ಓ…ಪ್ರೇಮವೇ.
ಶಿವಲೀಲಾ ಹುಣಸಗಿ
ನಿನ್ನೆದೆಯ ಕುಲುಮೆಯಲಿ ಬೆಂದದ್ದೆ ಬಂತು
ಬಚ್ಚಿಟ್ಟ ಪ್ರೇಮವನೀಗ ಖಗಗಳು ಬಿಚ್ಚಿಟ್ಟು
ಬಾನಲಿ ಕಾಮನಬಿಲ್ಲು ಮೂಡಿದಂತಾತು
ಪ್ರೇಮದ ತಂಗಾಳಿಗೆ ಹೃದಯ ಸಿಕ್ಕು.
ಕಂಗಳ ಭಾಷೆಗೆ ವಿರಹದ ಸ್ಪರ್ಶವಾತು…ಓ
ಬೆಸುಗೆಯ ಹೊಂಗನಸಿನ ಹೊದಿಕೆಗೆ
ತಾರೆಗಳೇ ಚಪ್ಪರವಾಗಿ ಮಿನುಗಿದಂತೆ
ಪನ್ನಿರು ಹನಿಸುತ ಆವರಿಸಿದಂತೆಲ್ಲ
ಗುಡಿಸಲೊಂದು ಸ್ವರ್ಗವಾದಂತಾತು…ಓ
ನಿನ್ನ ಪ್ರೀತಿಯ ಘಮಲಿನ ಸೆಳೆತಕ್ಕೇ
ಹೂಬನಗಳು ಭಾರವಾಗಿ ಒರಗಿವೆ
ನಿನ್ನೂಸಿರಲವಿತ ಹಿಡಿ ಪ್ರೀತಿಯು
ನನ್ನೆದೆಯಲಿ ಬೆಚ್ಚಗೆ ನಲುಗಿದೆ….ಓ
ತುತ್ತುಕೂಳಿಗೂ ತತ್ತರಿಸಿದರೂ ಭಯವಿಲ್ಲ
ಬದುಕು ರಸ್ತೆಯಂಚಲ್ಲಿದ್ದರು ಕೊರಗಿಲ್ಲ
ನಿನ್ನೊರತು ಜಗದೊಳು ನನಗೇನು ಬೇಕಿಲ್ಲ
ಬೇಡಿಬಂದರಿಗೆಲ್ಲ ದಕ್ಕಿತೇ ಈ ಪ್ರೀತಿ?…ಓ
ಶೋಕೇಸಿನಲ್ಲಿಟ್ಟು ಮುಟ್ಟುವವರಿಗೇ
ಪ್ರೇಮದ ಬಿಸಿಯುಸಿರು ತಟ್ಟಿತೇ
ನಿಷ್ಕಲ್ಮಶ ಪ್ರೇಮದಲಿ ಮನಸ ಹೊಸೆದು
ಸಾರಬೇಕಿದೆ ನಿಜಾರ್ಥದ ಒಳಹರಿವು
ಪ್ರೇಮಕೆ ಬಂಜೆಯಂಬ ಪಟ್ಟವಿಲ್ಲ
ನಾಡಿ ಮಿಡಿತ ಲೆಕ್ಕಕ್ಕೂ ಸಿಗದು…ಓ
ಓ.. ಪ್ರೇಮವೇ ನೀ ಬಾನಿನಂತೆ ವಿಶಾಲ
ಮೇಘದೂತನ ಪ್ರೇಮ ಪತ್ರಗಳು
ಋತುಗಳ ರಂಗಿನಲಿ ರಂಗೇರಿವೆ
ಪ್ರೇಮಕ್ಕಿದೆ ಜಗವ ಗೆಲ್ಲುವ ಶಕ್ತಿಯೆಂದು
ನಿನ್ನೊಳಿರೆ ಅನುದಿನವು ಸಂತೃಪ್ತಿಯೆಂದು
ಓ…ಪ್ರೇಮವೇ ನೀ ನನ್ನ ಜೀವವೇ..
*******************************
ಸೊಗಸಾಗಿದೆ
Love you medam superagidhe
ಅರ್ಥಗರ್ಭಿತ ಸಾಲುಗಳು
ಭಾವಗಳ ಬೆಸೆವ ಮಹಲುಗಳು
ಈ ಸಾಲುಗಳಿಗಾಗಿ ನಿಮಗೊಂದು ಸಲಾಮ್
ಸಂಗಾತಿ ಕವನ ತುಂಬಾ ಅರ್ಥ ಪೂರ್ಣ ವಾಗಿದೆ ನಿಜವಾದ ಪ್ರೇಮಿಗಳ ಪ್ರೀತಿ ಅಡಗಿದೆ ನಿಮ್ಮ ಕವನ ಡಲ್ಲಿ ಸೂಪರ್ ಸೂಪರ್
ಭಾವ ರಸಧಾರೆಯಲಿ ಪ್ರೇಮಕವಿಗಳ ಮೀರಿಸಿದ್ದೀರಿ. ಅದ್ಭುತ ಪ್ರೇಮಕಾವ್ಯದ ರಸದೌತಣ.
Super ನಿಜ ಜೀವನದಲ್ಲಿ ಪ್ರೀತಿ ಎಂದರೆ ಏನೂ ಅಂತ ತಿಲಿಸುತೆ ಈ ಕಾವ್ಯ ದಲ್ಲಿ
ಬದುಕು ರಸ್ತೆಯಂಚಿನಲಿದ್ದರೂ ಕೊರಗಿಲ್ಲ, ತುತ್ತುಕೂಳಿಗೆ ತತ್ವಾರದರೂ ಭಯವಿಲ್ಲ.. ಓ ಉತ್ಕಟ ಪ್ರೇಮ ಬಯಕೆಯ ಅದ್ಭುತ ಸಾಲುಗಳಿವು..!
ಬಂಡಾಯ ಕವಿಯಾಗಿದ್ದವಳು ಪ್ರೇಮ ಕವಿಯಾಗಿ ಕಂಬಳಿ ಹುಳುವಿನಿಂದ ಚಿಟ್ಟೆಯಾಗಿ ರೂಪಾಂತರವಾದಂತೆ ಭಾಸವಾಯಿತು..!! ಹೀಗೆಯೇ ಸಾಗಲಿ ಪ್ರೇಮದ ಅಭಿಯಾನ..
Supet