ಕಲ್ಪನಾ ಎಸ್ ಪಾಟೀಲ್ ಅವರ ಕವಿತೆ “ನೀ ನನಗೆ ನಾ ನಿನಗೆ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ್ ಅವರ ಕವಿತೆ ನೀ ನನಗೆ ನಾ ನಿನಗೆ” ದತ್ತ ಪದ :- ಪ್ರಿಯ ನೀ ನನಗಾಗಿ..ಶೀರ್ಷಿಕೆ:- ನೀ ನನಗೆ ನಾ ನಿನಗೆ ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿಮಾಮರವು ಜೊತೆಯಾಗಿ ಮೌನದಲಿಬಂದೆ ಬರುವನೆಂಬ ಭರವಸೆ ಮನದಲಿನೀ ಕೊಟ್ಟ ಮಾತು ನೆನೆದು ನಗುತಲಿ ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯತಂದೆ ತರವೆ ಎನ್ನುವ ಆಸೆಯತರದೆ ಇದ್ದರೆ ತೋರೆ ನಾ ನಿರಾಸೆಯಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ ತೇಲಿದೆ ಮನ ನಿನ್ನ ನಾಮವ ಆಲಿಸೆಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ ನೀ ನನಗೆ ನಾ ನಿನಗೆ ಜೊತೆಯಾಗುವದುಂಬಿಯಂತಾಗಿ ಮಕರಂದ ಹೀರುವಹೊಸೆದು ಬೆಸೆಯೋಣ ಮಧುರ ಬಂಧವಬೆರೆಯೋಣ ಮರೆತು ಈ ಜಗವ. ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ್ ಅವರ ಕವಿತೆ “ನೀ ನನಗೆ ನಾ ನಿನಗೆ” Read Post »



