ಕಾವ್ಯ ಸಂಗಾತಿ
ಪರವಿನಬಾನು ಇ. ಯಲಿಗಾರ
“ನೀನು ನೀನೇ”


ಏನೆಂದು ಬಣ್ಣಿಸಲಿ ನಿನ್ನ ….?
ಹೇಗೆಲ್ಲ ವರ್ಣಿಸಲಿ ನಿನ್ನ ….?
ಸೂರ್ಯನೆನ್ನಲೇ ? ಅಬ್ಭಾ ! ಕಡು ಕೋಪದಲ್ಲಿ ಸುಡುವವನು ,
ಇರುಳಲಿ ಮರೆಯಾಗುವವನ ನಿನಗೆ ಹೇಗೆ ಹೋಲಿಸಲಿ ,
ತಂಪೆರೆಯುವ ಶೀತಲ ತಂಗಾಳಿ ನೀ ,
ಎಂದೂ ಮರೆಯಾಗದ ಬಂಧು ನೀ …..
ಚಂದ್ರನೆನ್ನಲೇ ? ಅಯ್ಯೋ ! ಅವನಿಗೂ ಗ್ರಹಣ ಬಾಧಿಸುವುದಲ್ಲ ,
ಅಮವಾಸ್ಯೆಯಲಿ ಮಂಕು ಕವಿಯುವವನ ನಿನಗೆ ಹೇಗೆ ಹೋಲಿಸಲಿ ? ಕಲೆಗಳೇ ಇಲ್ಲದ ಶುಭ್ರ ಶ್ವೇತ ಮನಸಿಜ ನೀ ,
ಸದಾ ಪಾದರಸ ….
ಸಾಗರವೆನ್ನಲೇ ? ಛೇ ! ಅದು ಉಕ್ಕುವುದು ನಿಷ್ಕರುಣಿಯಂತೆ , ಕೆಲವೊಮ್ಮೆ ಕೆರಳುವುದು
ರುದ್ರನಂತೆ . ಹೇಗೆ ಹೋಲಿಸಲಿ ? ಶಾಂತ ಸಿಹಿ ನೀರಿನ ಸರೋವರ ನೀ , ಎಲ್ಲರನೂ ಪೊರೆದು ಪಾವನಗೋಳಿಸುವ ,
ಅಂತರ್ಜಲ ನೀ ….
ಗಾಳಿ ಎನ್ನಲೇ ? ಅಬ್ಬಬ್ಬಾ ! ನೋಡನೋಡುತ್ತಿದ್ದಂತೆ ಬಿರುಗಾಳಿ ,
ಸುಂಟರ ಗಾಳಿಯಾಗಿ ಉಸಿರೇ ಕಸಿಯುವುದು , ಹೇಗೆ ಹೋಲಿಸಲಿ ? ನೀ ದೇಹದೊಡನಾಡುವ ,
ಹೃದಯ ಮಿಡಿಯುವ , ಜೀವ ನೀಡುವ ಉಸಿರು ನೀ ….
ಹೂ ಎನ್ನಲೇ ? ಪಾಪ ! ಅದು ಮುದುಡಿ ಬಾಡುವುದು ಸಂಜೆಗೆ , ಅಲ್ಪಾಯುಷಿಯಾದ ಅದಕೆ ಹೇಗೆ ಹೋಲಿಸಲಿ ? ನೀ ಚೀರಂಜೀವಿ ,
ನಿತ್ಯ ನೂತನ ನಿನ್ನ ಜೀವನ , ಬಾಡದ , ಬತ್ತದ ಅನುರಾಗದ ಸುಧೆ ನೀಯುವೆ ನೀ……
ಅಂಬರವೆನ್ನಲೇ ? ಛೇ ! ಒಂದು ದಿನಕ್ಕೆ ಹಲವು ಬಣ್ಣ ಬದಲಿಸುವುದು , ಕಣ್ಣಿಗೆ ಕಂಡರು ವಿಸ್ಮಯದಂತೆ ಕಾಡುವುದು , ಹೇಗೆ ಹೋಲಿಸಲಿ ? ಎಂದೆಂದೂ ಒಂದೇ ಬಣ್ಣ , ನಿತ್ಯ ಸತ್ಯ ನೀ …..
ಯಾವ ಹೋಲಿಕೆಗೂ ಸಿಗದ , ಯಾವ ವರ್ಣನೆಗೂ ನಿಲುಕದ ನೀನು , ನೀನಾಗಿರು , ಬೇಡ ನಿನಗೆ ಯಾವ ಉಪಮಾನ , ಉಪಮೆಯ . ವರ್ಣನಾತೀತ ನೀ ……
ಪರವಿನಬಾನು ಇ. ಯಲಿಗಾರ




Good poem no one is equal to you you are only you
Soooper madam.
ಚೆನ್ನಾಗಿ ಬರೆದಿದ್ದೀರಾ ….