ಬಣ್ಣಗಳ ಸಂಗಾತಿ ಶ್ರೀದೇವಿ ಗುಮ್ಮಗೋಳ “ಬಣ್ಣಗಳ ಭಾವತರಂಗ” ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ. ಭಾವನೆಗಳ ಭಾವತರಂಗ-ಭಾವಂತರಂಗ. ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ. ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ. ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ. ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು. ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು. ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ. ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ. ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ. ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ. ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ, ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ. ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ. ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು. ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ, ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು. ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ. ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ. ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ. ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ. ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ. ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ. ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು ಕುಳಿ ಇರುವದನ್ನ ಕಂಡು ಹಿಡಿದಿದೆ. ಇದು ಎಲ್ಲವನ್ನ ತನ್ನೊಳಗೆ ಆಕರ್ಸಿಸುತ್ತದೆ ಎಂದು ಹೇಳಿದ್ದಾರೆ. ಬಿಳಿ ಬಣ್ಣ ನೆನಪಿಸುವದು ಸ್ಚಚ್ಚಂದ ಬಿಳಿ ಮೋಡಗಳು, ಬೆಳ್ಳನೆ ಹಾಲು, ಶ್ವೇತ ಹಂಸ ಹೀಗೆ ಬೆಳೆಯುತ್ತ ಹೋಗುತ್ತದೆ. ವಿಧವೆ, ಸನ್ಯಾಸಿನಿಯರ ವ್ಯಕ್ತಿ ಸೂಚಕವಾದ ಬಿಳಿ ಬಣ್ಣ ರಾಜಕೀಯದಲ್ಲಿ ಸಚಿವರುಗಳು ದರಿಸುವ ಬಿಳಿ ಜುಬ್ಬಾ ಕಾಯಕ ಸೂಚಕ. ಬಿಳಿ ಸತ್ಯ, ಶಾಂತತೆ, ನಿರ್ಮಲತೆಯ, ಪವಿತ್ರತೆಯ ಸ್ವಭಾವ ಸೂಚಕ. ಇಂತಹ ಭಾವ ಸೂಚಕದ ಬಟ್ಟೆ ಧರಿಸಿದ ಎಷ್ಟು ರಾಜಕಾರಣಿಗಳು ಎಷ್ಟರ ಮಟ್ಟಿಗೆ ಆ ಗುಣಗಳನ್ನ ತಮ್ಮ ರಾಜಕೀಯದಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನುವದು ಎಲ್ಲರಿಗೂ ತಿಳಿದ ವಿಷಯ. ಬಿಳಿ ಇದು ವ್ಯಕ್ತಿ ಮರಣ ಹೊಂದಿದಾಗ ಅವನ ಮೇಲೆ ಹೊದಿಸುವ ಬಟ್ಟೆ, ಅಂತ್ಯಕ್ರೀಯೇಯಲ್ಲಿ ಸಂಬಂಧಿಗಳು ಧರಿಸುವ ಬಟ್ಟೆ ಕೂಡ ಬಿಳಿಯದೆ. ಇಲ್ಲಿ ಬಿಳಿ ಮೌನದ ಸೂಚಕ ಒಂದು ಕಡೆಯಾದರೆ. ಮಾನವನ ಬದುಕಿನ ಎಲ್ಲವು ಮುಗಿದ ಮೇಲೆ ಉಳಿಯುವ ಖಾಲಿತನದ, ಪ್ರಾಣ ನೀಗಿ ಬಯಲಿನಲ್ಲಿ ಆತ್ಮ ಪರಮಾತ್ಮನಲ್ಲಿ ಲೀನವಾಗುವ ಅಗೋಚರತೆ, ಅಗಮ್ಯತೆಯ ಯಾಣ. ಕಪ್ಪು ತನ್ನೊಳಗೆ ಎಲ್ಲವನ್ನೂ ನುಂಗಿದರೆ. ಬಿಳಿಯ ಬೆಳಕು ಎಲ್ಲವನ್ನು ಹೊರ ಚಾಚುತ್ತದೆ. ಪ್ರಕಾಶಿಸುತ್ತದೆ. ಹಳದಿ ಬಣ್ಣ ಅರಿಷಣ, ಮದುವೆಯಲ್ಲಿ ವದು ವರರಿಗೆ ಅರಿಷಣದ ಲೇಪನ, ಜಾತ್ರೆ, ಹಬ್ಬ- ಹರಿದಿನಗಳಲ್ಲಿ ಎರಚುವ ಹಳದಿ ಬಂಡಾರ ಮಂಗಲ, ಶುಭದ ಸಂಕೇತ. ಹಳದಿ ಸ್ನೇಹದ ಸೂಚಕವು ಹೌದು. ಹಳದಿ ಇದು ನಮ್ಮ ತಾಯಿ ಭುವನೇಶ್ವರಿ ಕೈಯಲ್ಲಿ ನಮ್ಮ ಕರ್ನಾಟಕದ ಬಾವುಟದಲ್ಲಿರುವ ಹಳದಿ ಬಣ್ಣ ಶಾಂತಿ, ಸಹನೆ ಮತ್ತು ಸ್ನೇಹದ ಸಂಕೇತ. ನೀಲಿ ಅಂದಾಗ ಶುಬ್ರವಾದ ನೀಲಿ ಆಕಾಶ, ನೀಲ ಕಡಲ ಕಣ್ಣ ಮುಂದೆ ಬರುತ್ತದೆ. ಶ್ರಮಿಕ ಅಂದರೆ ಜವಾನ, ಸ್ವೀಪರ್, ಕಾರ್ಮಿಕರು ಧರಿಸುವ ಬಟ್ಟೆ ನೆನಪಾಗುವದು. ನಮ್ಮ ದೇಶದ ವಾಯು ಸೈನದಲ್ಲಿ ಸೈನಿಕರು ಧರಿಸುವ ಬಣ್ಣವು ನೀಲಿಯೇ. ನಮ್ಮ ದೇಶದ ರಾಷ್ಟ್ರ ದ್ವಜದಲ್ಲಿ ಮದ್ಯದಲ್ಲಿ ಇರುವ ಚಕ್ರವು ನಿಲಿ ಬಣ್ಣದ್ದು. ಈ ನೀಲಿ ಶ್ರಮಿಕ, ಸೈನಿಕನ ವ್ಯಕ್ತಿ ಸೂಚಕವಾದರೆ, ಇನ್ನೊಂದು ಕಡೆ ಆಕಾಶದ ಹಾಗೆ ವಿಶಾಲತೆ, ಚಲನೆಯ ಬದುಕನ್ನ ತೋರಿಸುಕೊಡುತ್ತದೆ. ಹಾಗೇಯೇ ಶ್ರಮಿಕನ ಕಾಯಕವೇ ಕೈಲಾಸ ಎಂಬ ಮಂತ್ರ, ಕಾಲ, ಸಮಯದ ಮಹತ್ವ ಸಾರುವ ಗುಣ ಸೂಚಕವು ಹೌದು.ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ. ಭಾವನೆಗಳ ಭಾವತರಂಗ-ಭಾವಂತರಂಗ. ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ. ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ. ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ. ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು. ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು. ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ. ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ. ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ. ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ. ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ, ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ. ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ. ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು. ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ, ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು. ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ. ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ. ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ. ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ. ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ. ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ. ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು