ಕಾವ್ಯ ಸಂಗಾತಿ
ಮಮತಾ ಜಾನೆ
“ಅಮ್ಮನ ಮಡಿಲು”


ನವಮಾಸವ ಹೊರುವಳು
ಸಾಟಿ ಇಲ್ಲದ ಪ್ರೀತಿ ತೋರುವಳು
ಮಮತೆಯ ಸಾಗರದವಳು
ಕರುಣೆಯ ಗಣಿಯವಳು
ಮೊದಲ ಗುರು ಆಗುವಳು
ಜೀವನ ದಾರಿ ತೋರಿಸುವಳು
ಧೈರ್ಯವ ತುಂಬುತ ನಡೆಸುವಳು
ಆತ್ಮವಿಶ್ವಾಸದಿ ಸದಾ ಸ್ಪರ್ಶಿಸುವಳು
ಕಣ್ಣೀರು ಒರೆಸಿ ದುಃಖವ ಮರೆಸುವಳು
ಸಂತೋಷದ ಸಂಗಾತಿಯವಳು
ತಪ್ಪಿದರೆ ತಿದ್ದಿ ಬುದ್ಧಿ ಹೇಳುವಳು
ಬದುಕಿಗೆ ಅರ್ಥ ನೀಡುವಳು
ಮಕ್ಕಳ ಜೀವನದ ಕನಸು ಕಟ್ಟುವಳು
ನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳು
ಸದಾ ತ್ಯಾಗದ ಮೂರ್ತಿಯವಳು
ತನ್ನ ಬದುಕೆ ಮುಡಿಪಾಗಿಟ್ಟವಳು
ಕಷ್ಟವೋ ಸುಖವೋ ಲೆಕ್ಕಿಸದವಳು
ಸ್ವಾರ್ಥವ ಇಲ್ಲದ ನಿಸ್ವಾರ್ಥ ಗುಣದವಳು
ನಿತ್ಯ ಜೀವನದ ಶಕ್ತಿಯವಳು
ಹೊಗಳಲು ಪದಗಳೇ ಸಾಲದವಳು
ಮಮತಾ ಜಾನೆ



