ಚೆಂಬೆಳಗಿನ ಪೇಯ

ಕವಿತೆ

ಚೆಂಬೆಳಗಿನ ಪೇಯ

ರೇಮಾಸಂ

File:'Chai' Tea.jpg - Wikimedia Commons

ಚಹಾ ಚೆಂಬೆಳಗಿನ ಹಾಸ
ಚಹಾ ಜಾಗೃತಗೊಳಿಸುವ ರಸ
ಆರಂಭದ ಗುಟುಕಿಗೆ ಬೆಚ್ಚನೆಯ
ಭಾಸ್ಕರನೊಂದಿಗೆ ಬೇಕು ಪೇಯ

ತರಹೇವಾರಿ ಚಹ ಮನಸೆಳೆವುವು
ಬೆಳಕಗಿನ ಬೆಳಕನು ಮಿಂಚಿಸುವವು
ಹಸಿರು ಚಹ ದೇಹಕೆ ಉಸಿರಂತೆ
ಕಪ್ಪುಸುಂದರಿ ಚಹ ಅಚ್ಚುಮೆಚ್ಚಂತೆ

ಬಿಸಿ ಬಿಸಿ ಕಪ್ಪನ್ನು ಅಪ್ಪಿ ಹಿಡಿದ
ಬೆರಳುಗಳು ತವಕಿಸುವ ಅಧರದ
ಅಬ್ಬರಕೆ ಮೆಲ್ಲನೇ ಸೋಕಿಸುತ
ಜೋಗುಳ ಹಾಡಿದಂತೆ ಗುಟುಕಿಸುತ

ಸರ್ವಾಂಗಗಳು ಸಿದ್ಧ ಆಸ್ವಾಧಿಸಲು
ಅರೆತೆರೆದ ನಯನಗಳ ಅಮಲು
ಸುವಾಸನೆಗೆ ನಾಸಿಕದ ಹಂಬಲ
ಚಡಪಡಿಕೆಯಲಿ ನಾಲಿಗೆಯ ಚಪಲ

ಬೆಲ್ಲದಲಿ ಬೆಂದೆದ್ದ ಚಹಾ
ಕುಡಿಯಲು ಆನಂದ ಮಹಾ
ಚಹಾ ಕುಡಿಯಬೇಕು ಇತಿಮಿತಿಯಲಿ
ಆರೋಗ್ಯ ಭಾಗ್ಯ ಸಿಗುವದಲ್ಲಿ

******************

2 thoughts on “ಚೆಂಬೆಳಗಿನ ಪೇಯ

  1. I am fond of tea . Beautiful write up on tea. Tea is part of Indians life. For me morning is incomplete without tea.

    Madam you described so well importance of tea it is marvelous. Arranged words in rhyming .

    Keep writing . All the best.

  2. ಮನಸನು ಮತ್ತೆ ಅದೇ ಮತ್ತಿನಲಿ ಚಹಾ ಕುಡಿಯುವ ಹಾಗೆ ಪ್ರೇರೇಪಿಸುವಂತಿವೆ ಕವನದ ಸಾಲುಗಳು..

Leave a Reply

Back To Top