ಗಜಲ್..
ರಮೇಶ ಗಬ್ಬೂರ್
ಅವಳಿಲ್ಲದಿರುವ ಜಮಾನ ಯಾಕೆ ಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ..
ಮಲಗಿದರೂ ಚುಚ್ಚುವ ಅವಳ ನೆನಪಿನ ಹಾಸಿಗೆಯಲ್ಲಿ ಯಾಕಿರಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ..
ತುಟಿಗೆ ತುಟಿ ತಾಕಿಸಿ ಸುಡುವ ಬೆಚ್ಚಗಿನ ಬೆಂಕಿಯಿಲ್ಲದೆ ದಿನವು ಸಾಯುತ್ತಿದ್ದೇನೆ..
ಮನುಷ್ಯಳಾಗಿ ಕಾಮವ ಅನುಭವಿಸಬೇಕೆಂದ ಅವಳ ಬಿಟ್ಟು ಹೇಗಿರಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ….
ಮಾತಿನೊಳಗೆ ಮೌನವ ಹುಡುಕಿ ಅಳುನುಂಗಿ ನಗುವವಳು ನನ್ನೊಂದಿಗಿಲ್ಲದೆ ಕೊರಗುತ್ತಿದ್ದೇನೆ…
ಯಾರ ಮೌನಕ್ಕೆ ಬೆಂಕಿ ಹಚ್ಚಲು ಯಾಕೆ ಹೋಗಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…
ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ…
ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ ಯಾಕಾಗಿಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…
ನನ್ನ ಬೆವರ ರುಚಿಯನ್ನು ತನ್ನ ಬೆರಳುಗಳಲ್ಲಿ ತಾಕಿಸಿ ತುಟಿಯ ತುಂಟತನ ಮಾಡುವವಳಿಲ್ಲದೆ ಹಂಬಲಿಸುತ್ತಿದ್ದೇನೆ..
ಅವಳೆದೆಯ ಸುಖದ ರಸವಿಲ್ಲದೆ ಈ ‘ರಮೇಶ’ ಯಾಕೆ ಬಾಳಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ….
*********************************************
ಧನ್ಯವಾದಗಳು ಸಂಗಾತಿ…. ಮತ್ತು ತಂಡಕ್ಕೆ….
ಹೌದು ಗಬ್ಬೂರ್ ಅವರೆ ಅವಳಿಲ್ಲದ ಮೇಲೆ ಬದುಕಾದರೂ ಏಕೆ
ಧನ್ಯವಾದಗಳು ಸರ್
ತುಟಿಗೆ ತುಟಿತಾಗಿಸಿ ಸುಡುವ ಬೆಚ್ಚಗಿನ ಬೆಂಕಿಯಿಲ್ಲದೆ ಯಾಕೆ ಬದುಕಬೇಕು ಸಾಕಿ? ???.
ಈ ಸಾಲು ತುಂಬಾ ಇಷ್ಟವಾಯಿತು. ಚೆಂದ ಗಜಲ್ . ರೂಮಿ ನೆನಪಾದ ..ನನ್ನ ಪ್ರೇಯಸಿಯೂ ನೆನಪಾದಳು …
ಥ್ಯಾಂಕ್ಸ ನಿಮಗೆ…
ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗೆ