ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಮನೋಮಂಥನ ” ಡಿ.ನಳಿನಾ ಅವರ ವ್ಯಕ್ತಿತ್ವದ ವಿಕಸನದ ಕೃತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಮಕ್ಕಳ ಮನೋ ವೈಜ್ಞಾನಿಕ ಅಂಕಣಗಳ ಸಂಕಲನ ಮೈಸೂರು ಆನಂದಿ ಪ್ರಕಾಶನವು ೨೦೨೫ ರಲ್ಲಿ ಪ್ರಕಟಿಸಿದೆ.” ಇಂದೀನ ಮಕ್ಕಳೆ ನಾಳಿನ ಪ್ರಜೆಗಳು. ಆರೋಗ್ಯವಂತ ಸಮಾಜ ರೂಪು ಗೊಳ್ಳಲು ಆರೋಗ್ಯವಂತ ಸಮಾಜ ತತ್ಪರವಾಗಿರಬೇಕು. ಅದಕ್ಕಾಗಿಯೇ ವೇದಗಳಾದಿಯಾಗಿ ಯೋಗಿಗಳು, ಋಷಿಮುನಿಗಳು, ಪ್ರಾಜ್ಞರು, ಪಂಡಿತರು, ಸಂಶೋಧಕರು, ವಿಜ್ಞಾನಿಗಳು, ಸಮಾಜಸುಧಾರಕರು, ಶಿಕ್ಷಕರು ನಿರಂತರ ದುಡಿಯುತ್ತಿದ್ದಾರೆ ಭಾರತೀಯ ಯೋಗ ಪರಂಪರೆಯ ಯಮ ನಿಯಮ  ಜನರ ಅಂತರಂಗ ಬಹಿರಂಗ ಶುದ್ಧಿಗೆ ಸಹಕರಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಸುವಿಖ್ಯಾತ  ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರರ ಮೌಲಿಕ ಮುನ್ನುಡಿ  ಪುಸ್ತಕ ಕನ್ನಡಿಯಾಗಿದೆ.
 ಪ್ರಸ್ತುತ ಮನೋಮಂಥನ ಗ್ರಂಥದಲ್ಲಿ -ಜವಾಬ್ದಾರಿಯ ಮಕ್ಕಳು, ಕುಟುಂಬ ಮೌಲ್ಯಗಳು ಬೆಳೆಯಲಿ, ಮಕ್ಕಳ ಜಾಹೀರಾತು, ಮಕ್ಕಳನ್ನು ಬಯಲಿಗೆ ಒಡ್ಡಿ, ಮಕ್ಕಳಿಗೆ ಅವಮಾನ ಅನಿಸಿದರೆ ನಿಲ್ಲಿಸಿ, ಮಕ್ಕಳಿಗೆ ಕೋಟು ಹಾಕಿಸುವ ಪರಿಣಾಮ, ಮಕ್ಕಳಿಗೆ ವರ್ತನೆ ಕಲಿಸಿ, ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸಿ, ಶಿಕ್ಷಕರು ಗೇಲಿ ಮಾಡಬಾರದು, ತಂದೆಗೆ ಇದು ಗೊತ್ತಿರಲಿ, ವಿವೇಚನೆಯೇ ಮದ್ದು, ಆರೋಗ್ಯಕರ ಸಂಬಂಧ ಬೆಳೆಸಿ, ಮಕ್ಕಳ ಸ್ನೇಹಿ ಪಾಲಕರಾಗಿ, ಮಕ್ಕಳಲ್ಲಿ ಮೌಲ್ಯ ಬೆಳೆಸೋಣ,ಮಕ್ಕಳ ಮನಸ್ಸು ಅರಿಯೋಣ, ಬೆಳೆವ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ, ಮಕ್ಕಳ ಮನೋಬಲ ವೃದ್ಧಿಸಿ, ಮಕ್ಕಳ ನ್ನು ಮುಕ್ತವಾಗಿ ಬೆಳೆಯಲು ಬಿಡಿ, ಮಕ್ಕಳೇ ಮನೆ ಬೆಳಕು, ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಮಕ್ಕಳಿಗೆ ಬೇಕಿದೆ ಆಸರೆ, ಕುಟುಂಬದ ಸಾಮರ್ಥ್ಯವೇ ಸದಸ್ಯರ ನೈತಿಕ ಶಕ್ತಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು, ಮಕ್ಕಳ ಶ್ರಮ ಗೌರವಿಸಿ, ಮಕ್ಕಳ ಮನಸ್ಸನ್ನು ಗೆಲ್ಲಿ, ಮಕ್ಕಳಲ್ಲಿ ದ್ವೇಷ ಬಿತ್ತ ಬಾರದು, ಏಕಾಗ್ರತೆ ವಿದ್ಯಾರ್ಥಿ ಹಂತ ದಲ್ಲಿ ಬೆಳಕು, ಮಕ್ಕಳಲ್ಲಿನ ಕುತೂಹಲ ತಣಿಸಬೇಕು, ಮಕ್ಕಳಲ್ಲಿ ಎದೆಗಾರಿಕೆ ಬೆಳೆಸುವುದು ಹೇಗೆ?, ಪರೀಕ್ಷೆ ಬರೆಸೋಣ ಧೈರ್ಯವಾಗಿ, ಮಕ್ಕಳ ಮೇಲೆ ನಿಗಾ ಇರಲಿ, ಮಕ್ಕಳನ್ನು ಥಳಿಸದೇ ಕಲಿಸುವ ಜಾಣ್ಮೆ, ಮಕ್ಕಳ ಮೇಲೆ ಕರುಣೆ ಉಕ್ಕಲಿ, ಮಕ್ಕಳು ನಿರೀಕ್ಷಿಸುವ ಗುಣಗಳು ನಮ್ಮಲ್ಲಿ ಇರಲಿ,ಮಕ್ಕಳಿಗೆ ಸಾಹಿತ್ಯದ ಪುಸ್ತಕ ಓದಲು ಕಲಿಸಿ, ಆನಲೈನ್ ವಂಚನೆ ಮಕ್ಕಳನ್ನು ಬಾಧಿಸದಿರಲಿ, ಮಕ್ಕಳಲ್ಲಿ ಸಭಾಕಂಪನ ತೊಲಗಿಸಲು ಶ್ರಮಿಸಿ, ಮಕ್ಕಳನ್ನು ನೀರಿನೊಂದಿಗೆ ಚೆಲ್ಲಾಟಕೆ ಬಿಡಬೇಡಿ, ಮಕ್ಕಳು ಜೀವನ್ಮಖತೆ ಮೈಗೂಡಿಸಿಕೊಳ್ಳಲು ಸಹಕರಿಸಿ, ಶಾರ್ಟ್ ಕಟ್ – ಕಟ್ ಕಟ್, ಮಕ್ಕಳನ್ನು ಟಾರ್ಗೆಟ್ ಮಾಡಬಾರದು, ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿ, ಮಕ್ಕಳಲ್ಲಿ ಪರೀಕ್ಷಾ ಭೀತಿ ತೊಲಗಿ ಸುವುದು ಹೇಗೆ ?, ಮಕ್ಕಳಿಗೆ ಶಾಲೆಯ ಸಾಮಾಜಿಕ ಜೀವನ ಅಗತ್ಯ, ಶಿಸ್ತು ಶಿಕ್ಷೆ ಆಗಬಾರದು,ಹಾರ್ಮೋನ್ಸ್ ಬದಲಾ ವಣೆ- ಬೇಕು ತಿಳುವಳಿಕೆ, ಮಕ್ಕಳಿಗೆ ಪಾಲಕರೆ ಆದರ್ಶ, ವಿಶೇಷ ಚೇತನರ ಮೇಲೆ ಗೌರವ- ಪ್ರೀತಿ ಅಚ್ಚಳಿಯ ದಂತಿರಲಿ,ಮಕ್ಕಳಿಗೆ ಸಂಸ್ಕೃತಿ ಕಲಿಸ ಲೇಬೇಕಾದ ಅನಿವಾರ್ಯತೆ, ಮಕ್ಕಳೆದುರು ಪಾಲಕರು ಮೋಬೈಲ್ ದೂರವಿರಿಸಿ,ಹುಡುಗಾಟದಿಂದ ಭವಿಷ್ಯ ಬಡಿದಾಟ,ಹರೆಯದ ವಿದ್ಯಾರ್ಥಿಗಳ ನಡುವೆ ಸಲುಗೆ ಸಲ್ಲ, ಮಕ್ಕಳಲ್ಲಿ ಕಲಾಭಿರುಚಿ, ಮಕ್ಕಳಿಗೆ ಕಣ್ಣೀರು ಹಾಕಿಸಬಾರದು, ಬೇಸಿಗೆ ರಜೆ ಹಾಯಾಗಿರಲಿ, ಬಿಸಿಲು ಜಾಗ್ರತೆ ಅವಶ್ಯ, ದೇಹ ರಕ್ಷಣಾ ಕೌಶಲ್ಯ ತರಬೇತಿ  ಅಗತ್ಯ, ಡ್ರಗ್ಸ್ ವಿಷವುಣಿಸುವ ವರಿದ್ದಾರೆ ಎಚ್ಚರ!, ಪರೀಕ್ಷೆ ದಿಟ್ಟತನ ದಿಂದ ಎದುರಿಸೋಣ, ಪರೀಕ್ಷಾ ಫೋಬೀಯಾ ಓಡಿಸಿ,ಮಕ್ಕಳ ಆದ್ಯತೆಗೆ ಗಮನವಿರಲಿ, ಮಕ್ಕಳನ್ನು ಗ್ರಾಮದ ಅನುಭವಗಳಿಗೆ ಒಡ್ಡಿ, ಮಕ್ಕಳಿಗೆ ವಿವೇಚನೆಯಿಂದ ತಿನ್ನಿಸಿ, ಮಕ್ಕಳು  ಫೇಲಾದರೆ ಅವರ ತಪ್ಪೇ ?, ಪಾಲಕರೆ ಅಪ್ರಾಪ್ತರಿಗೆ ವಾಹನ ನೀಡದಿರಿ, ಶಿಕ್ಷಣ ಉದ್ಯಮದೊಳಗೆ ಪಾಲಕರು ಕಂಗಾಲು ಮುಂತಾದ ಎಪ್ಪತ್ತೊಂದು ಸೊಗಸಾದ ಬರಹಗಳಿವೆ.”ಶ್ರೀಮತಿ ನಳಿನಾ ಅವರು ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಂತೆ; ಪುಟ್ಟ ಪುಟ್ಟ ಲೇಖನಗಳ ಸರಮಾಲೆ ಯನ್ನು ಸಿದ್ದಪಡಿಸಿ, ಮನೋಮಂಥನ ಸುಂದರ  ಪುಸ್ತಕವನ್ನು ಕೈಗಿತ್ತಿದ್ದಾರೆ.” ಓದುವುದೇ ಚೇತೋಹಾರಿ ಅನುಭವ. ಬರವಣಿಗೆ ಸರಳ ಸಹಜ ಸುಂದರ ವಾಗಿ ಬಂದಿದೆ.ಮಕ್ಕಳು ಮಾತ್ರವಲ್ಲ, ಪಾಲಕರು, ಶಿಕ್ಷಕರು, ಅಧಿಕಾರಿ ವರ್ಗ, ಆಡಳಿತ‌ ಮಂಡಳಿಯವರು ಓದ ಲೇಬೇಕಾದ ಮಹತ್ವದ ಲೇಖನಗಳ ಗೊಂಚಲಿದು. ನಳಿನ ರಸವತ್ತಾಗಿ ಬರೆದಿದ್ದಾರೆ. ಘಟನೆಗಳು ಹೃದಯ ತಟ್ಟುತ್ತ್ತವೆ. ನಿರೂಪಣಾ ಶೈಲಿಯು ಚಿತ್ತಾಕರ್ಷಕವಾಗಿದೆ. ಪಾಲಕರ ಜವಾಬ್ದಾರಿ, ಶಿಕ್ಷಕರ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ರಹದಾರಿಯಾಗು ವಂತಹ ಕೃತಿ. “ಮನೋಮಂಥನ ಇಂದಿನ ಕಾಲದ ಪಾಲಕರ ಕೈಪಿಡಿಯಾಗಿ ರೂಪು
ಗೊಂಡಿದೆ. ವರ್ತಮಾನದಲ್ಲಿ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ತ್ರೀಕೋನೀ ಯ ಸಂಬಂಧಿತ ಸವಾಲುಗಳನ್ನು ಸಮಸ್ಯೆಗಳನ್ನು ಪರಿಹಾರಗಳನ್ನು ಬಹಳ ಆಪ್ತತೆಯ ದೃಷ್ಟಿಯಿಂದ ಮಾತೃ ವಾತ್ಸಲ್ಯದ ಕಕ್ಕುಲಾತಿಯಿಂದ ನೀಡ ಲಾಗಿದೆ.” ಎಂಬ ಯೋಗಿ ದೇವರಾಜ ಅವರ ಅಭಿಪ್ರಾಯವು ಪ್ರಸ್ತುತ ಪುಸ್ತಕದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.” ಕಳೆದ ಹದಿನೈದು ವರ್ಷಗಳ ಹಿಂದಿನಿಂದಲೂ ನಳಿನಾ ಅವರ ಬರಹಗಳು ಮಾನವೀಯ ಮೊರೆತವನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ತುಡಿಯುತ್ತಿವೆ.ಇಂತಹ ಸಕಾರಾತ್ಮಕ ಕೃತಿಗಳು ನಾಡಿನ ಪಾಲಕರ ಕೈಗೆ ತಲುಪಿ, ಮಕ್ಕಳ ಬದುಕು ಹಸನಾಗಲಿ” ಎಂದು ಹಾರೈಸಿದ್ದು ಸಮಂಜಸವಾಗಿದೆ.ಸದಾ ಲೋಕಕಲ್ಯಾಣದ ಚಿಂತನೆಗಳಿಂದ ಕೆಲಸ ಮಾಡುವ ಲೇಖಕಿ, ನಳಿನಾ ಅವರ ಮನೋಮಂಥನ ಮಕ್ಕಳ ಮನೋವಿಕಾಸಕೆ ರಹದಾರಿಯಾಗಲಿ.
  ಡಾ. ಅಶೋಕ ನರೋಡೆ


About The Author

1 thought on “ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ”

Leave a Reply

You cannot copy content of this page

Scroll to Top