ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ಬಚ್ಚಿಟ್ಟ ಬಯಕೆ”


ಎದೆಯ ಗೂಡಿನಲ್ಲಿ
ತುಂಬಿ ತುಳುಕುವ
ಬಚ್ಚಿಟ್ಟ ಬಯಕೆಗಳನು
ಬಿಚ್ಚಿಡುವ ಆತುರ
ಮನದ ಆಲಯದಲ್ಲಿ
ಹುದುಗಿದ್ದ ಅದೆಷ್ಟೋ
ಆಕರ್ಷಣೆಗಳ ಸೆಳೆತಕೆ
ತೆರೆದುಕೊಳ್ಳುವ ಕಾತುರ
ಮುಗಿಯದಷ್ಟು ಮಾತುಗಳು
ಮನದಾಳದಲ್ಲಿ ಮೊಳೆತಿವೆ
ಚಿಗುರೊಡೆವ ಬಯಕೆಗೆ
ಕನಸುಗಳು ಸಾವಿರ
ಮಾತುಗಳು ಮೌನವಾಗಿ
ಮೌನದಲ್ಲೇ ಹರಿಸಿ ಹಾರೈಸಿ
ಸ್ಪಂದಿಸುವ ಜೀವಕ್ಕೆ
ನೆನಪುಗಳ ನಿರಾಳತೆ ಮಧುರ
ಕಾಣದ ಕಡಲನು
ಸೇರುವ ಕಾತುರ
ಅಬ್ಬರದ ಅಳೆಗಳನ್ನು
ಅಪ್ಪಿಕೊಳ್ಳುವ ಅವಸರ
ಆಕಾಶದ ನೀಲಿಗೆ
ಕಾರ್ಮೋಡಗಳ ತೋರಣ
ಇಳೆಗೆ ಮಳೆಯ ಸಿಂಚನ
ಸೇರಲು ಮಾನಸ ಸರೋವರ
ಡಾ.ಗೀತಾ ದಾನಶೆಟ್ಟಿ



