ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆರಿಗೆ ನೋವ
ಮರೆತ ಅಮ್ಮನಂತೆ
ಎದೆಗಪ್ಪಿ ಕೊಳ್ಳುತ್ತದೆ ಪ್ರೀತಿ

ಮನಸಲ್ಲಿ ಹುಟ್ಟಿ
ಕನಸಲ್ಲಿ ಸತ್ತು
ಮಾತನ್ನೇ ಮೌನವಾಗಿಸಿ
ನಿದ್ದೆ ಇರದ ಕನಸು
ಕಾಣುವದು ಪ್ರೀತಿ..

ಭಾವನೆಗಳ ಬರಿದಾಗಿಸಿ
ಭರವಸೆಗಳ ಹುಸಿಯಾಗಿಸಿ
ದಿನಚರಿಯನ್ನೇ
ಉಸಿರಾಗಿಸುವದು ಪ್ರೀತಿ….

ಗುರಿಯಿಲ್ಲದ ಪಯಣ
ಬೆಳಕಿಲ್ಲದ ದಾರಿ.
ಕಷ್ಟ.ಕಣ್ಣೀರು.
ನಿಟ್ಟುಸಿರ ದಾಟಿಬಿಡುವೆನೆಂಬ
ಹುಸಿನಂಬಿಕೆ ಪ್ರೀತಿ..

ಆಕಾಶದಿಹಾರಾಡಿ
ಸಾಗರಗಳನೇ..ಜಾಲಾಡಿ
ಮುತ್ತು.ರತ್ನ.
ಹರಳು…
ತಂದುಬಿಡುವೆನೆಂಬ
ಮರುಳು..ಪ್ರೀತಿ

ದ್ವೇಷದ ಅಗ್ಗಿಷ್ಠಿಕೆಯಲ್ಲಿ
ಬೆಂದರೂ
ಬೆವರದೇ
ಸದ್ದು ಮಾಡದೇ
ನುಗ್ಗಿ ಬರುವಾಗ
ಎದೆಗುಂದ ದಿರುವದು
ಪ್ರೀತಿ

ಭರವಸೆಗಳಿಗೆ ಬಣ್ಣತುಂಬಿ
ಬಯಕೆಗಳಿಗೆ
ಭಯವಾಗದಂತೆ
ಉತ್ಸಾಹದ ಚಿಗುರು
ಚಿಮ್ಮಿಸುವದು ಪ್ರೀತಿ

ತೆತ್ತು ಗಳಿಸುವದಿಲ್ಲ
ಉತ್ತು ಬೆಳೆಸುವದು ಪ್ರೀತಿ
ಮೂಡಣ ದಿಕ್ಕಿನ
ಮೂಡುಗಾಳಿಯಲ್ಲ ಪ್ರೀತಿ

ಕಪಟ ಪ್ರೇಮದ ಉಳಿ ಎಟಿಗೆ
ಶಿಲೆಯಾದರೂ
ಮನದಲ್ಲೆ ನಗುವದು ಪ್ರೀತಿ

ರೆಕ್ಕೆ ಮುರಿದ
ಹಕ್ಕಿಯಂತಾದರೂ..
ಮುರಿದ ವೀಣೆಗೆ
ಒಲವಿನ ಸ್ವರವ
ಕಲಿಸುವದುಪ್ರೀತಿ

ಗಡಿಗಳೆಲ್ಲೇ ಮೀರಿ
ಅಡಿಯಿಡುವ
ಪ್ರೀತಿಯ ದಾರಿಗೆ ಸುಂಕವಿಲ್ಲ
ಸ್ವಾಭಿಮಾನದ ಬಿಂಕವಿಲ್ಲ

ಬಲ್ಲವರು ಎಂಬುವರು
ಕಣ್ಣಿಲ್ಲ ಪ್ರೀತಿಗೆ
ಅಂತರಂಗದ ಬೆಳಕಿರುವದು
ಸುಳ್ಳಲ್ಲ ಪ್ರೀತಿಗೆ

ಬೊಗಸೆಯೊಡ್ಡಿ ಕಾಯುವದು
ಸಾವಿನ ತನಕ
ಮಸಣದಲ್ಲೂ
ಜೊತೆ ಯಾಗಿರುವದು ಪ್ರೀತಿ


About The Author

Leave a Reply

You cannot copy content of this page

Scroll to Top