ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಚಿವುಟಿದಷ್ಟು ಚಿಗುರುವ ರೀತಿಯು
ನಿನ್ನದಾಗಲಿ ಮನವೆ
ಕವಿಯುವ ಕತ್ತಲ ಹಾದಿಯಲಿ
ದೀಪವಾಗು ಮನವೆ//

ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯ
ಹಾಕದಿರು ತನುವೆ
ಅವಿತಿಹ ಧೈರ್ಯವ ಹೊರಗೆ ಎಳೆದು
ಬಾಳುತಿರು ಸುಮವೆ//

ಛಲವದು ಇದ್ದರೆ ಚಿವುಟಿದ ಹಾಗೆ
ಚಿಗುರುವೆ ನೀಗಿಡವೆ
ಒಲವನು ಬದುಕಲಿ ಅನುಕ್ಷಣ ತೋರುತ
ಸಾಗುತಿರು ಬಲವೆ//

ಚುಚ್ಚುವ ಮಾತಿಗೆ ಇರಿಯುವ ನುಡಿಗೆ
ಅಳುಕದಿರು ಎಂದೂ
ಹಚ್ಚು ಎಲ್ಲರ ಮನದಲಿ ಸಮತೆಯ
 ಹಣತೆಯ ನೀ ಮುಂದೂ//

ಗೋಳನು ಹೊಯ್ಸುತ ಖುಷಿಯ ಪಡುವರು
ಕುಹಕದ ಜನರಿಲ್ಲಿ
ಗಾಳವ ಹಾಕುತ ಸಿಕ್ಕಿಸಿ ಹಾಕಲು
ಕಾಯುವ ಸ್ಥಿತಿಯಿಲ್ಲಿ//

ಕಮರದೆ ಕುಂದದೆ ಬಾಡಿ ಹೋಗದೆ
ಬೆಳೆಯೋ ಬದುಕಲ್ಲಿ
ವಿಮಲ ಚರಿತಗೆ ಸಕಲವ ಒಪ್ಪಿಸಿ
ಶರಣಾಗು ಬಾಳಲ್ಲಿ//


About The Author

Leave a Reply

You cannot copy content of this page

Scroll to Top