ಕಥಾ ಸಂಗಾತಿ
ಶಕುಂತಳ ಕೆ ಬೆಳ್ಳರ್ಪಾಡಿ
ನ್ಯಾನೊ ಕಥೆಗಳು.


1.ಕಾರಣ.
ಈ ನನ್ನ ಮುಖದಲ್ಲಿರುವ ಹೊಳಪಿಗೆ ಕಾರಣ ಈ ಕತ್ತಲು,ನನ್ನ ಮನದ ಅಂಧಕಾರ ಓಡಿಸಿರುವುದು ಜೋಡಿಸಿಟ್ಟ ಪುಸ್ತಕಗಳು ಜೊತೆಗೆ ನಿದ್ದೆ ಬರದಂತೆ ನನ್ನ ರೆಪ್ಪೆಗಳನ್ನು ಕಾಯುತ್ತಿರುವುದು ಒಂದು ಬಟ್ಟಲು ಕಾಫಿ. ಇದೇ ನನ್ನ ಲೋಕ.
2.ಬದುಕು
ರಂಗೋಲಿ ಬಿಡಿಸುವ ಹುಡುಗಿಯ ಜೀವನ ರಂಗೋಲಿಯಷ್ಟೇ ಸುಂದರವಾಗಿರಬಹುದು ಅಂದುಕೊಳ್ಳುವಾಗಲೇ ಮನೆಯೊಳಗಿನ ಅಸಭ್ಯ ಜೋರು ಮಾತು ಜೊತೆಗೆ ಮಳೆ ನೀರು ಬಿದ್ದು ಮಣ್ಣು ಸೇರಿದ ಬಣ್ಣ ಅವಳ ಕಥೆಯನ್ನು ಸಾರಿ ಸಾರಿ ಹೇಳಿತು
3.ಮುಖವಾಡ
ಬಣ್ಣ ಲೇಪಿಸಿ ಒಣಗಲಿಟ್ಟ ಮುಖವಾಡಗಳು ಮಾರಾಟವಾದರೂ ಮಾರಿದವನ ಹೊಟ್ಟೆ ಚುರುಗುಟ್ಟುತ್ತಲೇ ಇತ್ತು.
ಶಕುಂತಳ ಕೆ ಬೆಳ್ಳರ್ಪಾಡಿ



