ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ರೆಪ್ಪೆ ಮುಚ್ಚಿದ ಕ್ಷಣ
ಜಗತ್ತು ಕತ್ತಲಾಯಿತು ನಿಜ,
ಅಂತರಂಗದ ಕಿಟಕಿಗಳೆಲ್ಲ
ತೆರೆದುಕೊಂಡರೂ ಒಳಗೆ
ಬಾರದ ಗಾಳಿ ಬೆಳಕು

​ಧ್ಯಾನದ ಆಳಕ್ಕೆ ಇಳಿದಷ್ಟು
ಮೌನದ ಪದರಗಳು ಕಳಚಿ ಬಿದ್ದವು
ಗುಲಾಬಿ ಹೂವಿನ ಎಸಳುಗಳಂತೆ

ಕಣ್ಣೆದುರು ಈಗ ಶೂನ್ಯ
ಮುಡುಗಟ್ಟಿದ ನೋವು ಹತಾಶೆ
ಕೈಜಾರಿ ಹೋದ ಕಾಲದ ಹೆಜ್ಜೆ ಗುರುತುಗಳು

​ಒಂದೊಂದು ನೆನಪೂ
ಒಂದೊಂದು ನಿಟ್ಟುಸಿರು,
ಮನದ ಕಣಿವೆಯಲಿ
ಈಗ ಗತಕಾಲದ ಆರ್ತನಾದ.


About The Author

Leave a Reply

You cannot copy content of this page

Scroll to Top