ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ಒಲವಿನ ಉಡುಗೊರೆ”


ಜೀವನವೆಂಬುದು
ದೇವರು ಕೊಟ್ಟ ಕೊಡುಗೆ
ಕಳೆಯುವ ಪ್ರತಿಕ್ಷಣವೂ
ಒಲವಿನ ಉಡುಗೊರೆ
ಹುಟ್ಟಿ ಬಂದ ಈ ಜಗಕೆ
ಕೊಟ್ಟು ಹೋಗುವುದು ಬೆಟ್ಟದಷ್ಟಿದೆ
ಉಣಲು ಮುದ್ದೆ,ನೆಮ್ಮದಿಯ ನಿದ್ದೆ
ಸದ್ಗುಣಗಳಿಂದ ಗೆದ್ದು ಬೀಗಬೇಕು
ಮನವೆಂಬ ವನದಲ್ಲಿ
ಪ್ರೀತಿ, ಪ್ರೇಮ,ಪ್ರೇರಣೆ
ಪ್ರಾಮಾಣಿಕತೆ,ಪರಿಶ್ರಮ,ಉತ್ಸಾಹದ
ಬೀಜಗಳ ಬಿತ್ತಿ ಬೆಳೆಯಬೇಕು
ಬದುಕಿನ ಪಯಣದಲಿ
ಏರಿಳಿತಗಳನು ಸ್ವೀಕರಿಸಿ
ಸೋಲು,ಗೆಲುವಿನ ಸೋಪಾನದಿ
ಸಾಧನೆ ಶಿಖರವೇರಬೇಕು
ಸುಖ-ದುಃಖಗಳನು ಮರೆತು
ಮಾನವೀಯ ಮೌಲ್ಯಗಳನರಿತು
ದಿವ್ಯತೆಯ ದಾರಿಯಲಿ
ಭವ್ಯತೆಯ ಬಾಳು ಬೆಳಗಬೇಕು
ಪ್ರೀತಿಸುವರೆಷ್ಟೋ,ದ್ವೇಷಿಸುವರೆಷ್ಟೋ
ಕೆಡಿಸಿಕೊಳ್ಳದೆ ಮನದ ಮತಿ
ವಿಶಿಷ್ಟ ವಿಚಾರ,ಆಚಾರಗಳಿಂದ
ಅರೆಕ್ಷಣ ಅರಿತುಕೊಳ್ಳಬೇಕು
ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ




ಸುಂದರವಾದ ಕವಿತೆ ಮೇಡಂ