ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗವು ಉರಿಯುತಿದೆ ಜೀವಿಗಳು ನರಳುತಿವೆ ನೀ ಸುಮ್ಮನಿರುವಿ
ಹೃದಯಗಳು ಬೆಂಕಿಯಲಿ ಬಿದ್ದು ಬೇಯುತಿವೆ ನೀ ಸುಮ್ಮನಿರುವಿ

ಕಂದಮ್ಮಗಳು ಹುಡುಕುತಿವೆ  ಹೆತ್ತವರನು ನೆತ್ತರಿನಲಿ ನೋಡು
ದೀನರು ಕಂಡ ಕನಸುಗಳು ಮಣ್ಣಾಗುತಿವೆ  ನೀ ಸುಮ್ಮನಿರುವಿ

ವಿಶ್ವದಲ್ಲಿ ನಾನೆಂಬ ಅಹಂಕಾರದ ಕಹಿ ಕಳೆಯು ಬೆಳೆಯುತಿದೆ
ನಂಬಿದ  ದೈವಗಳೆಲ್ಲಾ ಸಾಯುತಿವೆ ನೀ ಸುಮ್ಮನಿರುವಿ

ನಿತ್ಯ ಉರುಳುತಿವೆ ರಾಶಿ ಹೆಣಗಳು ಅಂತ್ಯಕ್ರಿಯೆ ಇಲ್ಲದೆಯೇ
ಭೂಮಂಡಳದಲಿ ಮಸಣಗಳು ಬೆಳೆಯುತಿವೆ ನೀ ಸುಮ್ಮನಿರುವಿ

ಪ್ರೀತಿಯಲಿ ಎಲ್ಲರನು ಬಂಧಿಸುವ ಶಕ್ತಿಯು ನಿನಗಿದೆ ಪ್ರಭೆ
ದ್ವೇಷ ಅಸೂಯೆಯ ಬಾಂಬುಗಳು  ಸಿಡಿಯುತಿವೆ  ನೀ ಸುಮ್ಮನಿರುವಿ


About The Author

Leave a Reply

You cannot copy content of this page

Scroll to Top