ಗಜಲ್
ಶಶಿಕಾಂತೆ
ನನ್ನ ಪುಟ್ಟ ಹೃದಯ ಕ್ಷಮಿಸೋದನ್ನು ಮಾತ್ರ ಕಲಿತಿದೆ
ಈ ಮೃದು ಮನಸು ಕೊರಗೋದನ್ನು ಮಾತ್ರ ಕಲಿತಿದೆ
ತುಂಟ ಕಂಗಳು ನಿನ್ನ ಹುಡುಕೋದನ್ನು ಮಾತ್ರ ಕಲಿತಿದೆ
ಜೇನ ತುಟಿಗಳು ನಿನಗಾಗಿ ನಗೋದನ್ನು ಮಾತ್ರ ಕಲಿತಿದೆ
ನನ್ನೊಳಗಿನಾತ್ಮ ಅರಗಿಸಿ ಕೊಳ್ಳೋದನ್ನು ಮಾತ್ರ ಕಲಿತಿದೆ
ಚುರುಕು ಮೆದುಳು ಮರೆಯೋದನ್ನು ಮಾತ್ರ ಕಲಿತಿದೆ
ಅರಳಿದ ಮಲ್ಲಿಗೆ ಸುಗಂಧ ಬೀರೋದನ್ನು ಮಾತ್ರ ಕಲಿತಿದೆ
ಬೀಸೋ ತಂಗಾಳಿ ತಂಪು ನೀಡೋದನ್ನು ಮಾತ್ರ ಕಲಿತಿದೆ
ನನ್ನೀ ತನುವು ನಿನ್ನನು ಕಾಯೋದನ್ನು ಮಾತ್ರ ಕಲಿತಿದೆ
ಶಶಿಯಬೆಳಕು ಕತ್ತಲು ಕರಗಿಸೋದನ್ನು ಮಾತ್ರ ಕಲಿತಿದೆ
*****