ಕಾವ್ಯ ಸಂಗಾತಿ
ಡಾ.ವೈ.ಎಂ ಯಾಕೊಳ್ಳಿ
“ನಾವಂದುಕೊಂಡಂತಲ್ಲ….”


ನಾವಂದಂತೆ
ಬದುಕಲಾಗದಾದಾಗ
ಬದುಕು ಬಂದಂತೆ
ಬದುಕಬೇಕು
ನಮ್ಮ ಆಸೆಗಳಿಗೆ
ಅವಕಾಶವಿಲ್ಲದಾಗ
ಜಗತ್ತಿ ಆಸೆಗಳ ಜೊತೆ
ನಾವು ಸಾಗಬೇಕು
ನಮ್ಮಿಚ್ಛೆಗಳನಷ್ಟೇ
ಪೂರೈಸಲೆಂದು ಬಂದಿಲ್ಲ
ಎಲ್ಲರಿಗೂ ತುಸು
ಸಮಯವಿತ್ತು ಕಾಯಬೇಕು
ಜಗವು ಸ್ಪರ್ಧೆಯ
ಕಣವಷ್ಟೇ ಅಲ್ಲ
ಹೊಂದಾಣಿಕೆಯೂ
ಬಾಳಿನ ಸೂತ್ರವಾಗಬೇಕು
ಎಲ್ಲ ನಾನೆ ಗೆಲ್ಲಲಿ
ಎನ್ನುವದು ಸರಿಯಲ್ಲ
ಕೆಲವೊಮ್ಮೆ ನಾವೂ ನೂ
ಸೋಲಿನ ಸವಿಯ
ಅನುಭವಿಸಬೇಕು
ಡಾ.ವೈ.ಎಂ.ಯಾಕೊಳ್ಳಿ




ನೈಜ ಘಟನೆಗಳಿಗೆ ಕಾವ್ಯದ ರೂಪ. ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು
ನೈಜ ಘಟನೆಗಳಿಗೆ ಕಾವ್ಯದ ರೂಪ .ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು
ಬದುಕಿನ ಸತ್ಯಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸಿದ್ದೀರಿ ಧನ್ಯವಾದಗಳು ಸರ್