ಶಿಕ್ಷಣ ಸಂಗಾತಿ
ವಾಣಿ ಶಿವಕುಮಾರ್
“ಕೆಲವೊಂದು ಸಲಹೆಗಳು:
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ”


pic̲:chat gpt/gemini
ಇನ್ನೇನು ಕೆಲವೇ ದಿನಗಳಲ್ಲಿ ೧೦ ನೇ ತರಗತಿಯ ಪರೀಕ್ಷೆ ಶುರುವಾಗಲಿದೆ. ನಿಮ್ಮ ನಿಮ್ಮ ಶಾಲೆಗಳಲ್ಲಿ ಉತ್ತಮವಾದ ಸಿದ್ಧತೆ ಮಾಡಿಸಿರುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಬಲಪಡಿಸಿರುತ್ತಾರೆ
ಹಲವಾರು ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ನಿಮ್ಮ ತಯಾರಿಕೆಗೆ ಮತ್ತಷ್ಟು ಪುಷ್ಟಿ ನೀಡಿರುತ್ತಾರೆ. ಊಟ, ನಿದ್ದೆ ಬಿಟ್ಟು ಓದಿ ಅಂತ ಯಾರೂ ಸಹ ಎಲ್ಲೂ ಉಲ್ಲೇಖಿಸಿಲ್ಲ ಓದಿನ ಜೊತೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.
ಯಾರ ಅಂಕದ ಜೊತೆಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳದಿರಿ ಪರೀಕ್ಷೆಯಿಂದ ಹೊರಬಂದ ಬಳಿಕ ಅನಗತ್ಯ ಚರ್ಚೆ ಬೇಡ, ಇದರಿಂದ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು.
ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಮೊದಲ ದಿನದಿಂದ ಅವರ ಓದು,ಬರಹ ಚಲನ ವಲನಗಳನ್ನು ಗಮನಿಸುತ್ತಾ ಬಂದಿರ್ತೀರ ಶೇಕಡಾ ೯೦ ೯೫ ಬರಲೇಬೇಕು ಅಂತ ತಾಕಿತು ಮಾಡಬೇಡಿ
ಎಷ್ಟೇ ಅಂಕ ಬಂದರೂ ಅವರು ನಮಗೆ ಮಕ್ಕಳೇ. ಎಲ್ಲಾ ಮಕ್ಕಳಲ್ಲಿಯೂ ವಿಶೇಷವಾದ ಕಲೆ ಇದ್ದೇ ಇರುತ್ತದೆ ಅದನ್ನು ಗುರುತಿಸಿ,ಪ್ರೋತ್ಸಾಹಿಸಿ, ಉತ್ತೇಜಿಸಿ. ಒಂದು ಹುದ್ದೆಯನ್ನು ಅಲಂಕರಿಸುವುದಕ್ಕೋಸ್ಕರ ಅಂಕಗಳು ಬೇಕು ಅಂಕಗಳು ಹೆಚ್ಚು ಕಡಿಮೆಯಾದರೂ ನಮ್ಮ ನಡವಳಿಕೆ, ಸಂಸ್ಕಾರ,ನಯ,ವಿನಯ ಅತಿ ಮುಖ್ಯವಾಗಿರುತ್ತದೆ
ಒಂದು ವೇಳೆ ಅಂಕಗಳು ಕಡಿಮೆ ಬಂದರೆ ಅಥವಾ ನಪಾಸ್ ಆದರೆ ದಯವಿಟ್ಟು ಕೆಟ್ಟ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಠಿಣ ಸಾಹಸಕ್ಕೆ ಕೈ ಹಾಕಬೇಡಿ. ಅರಳ ಬೇಕಿರುವ ಪ್ರತಿಭೆಗಳು ನೀವು ಅರಳುವ ಮುನ್ನವೇ ಬಾಡಿ ಹೋಗದಿರಿ
ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮೂಲಕ ಆಲ್ ದ ಬೆಸ್ಟ್ ಹೇಳುವುದಕ್ಕೆ ಬಯಸುತ್ತೇನೆ. ಕಠಿಣ ಪರಿಶ್ರಮ,ಪೋಷಕರ ಆಶೀರ್ವಾದ,ದೇವರ ಅನುಗ್ರಹ ಸದಾ ಇರುತ್ತದೆ. ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ.
ವಾಣಿ ಶಿವಕುಮಾರ್



