ಸುಮತಿ ನಿರಂಜನ್ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”
ಕಾವ್ಯ ಸಂಗಾತಿ ಸುಮತಿ ನಿರಂಜನ್ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್
ಸುಮತಿ ನಿರಂಜನ್ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »









