ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರೂ ಪ್ರೀತಿಸಲಾಗದಷ್ಟು
ಪ್ರೀತಿಸಿದೆ ನಿನ್ನ
ಪ್ರೀತಿ

ಮೇಲ್ಪಂಕ್ತಿಯಾದೆ ಪ್ರೀತಿಗೆ ನೀ
ಸವಿಗೂಡಾದೆ
ಜೇನಾದೆ!

ಗೆಳೆಯ ಗುಂಪುಗಳು ಮುತ್ತಿಡುವ ಮುನ್ನ ನಿನ್ನ  
ಚಿನ್ನ ,
ನೀ ರಾಣಿ ಜೇನಾದೆ
ಪದ ತಲಗಳಿಂದ
ಗುಯ್ ಗುಡುವ ಗಾನವಾದೆ

ಹೃದಯಕ್ಕೆ ಹಾಡಾದೆ
ಹಾರಾಡುವ ಹರಿಣಿಯಾದೆ
ಬಣ್ಣದ ಪಾತರಗಿತ್ತಿಯೂ ನೀನಾದೆ ಕಡೆಗೆ.

ಕಂಬಳಿ ಹುಳಗಳಿಂದ ಬಂದಿದ್ದ ಮರೆತೆ
ನೀ ಹುಟ್ಟಿದ ಹಾದಿ ಮರೆತೆ ಮೆರೆದಾಡಿದೆ ಪ್ರೀತಿ ನೀ
ಬಟರ್ ಫ್ಲೈ ಆದೆ

ಮುಟ್ಟಿದವರಿಗೆ
ಅಂಟಿಕೊಂಡೆ,
ಶಾಖಕ್ಕೆ ಕರಗಿ ಹೋದೆ ನೀ!
ಪ್ರೀತಿ ಹೀಗೆ
ನೀ ಅಲ್ಪಾವಧಿಯ ಚಿಟ್ಟೆಯಾದೆ
ಸ್ಪರ್ಶಿದರೆ ಬಣ್ಣದಿಂದ         

ಧರಾಶಾಯಿಯಾದೆ

ಪ್ರೀತಿ
ನೀ ಹೀಗೂ ಹಾಗೂ  
ಮರೆತೆ
ಅಮರಳಾದೆ!


About The Author

2 thoughts on “ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ””

Leave a Reply

You cannot copy content of this page

Scroll to Top