ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನಾವಂದಂತೆ
ಬದುಕಲಾಗದಾದಾಗ‌
ಬದುಕು ಬಂದಂತೆ
ಬದುಕಬೇಕು

ನಮ್ಮ ಆಸೆಗಳಿಗೆ
ಅವಕಾಶವಿಲ್ಲದಾಗ
ಜಗತ್ತಿ ಆಸೆಗಳ ಜೊತೆ
ನಾವು ಸಾಗಬೇಕು

ನಮ್ಮಿಚ್ಛೆಗಳನಷ್ಟೇ
ಪೂರೈಸಲೆಂದು ಬಂದಿಲ್ಲ
ಎಲ್ಲರಿಗೂ ತುಸು
ಸಮಯವಿತ್ತು ಕಾಯಬೇಕು

ಜಗವು ಸ್ಪರ್ಧೆಯ
ಕಣವಷ್ಟೇ ಅಲ್ಲ
ಹೊಂದಾಣಿಕೆಯೂ
ಬಾಳಿನ ಸೂತ್ರವಾಗಬೇಕು

ಎಲ್ಲ ನಾನೆ ಗೆಲ್ಲಲಿ
ಎನ್ನುವದು ಸರಿಯಲ್ಲ
ಕೆಲವೊಮ್ಮೆ ನಾವೂ ನೂ
ಸೋಲಿನ ಸವಿಯ
ಅನುಭವಿಸಬೇಕು


About The Author

3 thoughts on “ಡಾ.ವೈ.ಎಂ ಯಾಕೊಳ್ಳಿ ಅವರ ಕವಿತೆ “ನಾವಂದುಕೊಂಡಂತಲ್ಲ….””

  1. ನೈಜ ಘಟನೆಗಳಿಗೆ ಕಾವ್ಯದ ರೂಪ. ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು

  2. Meenakshi Patil

    ನೈಜ ಘಟನೆಗಳಿಗೆ ಕಾವ್ಯದ ರೂಪ .ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು

  3. Meenakshi Patil

    ಬದುಕಿನ ಸತ್ಯಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸಿದ್ದೀರಿ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top