ಕವಿತೆ
ಲೆಕ್ಕಕ್ಕೆ ಸಿಕ್ಕದ ಕವಿತೆ
ಯಾಕೊಳ್ಳಿ.ಯ.ಮಾ
ನಿತ್ಯ ಮುಂಜಾನೆ
ಸೂರ್ಯನಿಗೂ ಮೊದಲೇ
ಎದ್ದ ಅವಳು
ಎಳೆಯುವ ರಂಗೋಲಿ
ಗೆರೆಗಳ ಹದ ಒಂಚೂರು
ತಪ್ಪಿಲ್ಲ
ಹಾಗೆಯೆ ಆಕೆ ಬದುಕಿನಲಿ
ಎಳೆದ ಗೆರೆಗಳ
ಹದವೂ..!
ನಾನೇ ಇರಬಹುದು
ಮನೆಗೆ ದುಡಿದು ತರುವವನನು,
ತಂದ ಮೇಲೆ ಮಾತ್ರ ಅವಳದೆ
ಕಾರಬಾರು ,
ಇಂಚೂರು ಹೆಚ್ಚಿಲ್ಲ
ಕಡಿಮೆಯಿಲ್ಲ,
ಲೆಕ್ಕ ತಪ್ಪುವದಿಲ್ಲ
ಯಾವ ಎ.ಜಿ,ಚಾರ್ಟರ್ಡ
ಅಕೌಂಟಂಟುಗಳು
ಸಮನಲ್ಲ!
ಪೈಸೆಗೆ ಪೈಸೆಗೆ ಹೊಂದಿಸದಿದ್ದರೆ
ರುದ್ರಕಾಳಿ ಆಗುವದು
ತಪ್ಪೊಲ್ಲ!
ಮನೆ ಮಾರು,ಮಕ್ಕಳ
ಕಲಿಕೆ ಕಾರುಬಾರು,
ನಡೆಯಲಾರದು ನನ್ನದು
ಏನೇನೂ ಒಂಚೂರು
ಈಗಿಗ ಮಕ್ಕಳೂ ಅರಿತಿದ್ದಾರೆ!
ಅಮ್ಮನ ಮೂಲಕ ಬಂದರಷ್ಟೇ
ಅಪ್ಪನ
ಅಂಕಿತ ಬೀಳುವದೆಂದು!
ಹೈಕಮಾಂಡ್ ಕೃಪೆ ರಾಜಕಾರಣಕ್ಕಷ್ಟೇ ಅಲ್ಲ
ಮನೆ ಒಳಗೂ ಅಗತ್ಯ ಎಂದು!
ಬೇಗ ಕಲಿತಿದ್ದಾರೆ..
ಈಗಿನ ಕಾಲದವರು ನೋಡಿ ..!
ಐವತ್ತು ವರ್ಷವಾದರೂ
ತಪ್ಪಿ ಬೈಸಿಕೊಳ್ಳುಚ ನನ್ನ ನೋಡಿ
ಮುಸಿ ಮುಸಿ ನಗುತ್ತಾರೆ,
ಪೂಸಿ ಹೊಡೆದು ಕೆಲಸ ಮಾಡಿಕೊಳ್ಖುವ
ರಹದಾರಿ ಕಂಡುಕೊಂಡಿದ್ದಾರೆ,
ಯತ್ನಿಸುತ್ಯಿದ್ದೇನೆ ನಾನೂ,
ಸಿಕ್ಕಿಲ್ಲ ನನಗಿನ್ನೂ ಒಳದಾರಿ!
ಇರಲಿ ಬಿಡಿ,
ಜತೆಗೆ ಇದ್ದೇ ಇದಾಳಲ್ಕ
ತಪ್ಪುಮಾಡಿದರೂ
ಕಾಯಬಲ್ಲ ಸಹಭಾರಿ!
ಬೀಗಬೇಡಿ ..!
ಇದು ನನ್ನೊಬ್ಬನದೇ ಕವಿತೆ ಅಲ್ಲ,,
ಬದುಕಿನಲ್ಲಿ ಹಾದಿ ತಪ್ಪದೆ ಬಾಳಿರುವ
ಎಲ್ಲ ಗಂಡಂದಿರದೂ..
*********************
ತುಂಬಾ ಚೆಂದ ಕವಿತೆ…..it’s lovely
ಧನ್ಯವಾದ ನಾಗರಾಜ ಸರ ತಮ್ಮ ಓದಿಗೆ