ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಏನೆಂದು ಬಣ್ಣಿಸಲಿ ನಿನ್ನ ….?
ಹೇಗೆಲ್ಲ ವರ್ಣಿಸಲಿ ನಿನ್ನ  ….?

ಸೂರ್ಯನೆನ್ನಲೇ ? ಅಬ್ಭಾ ! ಕಡು ಕೋಪದಲ್ಲಿ ಸುಡುವವನು ,
ಇರುಳಲಿ ಮರೆಯಾಗುವವನ ನಿನಗೆ  ಹೇಗೆ ಹೋಲಿಸಲಿ ,
ತಂಪೆರೆಯುವ ಶೀತಲ ತಂಗಾಳಿ ನೀ ,
ಎಂದೂ ಮರೆಯಾಗದ  ಬಂಧು ನೀ …..

ಚಂದ್ರನೆನ್ನಲೇ ? ಅಯ್ಯೋ ! ಅವನಿಗೂ ಗ್ರಹಣ ಬಾಧಿಸುವುದಲ್ಲ ,
ಅಮವಾಸ್ಯೆಯಲಿ ಮಂಕು ಕವಿಯುವವನ ನಿನಗೆ ಹೇಗೆ ಹೋಲಿಸಲಿ ? ಕಲೆಗಳೇ ಇಲ್ಲದ ಶುಭ್ರ ಶ್ವೇತ ಮನಸಿಜ ನೀ ,
ಸದಾ ಪಾದರಸ  ….

ಸಾಗರವೆನ್ನಲೇ ? ಛೇ ! ಅದು ಉಕ್ಕುವುದು ನಿಷ್ಕರುಣಿಯಂತೆ , ಕೆಲವೊಮ್ಮೆ ಕೆರಳುವುದು
ರುದ್ರನಂತೆ  . ಹೇಗೆ ಹೋಲಿಸಲಿ ? ಶಾಂತ ಸಿಹಿ ನೀರಿನ ಸರೋವರ ನೀ , ಎಲ್ಲರನೂ ಪೊರೆದು ಪಾವನಗೋಳಿಸುವ ,
ಅಂತರ್ಜಲ ನೀ ….

ಗಾಳಿ ಎನ್ನಲೇ ? ಅಬ್ಬಬ್ಬಾ ! ನೋಡನೋಡುತ್ತಿದ್ದಂತೆ ಬಿರುಗಾಳಿ ,
ಸುಂಟರ ಗಾಳಿಯಾಗಿ ಉಸಿರೇ ಕಸಿಯುವುದು  , ಹೇಗೆ ಹೋಲಿಸಲಿ ? ನೀ ದೇಹದೊಡನಾಡುವ ,
ಹೃದಯ ಮಿಡಿಯುವ , ಜೀವ ನೀಡುವ ಉಸಿರು  ನೀ ….

ಹೂ ಎನ್ನಲೇ ? ಪಾಪ ! ಅದು ಮುದುಡಿ ಬಾಡುವುದು ಸಂಜೆಗೆ , ಅಲ್ಪಾಯುಷಿಯಾದ ಅದಕೆ ಹೇಗೆ ಹೋಲಿಸಲಿ ? ನೀ ಚೀರಂಜೀವಿ ,
ನಿತ್ಯ ನೂತನ ನಿನ್ನ ಜೀವನ  , ಬಾಡದ , ಬತ್ತದ ಅನುರಾಗದ ಸುಧೆ ನೀಯುವೆ ನೀ……

ಅಂಬರವೆನ್ನಲೇ ? ಛೇ ! ಒಂದು ದಿನಕ್ಕೆ ಹಲವು ಬಣ್ಣ ಬದಲಿಸುವುದು ,  ಕಣ್ಣಿಗೆ ಕಂಡರು ವಿಸ್ಮಯದಂತೆ ಕಾಡುವುದು , ಹೇಗೆ ಹೋಲಿಸಲಿ ?  ಎಂದೆಂದೂ ಒಂದೇ ಬಣ್ಣ , ನಿತ್ಯ ಸತ್ಯ ನೀ …..

ಯಾವ ಹೋಲಿಕೆಗೂ ಸಿಗದ , ಯಾವ ವರ್ಣನೆಗೂ ನಿಲುಕದ ನೀನು , ನೀನಾಗಿರು , ಬೇಡ ನಿನಗೆ ಯಾವ ಉಪಮಾನ , ಉಪಮೆಯ . ವರ್ಣನಾತೀತ ನೀ ……


About The Author

3 thoughts on “ಪರವಿನಬಾನು ಇ. ಯಲಿಗಾರ ಅವರ ಕವಿತೆ “ನೀನು ನೀನೇ””

Leave a Reply

You cannot copy content of this page

Scroll to Top