ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ವಾಕ್ಯದಲ್ಲಿ ನಾಡಿ ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು ಸಮುದ್ರದಲ್ಲಿ ಕವನವಿದೆಮಂಜಿನ ಹನಿಯಲ್ಲಿ ಕವನವಿದೆಮಂಜಿನ ಹನಿ ಸಾಗರದಲ್ಲಿ  ಅದೃಶ್ಯವಾಗುವುದರಲ್ಲಿಅಮೋಘವಾದ ಕವನವಿದೆ! ಮಣ್ಣಿನಲ್ಲಿ ಕವನವಿದೆಬೀಜದಲ್ಲಿ ಕವನವಿದೆಬೀಜ ಮಣ್ಣಿನಲ್ಲಿ ಅದೃಶ್ಯವಾಗಿಮರದಂತೆ ಬೆಳೆಯುವುದರಲ್ಲಿಅದ್ವಿತೀಯವಾದ ಕವನವಿದೆ! ಸೂರ್ಯೋದಯ –ಸೂರ್ಯಾಸ್ತಮಯಆರಂಭವು-ಅಂತ್ಯಗಳಂತೆಪ್ರಕೃತಿ ಕವನಕ್ಕೆ ಎರಡು ಮುಖ್ಯವಾದ ಚರಣಗಳು! ತೆಗೆಯುತ್ತಿರುವ ಪ್ರತಿಯೊಂದು ಉಸಿರಿನಲ್ಲಿಕವನ ಇರುವುದರಿಂದಲೇನಿನ್ನಲ್ಲಿ ಇನ್ನೂ ಜೀವವಿದೆ ಜೀವವೆಂದರೆ ಕೇವಲ ಚಲನವಲ್ಲಕವನವೆಂದರೆ ಕೇವಲ ವಾಕ್ಯ ವಿನ್ಯಾಸವಲ್ಲವಾಕ್ಯದಲ್ಲಿ  ನಾಡಿ ಮಿಡಿಯುವುದು ಕವನಚಲನದಲ್ಲಿ ಸ್ಪೃಹೆ ಧ್ವನಿಸುವುದು ಕವನ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು

“ವಾಕ್ಯದಲ್ಲಿ ನಾಡಿ” ಡಾ.ದೇವರಾಜು ಮಹಾರಾಜು ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »

ಇತರೆ, ನಿಮ್ಮೊಂದಿಗೆ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ

ಸಂಶೋಧನಾ ಸಂಗಾತಿ ಡಾ.ಯಲ್ಲಮ್ಮ ಕೆ. ಡಾ. ಯಲ್ಲಮ್ಮ ಕೆ ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು: [ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ] ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ. *_ಹಿನ್ನಲೆ:_*ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ  ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ  ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು. *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ  ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.ವೈದಿಕ – ಜೈನ ಪ್ರತಿರೋಧ:ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” ಇತಿಹಾಸ ಮತ್ತೆಮರುಕಳಿಸುತ್ತಿದೆಯುದ್ಧವೆಂದರೆಕೇವಲ ಸಾವು ನೋವಿನಲೆಕ್ಕವಲ್ಲಭೂಮಿ ಆಕ್ರಮಣವಲ್ಲಬಲಿಷ್ಟರನ್ನು ಬಗ್ಗು ಬಡಿದುಗುಲಾಮರನ್ನಾಗಿ ಮಾಡುವುದಲ್ಲ ಮನುಷ್ಯ ಮನುಷ್ಯರ ಮಧ್ಯೆಹಗೆತನದ ಗೋಡೆ ನಿರ್ಮಾಣಒಂದಾಗದ ಜನರ ಕಿಚ್ಚುಬೂದಿಯಾಗುವುದು ಭೂಮಿಸುತ್ತಲೂ ಬಾಂಬ್ ಸಪ್ಪಳಕ್ಷಿಪಣಿಗಳ ಹಾರಾಟಎಳೆಯ ಮಕ್ಕಳು ಕುಳಿತಲ್ಲಿಯೇಜೀವ ಬಿಟ್ಟಿದ್ದಾರೆನಾಗಾಸಾಕಿ ಹಿರೋಶಿಮಾದಕುರುಡು ಕೆಪ್ಪರ ಭೀತಿರಾತ್ರಿ ಈಸ್ಟರ್ ನ ಭರ್ಜರಿ ಭೋಜನಬೆಳಿಗ್ಗೆ ರಕ್ತ ಕಾರಿ ಸತ್ತರುಗಡಿವಲಯದ ಗ್ರಾಮಗಳುಶೆಲ್ ದಾಳಿಗೆ ಸುಟ್ಟು ಕರಕಲುಮಕ್ಕಳ ಮಹಿಳೆಯರ ಅರಚಾಟಫೋನಿನ್ ಗಂಟೆ ಬಾರಿಸಿದಾಗಲೆಲ್ಲಹೆದರುತ್ತಾರೆ ಮಡದಿ ಮಕ್ಕಳುಮಸಣದ ಗುಂಡಿಗಳ ನೆನಪುದಾರಿಯುದ್ದಕ್ಕೂ ಬಿದ್ದಿವೆಎಲವು ಡೌವುಗಿಗಳುಕೊಂದವರ ಅಟ್ಟಹಾಸಸತ್ತವರ ಶೋಕ ಸಭೆ ಪ್ರತಿಭಟನೆ. ಒಮ್ಮೆ ಕೇಳಬೇಕಿದೆಕಳಿಂಗ ಗೆದ್ದ ಮೇಲೂವಿರಕ್ತನದ ಅಶೋಕನನ್ನುಜಗವೇ ಗೆಲ್ಲಲು ಹೋಗಿಹೆಣದ ಪೆಟ್ಟಿಗೆಯಲ್ಲಿ ಮಲಗಿದಅಲೆಕ್ಸಾಂಡರ್ ಚಕ್ರವರ್ತಿಯನ್ನುಗುಲಗಂಚಿ ಕಣ್ಣಿನ ಜಗದಂಬೆಯನ್ನುಏಕೆ ಈ ಯುದ್ಧ ?ಯಾವ ಸಾಹಸ ಸ್ವಾರ್ಥಕೆಪ್ರಾಣಿ ಪಶು ಪಕ್ಷಿಗಳುಒಂದಾಗುವ ಸಮಯದಲ್ಲಿಮನುಷ್ಯ ಮನುಷ್ಯರ ಕೊಲ್ಲುವಯುದ್ಧ ರಣ ನೀತಿಕೇಳ ಬೇಕಿದೆ ಒಮ್ಮೆಬುದ್ಧ ಬಸವ ಏಸು ಮಹಮ್ಮದರನ್ನುಗೆದ್ದು ಬೀಗಿದವರನ್ನುಸೋತು ಸತ್ತವರನ್ನುವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನುಏಕೆ ಬೇಕು ಈ ಯುದ್ಧ?ಮತ್ತೆ ಮತ್ತೆ ಇತಿಹಾಸಮರುಕಳಿಸಬಹುದುಕನಸುಗಳು ಪುಡಿಯಾಗುವವುಹಿಟ್ಲರ್ ಬೈಬಲ್ ಓದುತ್ತಿರುವವನುನಾಳೆ ಏನಾಗುವುದೋ ಗೊತ್ತಿಲ್ಲಇಂದು ಮಲಗೋಣಬದುಕುಳಿದರೆ ನಾಳೆ ಇರೋಣಇಲ್ಲಾ ಇಂದೇ ಆಲ್ ವಿದಾ ಚರಮಗೀತೆ ಹಾಡೋಣ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ” Read Post »

ಇತರೆ

“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡಪಾಟೀಲ್

ಬಣ್ಣದ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ್ “ಬಣ್ಣಗಳ ಹಬ್ಬ…. ಹೋಳಿ”  ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಈ ಜಗತ್ತನ್ನು ಕಲ್ಪನೆ ಮಾಡಿಕೊಳ್ಳಿ ಎಲ್ಲವೂ ಕೇವಲ ಬಿಳಿ ಇಲ್ಲವೇ ಕೇವಲ ಕಪ್ಪು ಬಣ್ಣವನ್ನು ಹೊಂದಿದ್ದರೆ ಹೇಗಿರುತ್ತದೆ ಎಂದು???. ಬೆಳ್ಳನೆಯ ಮೋಡ, ಬೆಳ್ಳನೆಯ ವಿಶಾಲ ಸಮುದ್ರ, ಬೆಳ್ಳನೆಯ ಗಿಡ ಮರಗಳು, ಬೆಳ್ಳನೆಯ ರಸ್ತೆಗಳು, ಬೆಳ್ಳನೆಯ ದೇಹದ ಆಕೃತಿಗಳು ಅಬ್ಬಬ್ಬಾ ಯಾವುದೂ ಚೆನ್ನಾಗಿರುವುದಿಲ್ಲ. ಅಷ್ಟರಲ್ಲಿಯೇ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಕೂಡಿಸಿದ ಬಣ್ಣ ತುಸು ಹೆಚ್ಚೇ ಮನಮೋಹಕ ಎನಿಸುತ್ತದೆ.ಆದರೆ ಹಲವಾರು ಬಣ್ಣಗಳನ್ನು ಹೊಂದಿರುವ ಈ ಪ್ರಕೃತಿ ಅತ್ಯಂತ ಸುಂದರ, ನಯನ ಮನೋಹರವಾಗಿರುತ್ತದೆ. ಬಣ್ಣವಿಲ್ಲದ ಬದುಕು ಬರಡು ಎನಿಸುತ್ತದೆ. ಆಕಾಶದಲ್ಲಿ ತಿಳಿ ನೀಲಿ ಮೋಡಗಳು ಮತ್ತು ಕಪ್ಪು ಮೋಡಗಳು, ಹಸಿರು ಹಾಸಿದ ಗಿಡಮರಗಳು, ಆಕಾಶದ ನೀಲಿಯನ್ನೇ ಹೊದ್ದ ತಿಳಿ ನೀಲ ಸಾಗರ, ಕಪ್ಪನೆಯ ಟಾರು ರಸ್ತೆಗಳು, ಬೆಳ್ಳನೆಯ ಬೆಳ್ಳಕ್ಕಿಗಳು, ವಿಧವಿಧ ಬಣ್ಣದ ಪಕ್ಷಿಗಳು, ಪ್ರಾಣಿಗಳು ಹೀಗೆ ಬಣ್ಣಮಯ ಲೋಕ ನಮ್ಮದು. ಈ ಬಣ್ಣ ಬಣ್ಣದ ಲೋಕವನ್ನು ಬಣ್ಣಿಸಲು ಪದಗಳು ಸಾಲದಾಗುತ್ತವೆ ಎಂದರೆ ಅದು ಅತಿಶಯೋಕ್ತಿಯೇನಲ್ಲ!! ಬಣ್ಣಗಳು ಕೂಡ ನಮ್ಮ ಮನಸ್ಸಿನ ಭಾವಗಳನ್ನು ಸೂಚಿಸುತ್ತವೆ. ನಮ್ಮ ಮನಸ್ಸು ಅತ್ಯಂತ ಉದಾಸ ಸ್ಥಿತಿಯಲ್ಲಿದ್ದಾಗ ಊದಾ ಬಣ್ಣದ ಗೋಡೆಗಳು ಇಷ್ಟವಾದರೆ ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣ ಕಣ್ಣಿಗೆ ಮತ್ತು ಮನಸ್ಸಿಗೆ ಹಿತವನ್ನು ನೀಡುತ್ತವೆ. ಕೆಂಪು ಗುಲಾಬಿಯ ಬಣ್ಣ ಪ್ರೀತಿಯ ದೋತಕವಾದರೆ ಬಿಳಿ ಶಾಂತಿಯ ಸೂಚಕ. ಹಳದಿ ಬಣ್ಣ ಸ್ನೇಹವನ್ನು ಸೂಚಿಸಿದರೆ ಹಸಿರು ಸಮೃದ್ಧಿಯ ಸಂಕೇತ. ಹಲವಿಧದ ಬಣ್ಣಗಳನ್ನು ತನ್ನ ಗರಿಗಳಲ್ಲಿ ಅಡಗಿಸಿಕೊಂಡಿರುವ ನವಿಲು ನಮ್ಮ ರಾಷ್ಟ್ರ ಪಕ್ಷಿ. ಬಣ್ಣಗಳು ಭಾವನೆಗಳನ್ನು ಅರಳಿಸುತ್ತವೆ…. ಅಂತೆಯೇ ಬಣ್ಣದ ಹಬ್ಬವು ಕೂಡ. ಕೆಲ ಹಬ್ಬಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರಮುಖ ಪಾತ್ರವನ್ನು ವಹಿಸಿದರೆ ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ. ಪೌರಾಣಿಕ ಐತಿಹ್ಯಗಳ ಪ್ರಕಾರ ಶಿವನ ಪತ್ನಿಯಾದ ಸತಿ ದೇವಿಯು ತನ್ನ ತಂದೆ ದಕ್ಷ ರಾಜನು ನಡೆಸುತ್ತಿದ್ದ ಯಜ್ಞಕ್ಕೆ ಆಹ್ವಾನವಿಲ್ಲದೆ ಹೋಗುವುದು ಬೇಡ ಎಂಬ ಗಂಡನ ಆಣತಿಯನ್ನು ಮೀರಿ ತವರು ಮನೆಯ ಕಾರ್ಯಕ್ರಮವೆಂದು ಹೋಗಿ ಅಲ್ಲಿ ತನ್ನ ತಂದೆಯಿಂದಲೇ ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಮಹಾದೇವ ರೌದ್ರಾವೇಶದಿಂದ ಆಕೆಯ ದೇಹವನ್ನು ಹೊತ್ತು ತಿರುಗುತ್ತಿದ್ದಾಗ ಆತನ ಆವೇಶಕ್ಕೆ ಇಡೀ ಪ್ರಪಂಚ ನಡುಗುತ್ತಿತ್ತು. ಶಿವನ ಕೋಪವು ವೈಪರೀತ್ಯಕ್ಕೆ ತಿರುಗಬಾರದು ಎಂಬ ಕಾರಣದಿಂದ ಮಹಾವಿಷ್ಣು ತನ್ನ ಸುದರ್ಶನ ಚಕ್ರವನ್ನು ಬಳಸಿ ಸತಿ ದೇವಿಯ ದೇಹವನ್ನು ಚಿದ್ರಗೊಳಿಸಿದನು. ಈಗಾಗಲೇ ಸುಟ್ಟು ಹೋದ ಆಕೆಯ ದೇಹದ ಭಾಗಗಳು ಅಖಂಡ ಭಾರತದ 54 ಸ್ಥಳಗಳಲ್ಲಿ ಬೀಳಲ್ಪಟ್ಟು 54 ಶಕ್ತಿ ಪೀಠಗಳುಆವಿರ್ಭವಿಸಿದವು. ಮಹಾವಿಷ್ಣು ಶಿವನನ್ನು ಶಾಂತಗೊಳಿಸಿದ ನಂತರ ಇವನು ಉಗ್ರ ತಪಸ್ಸನ್ನು ಆಚರಿಸಲು ಹೊರಟು ಹೋದನು. ಅದಕ್ಕೂ ಮುನ್ನ ತಾರಕಾಸುರನು ಭೋಲಾಶಂಕರನ ಏಳು ದಿನದ ಮಗುವಿನಿಂದ ಮಾತ್ರ ತನಗೆ ಮರಣ ಬರಲಿ ಎಂದು ಬ್ರಹ್ಮದೇವನಿಂದ ವರ ಪಡೆದಿದ್ದನು. ಭಕ್ತ ಪ್ರಿಯ ಬ್ರಹ್ಮನು ತಥಾಸ್ತು ಎಂದು ಹೇಳಿಯೂ ಆಗಿತ್ತು. ನಂತರ ತಾರಕಾಸುರನ ಕೋಟಲೆಗಳು ಒಂದಲ್ಲ ಎರಡಲ್ಲ ಇಡೀ ಪೃಥ್ವಿಯ ಜನರನ್ನು ಆತ ಅತ್ಯಂತ ಕ್ರೂರವಾಗಿ ಕಾಡಲಾರಂಭಿಸಿದನು. ದೇವತೆಗಳಿಗೂ ಆತನ ಕಾಟದ ಬಿಸಿ ತಗುಲಿದಾಗ ಅವರೆಲ್ಲರೂ ಸೇರಿ ಬ್ರಹ್ಮ ಮತ್ತು ವಿಷ್ಣುವನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡರು.ಇದೀಗ ಬ್ರಹ್ಮ ವಿಷ್ಣು ಮತ್ತು ದೇವತೆಗಳು ಸೇರಿ ಭೋಗ ತಪಸ್ಸಿನಲ್ಲಿ ನಿರತನಾದ ಶಿವನ ವಿವಾಹವನ್ನು ಹಿಮವಂತ ಮತ್ತು ಮೇನಾ ದೇವಿಯರ ಪುತ್ರಿ ಗಿರಿಜಾದೇವಿಯೊಂದಿಗೆ ಮಾಡುವ ಆಶಯಕ್ಕೆ ಬೆಂಬಲವಾಗಿ ಶಿವನನ್ನು ಎಚ್ಚರಿಸುವ ಮಹಾ ಕಾರ್ಯಕ್ಕೆ ಕಾಮದ ಅಧಿದೇವತೆಯಾದ ಮನ್ಮಥನಿಗೆ ಒಪ್ಪಿಸಿದರು. ಶಿವನನ್ನು ಎಚ್ಚರಗೊಳಿಸುವ ಈ ಮಹಾಮಣಿಹದಲ್ಲಿ ತನ್ನ ಪ್ರಾಣ ಹೋಗುವದೆಂಬ ಅರಿವಿದ್ದರೂ ಕೂಡ ಲೋಕ ಕಲ್ಯಾಣಕ್ಕಾಗಿ ಈ ಕಾರ್ಯವನ್ನು ಒಪ್ಪಿಕೊಂಡ ಕಾಮದೇವನು ತನ್ನ ಪತ್ನಿ ರತಿದೇವಿಯೊಂದಿಗೆ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲೊಂದು ಸುಂದರ ಲೋಕವನ್ನು ಸೃಷ್ಟಿಸಿ ಪತ್ನಿಯೊಂದಿಗೆ ಮೋಹಕವಾಗಿ ನೃತ್ಯ ಮಾಡಿ ಶಿವನ ಮನಸ್ಸನ್ನು ತಣಿಸಲು ಪ್ರಯತ್ನಿಸಿದನು. ಕಾಮದೇವ ಮತ್ತು ರತಿದೇವಿಯರ ಸಾಕಷ್ಟು ಪ್ರಯತ್ನದ ನಂತರ ಕೂಡ ಶಿವ ಎಚ್ಚರಗೊಳ್ಳದೆ ಹೋದಾಗ ಅಂತಿಮ ಪ್ರಯತ್ನವಾಗಿ ಕಾಮದೇವನು ಪುಷ್ಪ ಬಾಣವನ್ನು ಶಿವನೆಡೆಗೆ ಬಿಟ್ಟನು. ಪುಷ್ಪಬಾಣ ಸೋಕಿದ ಶಿವನು ಎಚ್ಚರಗೊಂಡು ತನ್ನ ತಪಸ್ಸನ್ನು ಕೆಡಿಸಲು ಯತ್ನಿಸಿದ ಕಾಮದೇವನನ್ನು ತನ್ನ ಮೂರನೇ ಕಣ್ಣ ತೆರೆದು ಸುಟ್ಟುಬಿಟ್ಟನು. ಆಗ ಅಲ್ಲಿಯೇ ಇದ್ದ ರತಿ ದೇವಿಯು ಲೋಕ ಕಲ್ಯಾಣಕ್ಕಾಗಿ ದೇವತೆಗಳ ಆಗ್ರಹದ ಮೇರೆಗೆ ತನ್ನ ಪತಿ ಈ ಕಾರ್ಯಕ್ಕೆ ಎಳಸಿದನೆಂದು ತನಗೆ ಪತಿ ಭಿಕ್ಷೆ ನೀಡಬೇಕೆಂದು ಶಿವನನ್ನು ಕೇಳಿಕೊಂಡಳು. ಆಗ ಶಿವನು ಕಾಮದೇವನು  ಆಕೆಯ ಕಣ್ಣಿಗೆ ಮಾತ್ರ ಕಾಣುವಂತೆ ವರ ನೀಡಿ ಇಡೀ ಲೋಕದ ಪಾಲಿಗೆ ಮನ್ಮಥನು ಅನಂಗನಾಗಿ ಇರುವಂತೆ ವರ ನೀಡಿದನು. ಈ ಆನಂಗ ವ್ಯಕ್ತಿತ್ವವೇ ನಮ್ಮ ನಿಮ್ಮೊಳಗಿರುವ ಕಾಮ. ಕಾಮ ಎಂದರೆ ಕೇವಲ ದೈಹಿಕ ಲಾಲಸೆಯಲ್ಲ ಅದು ನಮ್ಮನಿಮ್ಮೊಳಗೆ ಅಡಗಿರುವ ಆಸೆಯ ಮೂರ್ತ ರೂಪ. ಅರಿಷಡ್ವರ್ಗಗಳಲ್ಲಿ ಒಂದಾಗಿರುವ ಈ ಕಾಮ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಅಂತಹ ಕಾಮದ ಕೆಟ್ಟತನವನ್ನು, ಅತಿ ಆಸೆಯನ್ನು  ಪ್ರತಿವರ್ಷ ಶಿಶಿರ ಮಾಸದ ಹುಣ್ಣಿಮೆಯ ದಿನದಂದು ಕಟ್ಟಿಗೆಯ ರೂಪದಲ್ಲಿ ಸುಟ್ಟು ಹಾಕುವ ಮೂಲಕ ಕಾಮದಹನವನ್ನು ನಾವು ಆಚರಿಸುತ್ತೇವೆ. ಈ ಸಮಯದಲ್ಲಿ ಕೆಟ್ಟ ಕೆಟ್ಟ ಬೈಗುಳಗಳು, ಪೋಲಿ ಮಾತುಗಳನ್ನು ಕೂಡ ಆಡಿ ತೀಟೆ ತೀರಿಸಿಕೊಳ್ಳುವ ಸಂಪ್ರದಾಯ ಇದೆ. ಲಬೋ ಎಂದು ಬಾಯಿಗೆ ಕೈಯಿಟ್ಟು ಬಾಯಿ ಬಡೆದುಕೊಳ್ಳುವ ಆ ಮೂಲಕ ಕಾಮದಹನವನ್ನು ಆಚರಿಸುವ ಪ್ರಕ್ರಿಯೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತವಾಗಿದೆ. ನಾವು ಚಿಕ್ಕವರಿದ್ದಾಗ ನನ್ನ ಅಣ್ಣಂದಿರು ತಮ್ಮದೇ ಒಂದು ತಂಡ ಕಟ್ಟಿಕೊಂಡು ಮನೆ ಮನೆಯಲ್ಲಿ ಕಾಮಣ್ಣನ ಪಟ್ಟಿಯನ್ನು ಸಂಗ್ರಹಿಸಿ ಅದರ ಜೊತೆಗೆ ಉರುವಲುಗಳನ್ನು ಕೂಡ ಮನೆ ಮನೆಗಳಿಂದ ಪಡೆಯುತ್ತಿದ್ದರು. ಅವರೊಂದಿಗೆ ನಾವು ಚಿಕ್ಕ ಹೆಣ್ಣು ಮಕ್ಕಳು ಕೂಡ ಜೊತೆಗೂಡುತ್ತಿದ್ದೆವು. ಇದರ ಜೊತೆಗೆ  ಮನೆಯ ಹಿತ್ತಲಿನಲ್ಲಿ ಇರುತ್ತಿದ್ದ ಸಣ್ಣ ಪುಟ್ಟ ಮರದ ನಿರುಪಯುಕ್ತ ಪೀಠೋಪಕರಣಗಳ ತುಂಡುಗಳನ್ನು, ರಟ್ಟಿನ ಡಬ್ಬಿಗಳನ್ನು ಮತ್ತಿತರ ಉರುವಲು ಸಾಮಗ್ರಿಗಳನ್ನು ಕದ್ದು ಈ ಕಾಮ ದಹನದ ಕಾರ್ಯಕ್ಕೆ ಬಳಸುತ್ತಿದ್ದೆವು. ಹೀಗೆ ತಂದ ವಸ್ತುಗಳನ್ನು ಕಾಮದಹನಕ್ಕೆ ಸಜ್ಜಾಗಿದ ಅಂಗಳದಲ್ಲಿ ಸೇರಿಸಿ ಅದರ ಮೇಲೆ ತೆಂಗಿನ ಗರಿಗಳನ್ನು ಉದ್ದಕ್ಕೆ ಸೇರಿಸಿ ಮುಚ್ಚಿ ಬಿಡುತ್ತಿದ್ದೆವು. ಹುಣ್ಣಿಮೆಯ ದಿನ ರಾತ್ರಿ ಕಾಮನ ಪೂಜೆಯನ್ನು ಮಕ್ಕಳಲ್ಲಿ ಒಬ್ಬರು ಶಾಸ್ತ್ರೋಕ್ತವಾಗಿ ಮಾಡಿ ತಮಟೆಯ ಸದ್ದಿನ ನಡುವೆ ಕಾಮಣ್ಣನನ್ನು ಸುಡುವ ಮೂಲಕ ಆಚರಿಸುತ್ತಿದ್ದೆವು. ಮರುದಿನ ಮುಂಜಾನೆ ಈ ಕಾಮನನ್ನು ಸುಟ್ಟ ಕೆಂಡದಿಂದಲೇ ಪ್ರತಿ ಮನೆಯಲ್ಲಿಯೂ ಒಲೆ ಹಚ್ಚಿ ಅಡುಗೆ ಮಾಡುತ್ತಾರೆ ಹಾಗೆ ಒಲೆ ಇಲ್ಲದವರು ಕಾಮಣ್ಣನನ್ನು ಸುಡಲು ಬಳಸಿದ ಕಟ್ಟಿಗೆಯ ಕೆಂಡವನ್ನು ತಂದು ನೀರು ಕಾಯಿಸುವ ಒಲೆಗೆ ಹಾಕಿ ನೀರು ಕಾಯಿಸಿ ಆ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಕೆಲಸವನ್ನು ಮನೆಯ ಅಮ್ಮ,ಅಜ್ಜಿಯಂದಿರು ಮಾಡಿದರೆ… ಅಪ್ಪ ಹಿಂದಿನ ದಿನವೇ ಅಂಗಡಿಯಿಂದ ತಂದ ಬೇರೆ ಬೇರೆ ಬಣ್ಣಗಳನ್ನು ಬೇರೆ ಬೇರೆಯಾಗಿಯೇ ಬಕೀಟುಗಳಲ್ಲಿ ಕಲಸಿ ವಿವಿಧ ಬಾಟಲಿಗಳಿಗೆ ತುಂಬಿ ಕೊಡುತ್ತಿದ್ದರು. ತುಸು ಹಳೆಯದಾದ ಬಟ್ಟೆಗಳನ್ನು ತೊಟ್ಟ ಮಕ್ಕಳು ಬಣ್ಣದ ಬಾಟಲಿಗಳನ್ನು,ಪಿಚಕಾರಿಗಳನ್ನು ಹಿಡಿದುಕೊಂಡು ಬೇರೆಯವರ ಮೇಲೆ ಬಣ್ಣವನ್ನು ಎರಚುತ್ತಾ ಖುಷಿಯಿಂದ ಕೇಕೆ ಹಾಕುತ್ತಾ ಮನೆಯ ಸುತ್ತ ಬೇರೆ ಬೇರೆ ಓಣಿಗಳಲ್ಲಿ ಓಡಾಡಿ ಬಣ್ಣ ಎರಚಿ ಸಂಭ್ರಮಿಸುತಿದ್ದರು. ಇನ್ನು ತುಸು ದೊಡ್ಡವರು ಬಣ್ಣದ ಒಣ ಪುಡಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಸ್ನೇಹಿತರಿಗೆ ಮತ್ತು ಪರಿಚಿತರಿಗೆ ಬಣ್ಣವನ್ನು ಹಚ್ಚಿ ಖುಷಿಪಡುತ್ತಿದ್ದರು ಕೆಲವೊಮ್ಮೆ ಜಗಳವಾಡಿ ಮಾತು ಬಿಟ್ಟ ಸ್ನೇಹಿತರು ಕೂಡ ಹೋಳಿ ಹಬ್ಬದ ಈ ಸಮಯದಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಮತ್ತೆ ಒಂದಾಗುತ್ತಿದ್ದರು. ಮಧ್ಯಾಹ್ನದವರಿಗೂ ಬಣ್ಣದ ಆಟವನ್ನು ಆಡಿ ಮನೆಗೆ ಬರುತ್ತಿದ್ದ ಮಕ್ಕಳಿಗೆ ಎಣ್ಣೆ ಹಚ್ಚಿ ಬಣ್ಣ ಹೋಗುವಂತೆ ತಿಕ್ಕಿ ಸ್ನಾನ ಮಾಡಲು ಹೇಳಿದರೆ ದೊಡ್ಡ ಮಕ್ಕಳು ಹತ್ತಿರದ ಹೊಳೆ ಹಳ್ಳಗಳಿಗೆ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋಗುತ್ತಾರೆ. ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ ಎಂಬಂತೆ ತಾಯಂದಿರು ಹೋಳಿಗೆಯನ್ನು ಮಾಡಿ ಮಿಂದು ಬಂದ ಮಕ್ಕಳಿಗೆ ಉಣಬಡಿಸುತ್ತಾರೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಹೋಳಿ ಹುಣ್ಣಿಮೆಯ ಸಂಭ್ರಮ ಮರೆಯಾಗಿದ್ದರೂ ಬಣ್ಣದ ಹಬ್ಬ ತನ್ನ ರಂಗನ್ನು ಉಳಿಸಿಕೊಂಡಿದೆ. ಆಧುನಿಕ ಯುಗದಲ್ಲಿ ಅನೇಕ ರೀತಿಯ ಬಣ್ಣದ ಪಿಚಕಾರಿಗಳು ಬಂದಿದ್ದು ಮಕ್ಕಳು ವಿವಿಧ ರಂಗುಗಳನ್ನು ಪರಸ್ಪರ ಎರಚಿ ಸಂತಸ ಪಡುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಹೋಲಿಕಾದಹನ ಮಾಡುವ ಮೂಲಕ ಆಚರಿಸುತ್ತಾರೆ ಅವರ ಪ್ರಕಾರ ರಾಕ್ಷಸ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಹರಿಯೇ ಸರ್ವೋತ್ತಮ, ಹರಿಯೇ ಜಗದೋದ್ಧಾರಕ ಎಂದು ತನ್ನ ತಂದೆಯ ಆಜನ್ಮ ವೈರಿ ಹರಿಯನ್ನು ಪೂಜಿಸುವುದನ್ನು ಕಂಡು ಕೋಪದಿಂದ ತನ್ನ ಮಗನನ್ನು ಸಾಯಿಸಲು ಹಲವಾರು ಬಾರಿ ಪ್ರಯತ್ನಿಸಿದನು. ಅಂತಹ ಒಂದು ಪ್ರಯತ್ನದ ಅಂಗವಾಗಿ ತನ್ನ ಸೋದರಿ ಹೋಲಿಕಾಳಿಗೆ ವರವಾಗಿ ದೊರೆತ ಸುಡದ ಅಂಗವಸ್ತ್ರವನ್ನು ಧರಿಸಿ ಪ್ರಹ್ಲಾದನನ್ನು ಬೆಂಕಿಯ ಬಾಯಿಯಲ್ಲಿ ದೂಡಲು ಆಕೆಗೆ ಕೇಳಿಕೊಂಡನು. ಅಣ್ಣನ ಮಾತನ್ನು ಮೀರದ ಹೋಲಿಕ ತನ್ನ ಅಂಗವಸ್ತ್ರವನ್ನು ಧರಿಸಿ ಪುಟ್ಟ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಯಲ್ಲಿ ಪ್ರವೇಶಿಸಿದಳು. ಆದರೆ ಯಾವ ಮಾಯದಲ್ಲಿಯೋ ಆಕೆಯ ಅಂಗವಸ್ತ್ರವು ಆಕೆಯ ದೇಹದಿಂದ ಬಿದ್ದು ಹೋಗಿ ಆಕೆ ಸಜೀವವಾಗಿ ದಹನಗೊಂಡಳು, ಆದರೆ ಪುಟ್ಟ ಮಗು ಪ್ರಹ್ಲಾದ ಸೋಜಿಗವೆಂಬಂತೆ ಪಾರಾದನು. ಈ ದಿನ ಹೋಲಿಕ ಎಂಬ ಕಾಮನೆಯನ್ನು ಸುಟ್ಟು ಹಾಕುವ ಆಚರಣೆಯನ್ನು ಉತ್ತರ ಭಾರತೀಯರು ಮಾಡುತ್ತಾರೆ. ಹೋಲಿ ಹಬ್ಬ ಉತ್ತರ ಭಾರತೀಯರ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದ್ದು ಹಾಡು, ಕುಣಿತ, ನೃತ್ಯ ಸಂಗೀತಗಳ ಜೊತೆ ಜೊತೆಗೆ ಭಾಂಗ್ ಎಂಬ ನಶೆಯ ಪೇಯವನ್ನು ಕೂಡ ಅವರು ಸೇವಿಸಿ ಮತ್ತರಾಗುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಹೋಲಿ ಪಾರ್ಟಿ ಎಂದು ಚಿತ್ರರಂಗದ ಎಲ್ಲರನ್ನೂ ಆಮಂತ್ರಿಸಿ ದೊಡ್ಡ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು  ನರಸಿಂಹದೇವರ ದೇವಸ್ಥಾನವಿರುವ ಕಡೆಗಳಲ್ಲಿ ಹೋಳಿಹಬ್ಬವನ್ನು ಆಚರಿಸುವುದಿಲ್ಲ. ನರಸಿಂಹದೇವರ ದೇವಸ್ಥಾನವಿರುವ ಸುತ್ತಲ ಏಳು ಹಳ್ಳಿಗಳಲ್ಲಿ ಕಾಮದಹನ,ಬಾಯಿ ಬಡಿದುಕೊಳ್ಳುವ, ಕೆಟ್ಟ ಮಾತುಗಳನ್ನು ಹೇಳುವ ಯಾವುದೇ ಆಚರಣೆಗಳು ಇಲ್ಲ. ಜೊತೆಗೆ ಬಣ್ಣದ ಹಬ್ಬವು ಇಲ್ಲ. ಅದೆಷ್ಟೇ ಆಕರ್ಷಣೀಯವಾದರೂ ಬಣ್ಣದ ಈ ಹಬ್ಬವನ್ನು ಈ ಭಾಗಗಳಲ್ಲಿ ಆಚರಿಸುವುದಿಲ್ಲ. ಅಷ್ಟಾಗಿಯೂ ಆಚರಿಸಬೇಕೆಂಬ ಆಸಕ್ತಿಯುಳ್ಳವರು ತಮ್ಮ ಊರನ್ನು ಬಿಟ್ಟು ಬೇರೆ ಊರುಗಳಿಗೆ ಬಣ್ಣದ ಆಟ ಆಡಲು ತೆರಳುತ್ತಾರೆ. ಇನ್ನು ಕೆಲ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆಯ ದಿನ ಕಾಮ ಮತ್ತು ರತಿದೇವಿಯರನ್ನು ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ನಾಲ್ಕು ದಿನಗಳ ಕಾಲ ಕಾಮ ರತಿದೇವಿಯರನ್ನು ಪೂಜಿಸಿ 4ನೇ ದಿನ ರಾತ್ರಿ ಕಾಮದಹನವನ್ನು ಮಾಡುತ್ತಾರೆ. ಐದನೆಯ ದಿನ ಬಣ್ಣದ ಹಬ್ಬವನ್ನು ರಂಗ ಪಂಚಮಿ ಎಂದು ಆಚರಿಸುತ್ತಾರೆ. ಜೀವಂತ ಕಾಮದೇವ ಮತ್ತು ರತಿದೇವಿಯರನ್ನು ಕೂಡ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನೋಡಬಹುದು. ಕಣ್ಣು ಪಿಳುಕಿಸದೆ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದೆ ಅಲಂಕಾರಗೊಂಡ

“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡಪಾಟೀಲ್ Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಹೋಳಿಹಬ್ಬ” ಬಣ್ಣಗಳ ಸಮ್ಮಿಲನಹೋಳಿ ಹಬ್ಬದ ದಿನಮಿಂದೇಳುತ ಮೈ ಮನನೆನೆಯುತ ರಾಧೆ ಶಾಮನರಂಗಿನೋಕುಳಿ ಕಾಮ ದಹನತ್ಯಜಿಸು ಅರಿಷಡ್ವರ್ಗಗಳನ್ನ. ಬಣ್ಣದ ಹಬ್ಬವಿದುಸಂಭ್ರಮದ ಹೋಳಿಯಿದುರಂಗನು ಚೆಲ್ಲುತ ನಿಂದುಸಂತಸದಿ ನಲಿಯೋಣ ಮಿಂದುಒಂದಾಗಿಸಿ ಮನಗಳ ಇಂದುಎಲ್ಲೆಲ್ಲೂ ಉಲ್ಲಾಸವೆ ತುಂಬಿಹುದು. ಕೋಟೆಯ ಬಣ್ಣವ ನೋಡಿದೆಯಾರಂಗಿನೋಕುಳಿಯ ಆಡಿದೆಯಾಶಾಮನಿರಲು ರಾಧೆ ಬಾರೆಯಾನೀನಿರಲು ಸರಿಯದು ಸಮಯಎನ್ನುತ ಸ್ನೇಹಿತರ ಬಳಿ ಸಾರೆಯಾಏಳು ಬಣ್ಣಗಳ ಮನಸಾರೆ ಬೆರೆಸೆಯಾ. ಒಲವಿನ ಬಣ್ಣ ಚೆಲುವಿನ ಬಣ್ಣನವಿರಾದ ಭಾವ ಮೈಮನದೊಳಗಿಣ್ಣ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಹೋಳಿಹಬ್ಬ” Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಬಣ್ಣಗಳ ಬೆಡಗು” ನಿನ್ನ ಪ್ರೀತಿಯ ಮಿನುಗು ಕೆಂಪು ಬಣ್ಣದಲಿ ಮಿಂದ ಮನ ನಂದನವಾಯಿತುನಿನ್ನ ಸ್ನೇಹದ ಜಿನುಗು ಹಳದಿ ಬಣ್ಣದಲಿ ಮಿಂದ ಜೀವ ಬಂಧನವಾಯಿತು ಮುಗಿಲ ನೀಲಿ ಬಣ್ಣ ಸೇರುವ ಕನಸುಗಳಲಿ ಮೀಯುತ ಜೀವನ ಚೆಂದವಾಯಿತುನಗುವ ಹಸಿರು ಸಾಗರದಲಿ ಬೆರೆಯುತ ಮೌನಭಾವ ಆನಂದವಾಯಿತು ಕರುಣೆಯ ಕಡಲಿನ ಕೇಸರಿಯ ಅಲೆಯಲಿ ತೇಲಿದ ಬಾಳು ಸಿರಿಗಂಧವಾಯಿತುಒಲವಿನ ಹಣತೆಯ ಶ್ವೇತ ಬೆಳಕಿನ ಹೊನಲಲಿ ಬದುಕು ಚಂದನವಾಯಿತು ಮಳೆಬಿಲ್ಲ ಬಣ್ಣಗಳ ಬಾಂದಳದಿ ನಿತ್ಯ ಸತ್ಯ ಸಾಕ್ಷಾತ್ಕಾರ ಮಂದಾನಿಲಯವಾಯಿತುದೃಷ್ಟಿ ಬೊಟ್ಟಿನಂತೆ ಕಪ್ಪು ನಮ್ಮೀರ್ವರ ಜೊತೆ ಹೆಜ್ಜೆಗಳಿಗೆ ಅಂದವಾಯಿತು ಬಣ್ಣದ ಗರಿಬಿಚ್ಚಿ ಕುಣಿವ ನವಿಲಾಗಿ ಹೋಳಿಯ ರಂಗಿಗೆ  ಕೆನ್ನೆ ಗುಲಾಬಿ ಸಿಂಧುವಾಯಿತುಕಾಮನಬಿಲ್ಲಾಗಿ ಬಾಗಿ ಬಣ್ಣ ಭುವಿಗೆ ಮುತ್ತಿಡುವ ರೀತಿ ಪ್ರೀತಿಯ ಬಿಂದುವಾಯಿತು ಶಶಿ ಚೆಲ್ಲಿದ ಬೆಳ್ಳನೆಯ ಬಿಳಿನೊರೆ ಹಾಲ ಪ್ರೇಮ ಬೆಳದಿಂಗಳಲಿ ಕಂಗಳ ಕಾಂತಿ ಮಂದವಾಯಿತುನಿನ್ನ ನೇಹ ಕರಗಳ ಕರೆಯೇ ಕರಿಕಪ್ಪು ಕತ್ತಲಲಿ ಇಂದುವಿನ ಎದೆ ಬೆಳಕ ಇಂಧನವಾಯಿತು  ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ-15 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಕುಟುಂಬ ಕಲಹವದು ಕುದುರೆ ಕದನದಿಂದ… ಕುಟುಂಬ ಕಲಹವದು ಕುದುರೆ ಕದನದಿಂದ… ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಸರೋವರ” ಬಾಲ್ಯದ ಬೆಳಗಿನ ಹೊತ್ತಿನಲ್ಲಿನೀಲಿ ನೀರಿನ ನಿಶ್ಶಬ್ದ,ಪ್ರಶ್ನೆಯೇ ಅರಳದ ದಿನಗಳು,ಉತ್ತರವೇ ಕೇಳದ ಕಾಲ. ಆಕಾಶ ತಬ್ಬಿದ ಸರೋವರ,ಆಟದ ಕಲ್ಲು ಬಿದ್ದರೂನಗು ತೇಲಿ ಹೋದಿತುಮಸುಕು ಮನದವರೆಗೂ ತಲುಪಲಿಲ್ಲ. ಕಾಲ ನಡೆದು ದಾರಿಯಾದಂತೆಹೆಜ್ಜೆಗಳು ಬಂತು ಹಲವು,ಕೆಲವು ನೀರು ತಂದವು,ಕೆಲವು ಮಣ್ಣು ಸುರಿದವು. ನೋವುಗಳು ಇಳಿದವುನೀರಿನ ಆಳದೊಳಗೆ,ಮಾತಿಲ್ಲದೆ ಕುಳಿತವುಸರೋವರದ ಹೃದಯದಲ್ಲಿ. ಭೇದದ ಮೊದಲ ಸ್ಪರ್ಶಅಲೆ ಎಬ್ಬಿಸಿತು,ಹೊರಗೆ ಕದಲಿಕೆ,ಒಳಗೆ ಮೌನ ಗಾಯ. ಸರೋವರ ಮಾತಾಡಲಿಲ್ಲ,ಮೌನವೇ ಅದರ ನಾಡಿ,ಧ್ವನಿಯಿಲ್ಲದ ನೋವೇನೀರಿನ ಭಾಷೆ. ಸಮಾಜ ಬಂದು ನಿಂತುಬಣ್ಣ ಮಾತ್ರ ನೋಡಿತು,ಆಳ ಕೇಳದೆ ತೀರ್ಪುನೀರಿನ ಮೇಲೆ ಬರೆದಿತು. ಬಿರುಗಾಳಿ ಬೀಸಿದರೂನೀರನ್ನೇ ತಪ್ಪೆಂದರೂ,ಮೇಲ್ಮೈ ಕದಡಿದರೂಆಳ ಮಾತ್ರ ನಿಂತಿತು. ಸಂಧ್ಯದ ಹೊತ್ತಿನಲ್ಲಿನೀರು ಕಡಿಮೆಯಾಯಿತು,ಆಳ ಹೆಚ್ಚಾಯಿತು,ಅರ್ಥಗಳು ಗಾಢವಾದವು. ಅಲೆಗಳು ಮೌನವಾಯಿತು,ಹೇಳದ ಕಥೆಗಳುನೀರಿನೊಳಗೆನೆಲೆಯಾದವು. ಆಕಾಶ ಬಿದ್ದರೆ ಹಿಡಿಯುವೆ,ಹೂ ಬಿದ್ದರೆ ಕಾಪಾಡುವೆ,ಕಲ್ಲು ಬಿದ್ದರೂನೀರಾಗಿಯೇ ಇರುವೆ. ಮೌನ ಸರೋವರಕಲ್ಲುಗಳನ್ನು ಕ್ಷಮಿಸಿದ ನೀರು,ಬಿರುಗಾಳಿಗೆ ಸಾಕ್ಷಿಯಾದ ಆಳ,ತೋರಿಸದೆ ಹೊತ್ತ ನೋವು. ಮಾತಿಲ್ಲದೆ ಉಳಿದ ಸಹನೆ,ಒಡೆಯದೆ ನಿಂತ ಶಕ್ತಿಅದೇ ಬದುಕಿನಮೌನ ಸಾರ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸುಳ್ಳಿನ ಬಲೆ” ಸುಳ್ಳಿನ ಬಾಯಿಗೆಸಿಗಬಾರದುಯಾಕೆಂದರೆ ಸುಳ್ಳುಮೆರವಣಿಗೆಯಲ್ಲಿರಾಜಾರೋಷವಾಗಿಹೊರಡುವುದು.ಸತ್ಯದ ಬಟ್ಟೆಯುಟ್ಟುಸುಳ್ಳನ್ನು ಮೂಲೆಗೆ ಸರಿಸಿಮುನ್ನೆಯುವುದು,,,ಆದರೆಸತ್ಯ ಒಂಟಿಯಾಗಿನಿಲ್ಲುವುದು.ಸತ್ಯದ ಬೆಳಕಲ್ಲಿ ಇರಲಿನಮ್ಮ ಜೀವನ ಪಥಮೋಸದ ನೆರಳಿಗೆಮನ ಸಾಯಬಾರದು,ನಂಬಿಕೆಯ ಹೂವಿಗೆಸುಳ್ಳಿನ ಮುಳ್ಳುತಾಗಬಾರದುಸುಳ್ಳು ಸಿಹಿ ಮಾತುಹೊದಿಸಿ ಬರುವುದುಕೆಲವೊಮ್ಮೆ,ಸತ್ಯದ ಕಾಠಿಣ್ಯಕಲ್ಲಿನಂತೆ ತೋರುವುದುಕೆಲವೊಮ್ಮೆ.ಆದರೂ ಸತ್ಯವೇದೀಪವಾಗಿ ದಾರಿತೋರಿಸಬೇಕುಆದರೆಸುಳ್ಳು ಮುಖವಾಡಧರಿಸಿ ಕೇಕೆ ಹಾಕುವುದುಅಸತ್ಯದ ಅಂಧಕಾರನಮ್ಮ ಹಾದಿಕೊನೆಯಾಗಬಾರದುಸುಳ್ಳಿನ ನಗುವಿಗೆಮನವುಮರುಳಾಗಬಾರದು,ಸ್ವಾರ್ಥದ ಸುಳಿಯಲ್ಲಿಸತ್ಯ ಮುಳುಗಬಾರದು.ನಿಷ್ಕಳಂಕ ಹೃದಯದಶುದ್ಧ ಶಪಥ ಇರಲಿ,ನೀತಿಯ ನಾದವುನಿತ್ಯ ನಮ್ಮೊಳಗೆ ಹರಡಲಿ.ಸುಳ್ಳು ಕ್ಷಣಿಕ ಮೋಡ,ಸತ್ಯ ಚಿರಂತನ ಆಕಾಶ,ಅದು  ಮುಸುಕಿದ  ಮರೆಸತ್ಯವೇ ಕೊನೆಯ ಪ್ರಕಾಶ.ಆದ್ದರಿಂದ ಜೀವದಪ್ರತಿಯೊಂದು ಹೆಜ್ಜೆಸುಳ್ಳಿನ ಬಾಯಿಗೆಸಿಗದಿರಲಿ ನಮ್ಮ  ಮಾತುಸತ್ಯ ಮೇವ ಜಯತೆ.ಸುಳ್ಳು ಸರಿಯಲಿಹಿಂದೆ ಹಿಂದೆ ಹಿಂದೆ… ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು”

ಕಾವ್ಯ ಸಂಗಾತಿ ಮಮತಾ ಜಾನೆ “ಅಮ್ಮನ ಮಡಿಲು” ನವಮಾಸವ ಹೊರುವಳುಸಾಟಿ ಇಲ್ಲದ ಪ್ರೀತಿ ತೋರುವಳುಮಮತೆಯ ಸಾಗರದವಳುಕರುಣೆಯ ಗಣಿಯವಳು ಮೊದಲ ಗುರು ಆಗುವಳುಜೀವನ ದಾರಿ ತೋರಿಸುವಳುಧೈರ್ಯವ ತುಂಬುತ ನಡೆಸುವಳುಆತ್ಮವಿಶ್ವಾಸದಿ ಸದಾ ಸ್ಪರ್ಶಿಸುವಳು ಕಣ್ಣೀರು ಒರೆಸಿ ದುಃಖವ ಮರೆಸುವಳುಸಂತೋಷದ ಸಂಗಾತಿಯವಳುತಪ್ಪಿದರೆ ತಿದ್ದಿ ಬುದ್ಧಿ ಹೇಳುವಳುಬದುಕಿಗೆ ಅರ್ಥ ನೀಡುವಳು ಮಕ್ಕಳ ಜೀವನದ ಕನಸು ಕಟ್ಟುವಳುನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳುಸದಾ ತ್ಯಾಗದ ಮೂರ್ತಿಯವಳುತನ್ನ ಬದುಕೆ ಮುಡಿಪಾಗಿಟ್ಟವಳು ಕಷ್ಟವೋ ಸುಖವೋ ಲೆಕ್ಕಿಸದವಳುಸ್ವಾರ್ಥವ ಇಲ್ಲದ ನಿಸ್ವಾರ್ಥ ಗುಣದವಳುನಿತ್ಯ ಜೀವನದ ಶಕ್ತಿಯವಳುಹೊಗಳಲು ಪದಗಳೇ ಸಾಲದವಳು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು” Read Post »

You cannot copy content of this page

Scroll to Top