ಕಾವ್ಯ ಸಂಗಾತಿ
ಸಂಧ್ಯಾ ರಾಯ್ಕರ
“ಯುದ್ದ ಬೇಕೇಕೆ”


ಮನುಜ…
ಎಚ್ಚೆತ್ತುಕೋ ವಿನಾಶದತ್ತ ಸಾಗುವ ಮುನ್ನ …
ಎಲ್ಲೋ ಹಚ್ಚಿದ ಬೆಂಕಿಯ ಕಾವು ನಿನ್ನ ಸುಡುವ ಮುನ್ನ…
ಅದೆಷ್ಟೋ ಜೀವಗಳು ಹೆಣವಾದವು ಕಾಲ ಕಸದಂತೆ….
ತಮ್ಮವರ ಕಳೆದುಕೊಂಡು ಅನಾಥರಾದರು ,ಜೀವ ಇದ್ದು ಇಲ್ಲದಂತೆ…
ಸಾಮ್ರಾಜ್ಯ ಕಟ್ಟುವ ನಿನ್ನಾಸೆಗೆ ಮನುಜ ಕುಲದ ವಿನಾಶವೇ……
ಅಲೆಕ್ಸಾಂಡರ್ ನ ಕೊನೆಯ ಸಂದೇಶ ಮರೆತೆಯ …
ವಿಶ್ವವನೇ ಗೆದ್ದರೂ ಹೋಗುವೆ ನೀ ಬರಿ ಕೈಯಲ್ಲಿ…
ಸುಧಾರಿಸಿಕೋ …
ಬೆಂದು ಹೋಗದಿರು ನೀನು ಈ ತೈಲದ ಕೂಪದಲ್ಲಿ…….
ಇಂದಿರುವವನು ನಾಳೆ ಇಲ್ಲ ಎಂಬಂತಿರುವಾಗ ಯುದ್ಧದ ರಣ ಕಹಳೆಯ ಅನಿವಾರ್ಯತೆ ಏಕೆ…… ..
ನಾಲ್ಕು ದಿನದ ಈ ಬದುಕಿನಲ್ಲಿ ಪ್ರೀತಿಯ ಗೋಡೆಯನೇ ಕಟ್ಟಬಾರದೇ…..



