ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ದಟ್ಟ ಕಾನನದ ಮಡಿಲಲ್ಲಿ ಹುಟ್ಟಿದ ಕಾಳಿ ನದಿ,
ಹಾರ್ನಬಿಲ್‌ ಪಕ್ಷಿಗಳ ಹಾಡಿಗೆ ತೂಗಿದ ನದಿ,
ಮರಗಳ ನೆರಳಲ್ಲಿ ಹರಿದ ಕನಸು,
ಹಸಿರು ಕಾಡಿನ ತತ್ವಉಸಿರೇ ಅವಳು.

ಆದರೆ ಇಂದು ಯಂತ್ರಗಳ ಗರ್ಜನೆ.,
ನಿಶ್ಶಬ್ದ ಕಾಡಿನ ನೋವಿನ ಘೋಷಣೆ.
ಅಭಿವೃದ್ಧಿಯ ಹೆಸರಿನ ಕಲ್ಲಿನ ಗೋಡೆ,
ನದಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಬೇಡಿ ?
ಕಾಳಿ ಕಣಿವೆಯ ಮಡಿಲಲ್ಲಿ ಮೌನ,

ಪ್ರಕೃತಿಯ ಹೃದಯದಲ್ಲಿ ಕಾಣದ ಗಾಯ.
ಮೀನುಗಳ ಕನಸುಗಳು ಕಣ್ಣೀರಾದವು,
ಪಕ್ಷಿಗಳ ಗಾನವೂ ಮೌನವಾದವು.
ಈ ಸುಂದರ ಕಾಳಿಯ ಕಣ್ಣೀರ ಕಥೆ,
ಕೇಳುವವರಿಲ್ಲದ ಪ್ರಕೃತಿಯ ವ್ಯಥೆ


About The Author

Leave a Reply

You cannot copy content of this page

Scroll to Top