ಕಾವ್ಯ ಸಂಗಾತಿ
ಎಮ್.ಎಚ್.ಹಾಲ್ಯಾಳ
ಗಜಲ್


ಅವರಿವರ ಮಾತಿಗೆ ನೊಂದು ದು:ಖಿಸದೆ ಮುಂದೆ ಸಾಗು
ಬರುವ ಕಷ್ಟಗಳನೆದುರಿಸಿ ಗುರಿ ಸಾಧನೆಗೆ ಮುಂದೆ ಸಾಗು..
ಸರಿ ದಾರಿ ಕಾಣದೆಂದು ಧೃತಿಗೆಟ್ಟು ಸೋತು ಮರಳಿ ಬಾರದೆ
ಹೊಸ ದಾರಿ ಶೋಧಿಸಿ ಸಾಧನೆಗಾಗಿ ಮುಂದೆ ಸಾಗು..
ಬಾಳಿನಲಿ ಬರುವ ಗೋಳಿನುರಿಗೆ ಬಲಿಯಾಗದೆ ನಡೆದು
ಭವದ ಬಂಧನ ಕಳಚಿ ಅಂತಿಮ ಸತ್ಯ ಹುಡುಕುತ ಮುಂದೆ ಸಾಗು..
ಸೋಲುವೆನೆಂಬ ಭಯ ಬಿಟ್ಟು ಗೆಲುವಿನ ಹಾದಿ ಹಿಡಿದು
ಛಲದಂಕ ಮಲ್ಲನಂತೆ ಬಾಳ ಗೆಲುವು ಸಾಧಿಸುತಾ ಮುಂದೆ ಸಾಗು..
ಮುಳುಗಿದ ಸೂರ್ಯ ಮತ್ತೆ ಉದಿಸಿ ಬರುವ ಸತ್ಯವನರಿತು
ಈ ಶಾಂತಿದೂತನ ನಂಬುತಾ ಹೆದರದೆ ಮುಂದೆ ಸಾಗು..
ಎಮ್.ಎಚ್.ಹಾಲ್ಯಾಳ




ಇದರಲ್ಲಿ ಕಾಫಿಯಾನೇ ಇಲ್ಲವಲ್ಲ ಸರ್ ಜೀ, ಇದು ಹೇಗೆ ಗಜಲ್ ಆಗುತ್ತದೆ.