ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ್
ಗಜಲ್


ತೆರೆದ ಎದೆಯ ಕದವ ಬಡೆಯುತಲೆ ಇದ್ದೆ
ಅದಾವ ಊರ ಕನಸಿನೊಡೆಯನೊನೀನಾಗಿದ್ದೆ
ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವು
ನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು
ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವ
ದಾರಿಯ ಮರೆಯದಂತೆ ಮಾಡಿದ್ದವು
ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನು
ಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು
ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆ
ನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ
ಕಲ್ಪನಾ ಎಸ್ ಪಾಟೀಲ



