬಂಧನ ಮುಕ್ತರಾಗಬೇಕು…

ಬುದ್ಧನಾಗಲು
ಬೌದ್ಧಿಕತೆ ಹೊಂದಿರಬೇಕು…

ಬುದ್ಧನಾಗಲು
ಸಾಹಸಿಯಾಗಬೇಕು….
ಛಲಬಿಡದ ಛಲಗಾರರಾಗಬೇಕು…

ಬುದ್ಧನಾಗಲು
ನಾವು ಸಿದ್ದರಾಗಬೇಕು..‌..

**************************

Leave a Reply

Back To Top