ನಾನೊಮ್ಮೆ

ಕವಿತೆ

ನಾನೊಮ್ಮೆ

ಡಾ.ಸುರೇಖಾ ರಾಠೋಡ್

ನಾನೊಮ್ಮೆ
ಅಮೃತಾಳಾಗಬೇಕೆನ್ನುವ
ಕನಸು,
ಇಮ್ರೊಜ್ ಬೆನ್ನ ಮೇಲೆ..
ಸಾಹಿರನ ಹೆಸರು
ಬರೆದ ಹಾಗೆ,
ನಾನೊಮ್ಮೆ
ನಿನ್ನ ಬೆನ್ನ ಮೇಲೆ
ನಮ್ಮಿಬ್ಬರ ಮಿಲನದ…
ಅಚ್ಚು
ಹಾಕಿಸುವ ಕನಸು…

ನಾನೊಮ್ಮೆ
ಅಮೃತಮತಿಯಾಗಬೇಕೆನ್ನುವ
ಕನಸು,
ಕಂದೀಲು ಹಿಡಿದು..
ಗಜ ಶಾಲೆಯಲ್ಲಿ
ಮಾವುತ ಅಷ್ಟಾವಂಕನ
ಸೇರುವ ಹಾಗೆ..
ನಾನೊಮ್ಮೆ
ನಿನ್ನ
ಪ್ರೇಮ ಸಾಗರದಲ್ಲಿ..
ಮುಳಗಬೇಕೆನ್ನುವ
ಕನಸು…
******

One thought on “ನಾನೊಮ್ಮೆ

  1. ಅ- ಮೃತ ಭಾವನೆಗಳ ಭಯರಹಿತ ಅಭಿವ್ಯಕ್ತಿಗಾಗಿ ಅಭಿನಂದನೆಗಳು.

Leave a Reply

Back To Top