ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ ಜೀವನದಲ್ಲಿ  ತಾಯಿ, ತಾಯ್ನಾಡು, ಹೇಗೆ ಮುಖ್ಯವೋ ಹಾಗೆ ತಾಯಿ ನುಡಿ ಕೂಡ ಅಷ್ಟೇ ಮುಖ್ಯ.
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ನಮ್ಮ ಮಾತೃ ಭಾಷೆ ಶುರು ಆಗುವುದು ನಮ್ಮ ಮನೆಯಲ್ಲಿ.
ಮಾತೃ ಭಾಷೆ ನಮ್ಮ ಭಾವನೆಗಳಿಗೆ ಕನ್ನಡಿ ಇದ್ದ ಹಾಗೆ.ನಾವು ಎಷ್ಟೇ ಬೇರೆ ಭಾಷೆಗಳಲ್ಲಿ ಪರಿಣಿತಿ ಇದ್ದರೂ. ನಮ್ಮ ಭಾವನೆಗಳು ಮಾತೃಭಾಷೆ ಮುಖಾಂತರ ಹೊರ ಬರುತ್ತವೆ.
ನಮಗೆ ದುಃಖ ಬಂದಾಗ ಅಯ್ಯೋ ರಾಮ  ಅನ್ನುತ್ತವೆಯೋ ಹೊರತು ಬೇರೆ ಯಾವ ಶಬ್ದ ಗಳು ಬರುವುದಿಲ್ಲ.
ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ದೇವರಿಗೆ ಬೇಡಿ ಕೊಳ್ಳಬೇಕಾದಾಗ. ಕೇವಲ ಮಾತೃಭಾಷೆಯಲ್ಲಿ ಬೇಡಿಕೊ, ದೇವರು ಒಲಿಯುತ್ತಾನೆ ಎನ್ನುತ್ತಿದ್ದರು. ಹೀಗಾಗಿಯೇ ಈಗಲೂ ದೇವರ ಮುಂದೆ ನಿಂತಾಗ ನಮ್ಮ ಪ್ರಾರ್ಥನೆಗಳು ನಮ್ಮ ಆಡು ಭಾಷೆಯಲ್ಲಿ ಹೊರ ಬರುತ್ತವೆ.
ನಮ್ಮ ಮಾತೃಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ. ಲಂಬಾಣಿ ಭಾಷೆ, ಕೊಂಕಣಿ ಭಾಷೆ,  ತುಳು ಭಾಷೆ ಈಗಲೂ ಉಳಿಯಬೇಕಾದರೆ ಮುಖ್ಯ ಕಾರಣ ಎಂದರೆ ಅವು ಕೆಲ ಪ್ರದೇಶದ ಜನರ ಮಾತೃಭಾಷೆ  ಆಗಿವೆ.

ಕೆಲವೊಂದು  ಮಾತೃ ಭಾಷೆಗಳು ಲಿಪಿ ಇಲ್ಲದೆ ಇದ್ದರೂ ಈಗಲೂ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಂಡಿವೆ.
ನಮಗೆ ಕೆಟ್ಟ  ಕನಸು ಬಿದ್ದರೆ ಅಮ್ಮ ಎಂದು ಕೂಗುತ್ತೇವೆ ಹೊರತು  ಬೇರೆ ಯಾವ. ಭಾಷೆ ನಮ್ಮನ್ನು ಕೈ ಹಿಡಿಯುವುದಿಲ್ಲ.
ಬನ್ನಿ
ಮಾತೃ ಭಾಷೆ ಯನ್ನೂ ಉಳಿಸಿ ಬೆಳೆಸೋಣ.


About The Author

Leave a Reply

You cannot copy content of this page

Scroll to Top