ಕಾವ್ಯ ಸಂಗಾತಿ
ನಿರಂಜನ ನಾಯಕ
“ಹಗೆಯ ಸುಳಿ”


ಮಿತಿಯನು ನಾವು ಮೀರುವುದು ಯಾವಾಗ?
ಮಾನವೀಯತೆಯು ಮಣ್ಣಾದಾಗ!
ಹಗೆತನಕೆ ಮುಕ್ತಿ ದೊರೆಯುವುದು ಯಾವಾಗ?
ನೆತ್ತರು ಹೊಳೆಯಾಗಿ ಹರಿದಾಗ!
ಯಾವ ವಿಷವೃಕ್ಷದ ಕಟುಫಲವಿದು?
ಒಡಲೊಳು ದ್ವೇಷದ ಬೀಜವೇ ತುಂಬಿಹುದು.
ಗಡಿಯ ಗೋಡೆಯ ಒಡೆಯುವ ಹಂಬಲವ ಬಿಟ್ಟು,
ಬಂಧನ ಬಿಗಿಯಾಗುತ ಸಾಗಿಹುದು!
ಮುಳ್ಳಿನ ನಡುವೆ ನಗುವ ಗುಲಾಬಿಯ,
ಕಪಟದ ಒಳಮರ್ಮ ಅರ್ಥವಾಗದಿರದು!
ನಿರಂಜನ ನಾಯಕ



