ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರೆಯಲಾಗದ ಕವಿತೆಯೊಂದು
ಮನದ ಒಳಗಡೆ ಕುಳಿತಿದೆ
ಪುಟಿಯೋ ನೆನಪು ಯಾಕೊ ಇಂದು
ಮೌನ ಕದವ ಬಡಿದಿದೆ

ಪುಟ್ಟ ಪುಟ್ಟ ಹೆಜ್ಜೆ ಗುರುತು
ಹೃದಯ ನೆಲದೊಳು ಉಳಿದಿದೆ
ಬಾಲ್ಯದಾಟ  ನಗುವಿನೂಟ
ಅಣಕವಾಡಿ ನಗುತ್ತಿದೆ

ಭಾವವಿರದ ಟೊಳ್ಳು ಪದಗಳ
ಗಂಟಲೇಕೋ ಉಗುಳಿದೆ
ನಗುವೇ ಬಿರಿಯದ ತುಟಿಗಳಿಂದು
ಮೌನ ಬಯಸಿ ಬಿದಿದಿದೆ

ನೋವಿನಲೆಗಳ ಹೊಡೆತಕ್ಕೀಗ
ಮನದ ದಡಗಳು ಕೊರೆದಿವೆ
ಒಡಲಿನಾಳದ ಬೆಂಕಿ‌ಜ್ವಾಲೆಗೆ
ನವಿರು ಭಾವ ಸತ್ತಿದೆ

ಜೊತೆಲಿ ಬೆರೆತು ಮನೆಯ ಕಟ್ಟಿದ
ಮುಗ್ಧ ಪ್ರೀತಿ ಎಲ್ಲಿದೆ?
ಮನದ ನಡುವಣ ಗೋಡೆ ಮಾತ್ರ
ಎತ್ತರೆತ್ತರಕ್ಕೇರಿದೆ!!


About The Author

1 thought on “ಲೀಲಾಕುಮಾರಿ ತೊಡಿಕಾನ ಅವರ ಭಾವಗೀತೆ”

Leave a Reply

You cannot copy content of this page

Scroll to Top