ಕವಿತೆಗಳು
ಹಾಯ್ಕು
ಭಾರತಿ ರವೀಂದ್ರ.
1) ನೆನಪು
ಮೊದಲ ಮಳೆ
ನೆನಪುಗಳ ಧಾರೆ
ಮನಸ್ಸು ಒದ್ದೆ.
2) ಸ್ವಾಗತ
ಮೂಡಣ ದೊರೆ
ಹಕ್ಕಿಗಳ ಸ್ವಾಗತ
ಹೊಸ ಬದುಕು.
3) ನೆಪ
ಬೀಸೋ ಗಾಳಿಗೆ
ಅವಳದೇ ಧ್ಯಾನವು,
ಸೋಕಿದ ನೆಪ.
4) ನಾಚಿಕೆ
ಇಳೆ ನಾಚಿಕೆ :
ಕದ್ದು ನೋಡಿದ ರವಿ,
ಶಶಿ ಮುನಿಸು
5) ಸೋನೆ
ನವಿಲು ನೃತ್ಯ :
ಬೆರಗಾದ ಮುಗಿಲು,
ಸುರಿದ ಸೋನೆ.
6) ಗೆಜ್ಜೆ
ಮನ ಮಯೂರ:
ನಿನ್ನ ನಗು ಕಂಡಾಗ,
ಗೆಜ್ಜೆ ನಾಚಿತು.
7) ಕನ್ನಡಿ
ಕಣ್ಣ ಕನ್ನಡಿ:
ತುಂಬೆಲ್ಲ ನಲ್ಲ ನೀನೇ,
ಮೌನ ಪ್ರೀತಿಗೆ.
8) ಹರ್ಷ
ಭೂ ತಾಯಿ ಹರ್ಷ:
ಹೂವಾಗಿ ಅರಳೈತಿ,
ಮಧು ಸಂಭ್ರಮ.
9) ಮುತ್ತು
ನೀನಿತ್ತ ಮುತ್ತು
ಮಿಂಚೈತಿ ನೋಡು,ನನ್ನ
ಕಣ್ಣ ಕಾಡಿಗೆ.
10) ಮಧು
ಮುತ್ತಿನ ಮಧು :
ಮತ್ತೇರಿತು ದುಂಬಿಗೆ,
ಶೃಂಗಾರ ಕಾವ್ಯ.
*******************************************
ಸರಳ ಸುಂದರ ಹಾಯ್ಕುಗಳು
ತುಂಬಾ ಚೆನ್ನಾದ ಹಾಯ್ಕುಗಳು