ಕಾವ್ಯ ಸಂಗಾತಿ
ಡಾ. ದಾನಮ್ಮ ಝಳಕಿ
“ಹೊಳೆಸಾಲು ಬಳ್ಳಿ”


ಹೊಳೆಸಾಲ ಬಳ್ಳಿ ಚೆಂದ
ಹಳ್ಳಿಯ ನೆಲ ಅಂದ
ಮಣ್ಣಿನ ವಾಸನೆಯ ಕಂಪು
ಬಲು ಚೆಂದ ಕೇಳವ್ವ
ಹಸಿರು ಬೊಟ್ಟಿನ ಸೀರೆ
ಅಚ್ಚ ಕೆಂಪಿನ ಬಳೆ
ತೊಟ್ಟಾಳ ನನ್ನವ್ವ
ನಿಂತಾಳ ಬಳ್ಳಿಯಲಿ
ಪುಂಡಿಯ ಪಲ್ಲೆಯಲಿ
ಬಳ್ಳೊಳ್ಳಿ ಕಾರದಲಿ
ಎಣ್ಣೆ ಉಳ್ಳಾಗಡ್ಡಿ ರುಚಿ ಚೆಂದ
ಹೊಳೆಸಾಲ ಬಳ್ಳಿಯಲಿ
ಹೊಳೆಸಾಲ ಬಳ್ಳಿಯಲಿ ಬಣ್ಣಬಣ್ಣದ ಹೂಗಳು
ನಮ್ಮವ್ವ ಮುಡಿದ ಮಲ್ಲಿಗೆ ಹೂ ಚೆಂದ
ಹಣಿಯಲಿ ವಿಭೂತಿ ಕೆಂಪುಬೊಟ್ಟಿನ ಗಂದ
ಹೊಳೆಸಾಲದಬಳ್ಳಿಯಲಿ ನಮ್ಮವ್ವನ ಕಳೆ ಚೆಂದ
ಡಾ. ದಾನಮ್ಮ ಝಳಕಿ



