ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com



ಸೋತು ಹೋದೆನೆನ್ನುವ
ಪಾಪ ಪ್ರಜ್ಞೆ ಬಿಸಾಕು
ಗೆಲುವಿನ ಕುದುರೆ
ಹತ್ತಿ ಓಡಿಸು ಸಾಕು

ಸಾಸಿವೆಯ ತರಲು
ಸಾಲುಗಟ್ಟಿದ ಜನ
ಸಾವಿಲ್ಲದ ಮನೆಯ
ಹುಡುಕಿ ಕಳಾಹೀನ

ನನ್ನ ನಿನ್ನ ನಡುವೆ
ಸುಮ್ಮನೇಕೆ ಬಿರುಕು
ತಣ್ಣನೆಯ ಪ್ರೀತಿಯು
ನೆಮ್ಮದಿಯ ಸರಕು

ಮುಡಿ ತುಂಬ ಮಲ್ಲಿಗೆ
ಮೊಗದಿ ನಗು ಹಾರ
ನೋಡುವ ಮನದಲಿ
ಪ್ರೀತಿ ಪೋಣಿಸು ದಾರ

ಊರ ಮಂದಿಗೆ ಅಂಜಿ
ಊರೂರು ಸುತ್ತಿದಾತ
ದಾರಿ ಸರಿದ ಮೇಲೆ
ವಾಸ್ತವಕೆ ಬಂದಾತ

ನಗೆ ಬೀರಿದಾಗೊಮ್ಮೆ
ಎದೆಯಲಿ ನಡುಕ
ಹದವಾಗಿ ತಬ್ಬಲು
ಬಿಸಿ ಗಾಳಿಯ ತಾಪ


About The Author

Leave a Reply

You cannot copy content of this page

Scroll to Top