ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಲ ಮಾಳಿಗೆಗೆ ನಕ್ಷತ್ರಗಳೇ ಮಾಲಿಕೆಗಳು
ಕಡಲ ಸೆಳೆತಕೆ ಅಬ್ಬರಿಸುವ ಅಲೆಗಳು
ಸವಿಜೇನು ಸುರಿದಂತೆ ನೀನಾಡುವ ಮಾತುಗಳು
ಹೃದಯ ಮೀಟಿದೆ ವೈನಿಕನಂತೆ ಒಲವಿನೊಳು

ಮನದಲಿ ಹಚ್ಚಿದನು ಪ್ರೀತಿಯೆಂಬ ದೀಪವನು
ಅದ್ಯಾವಾಗಲೋ ಕದ್ದುಬಿಟ್ಟ ನನ್ನಯ ಹೃದಯವನು
ನಗುವಿನಲೆ ಸೆಳೆಯುವ ಚಲುವ ನನ್ನವನು
ಜನುಮದಲಿ ಬಿಟ್ಟಿರದ ಅನುಬಂಧದ ಬೆಸುಗೆಯನು

ನೀನಾಗು ಆಸರೆ ಬದುಕೆಂಬ ಪಯಣದಲಿ
ಹೊಂದಿಕೊಂಡು ಸಾಗುವ ನಮ್ಮಿರ್ವರ ಸಂಬಂಧದಲಿ
ಕಷ್ಟಗಳ ಕಡೆಗಣಿಸಿ ಪರಿಹರಿಸುವನು ಧೈರ್ಯದಲಿ
ಹೆಮ್ಮರಕೆ ತಬ್ಬಿಕೊಂಡ ಬಳ್ಳಿಯಂತೆ ಪ್ರೇಮದಲಿ

ದುರ್ಗುಣಗಳಿಲ್ಲದ ಎಲ್ಲರ ಮೆಚ್ಚಿನ ಹೃದಯವಂತ
ಸದ್ಗುಣಗಳೇ ತುಂಬಿರುವ ವಿಶಿಷ್ಟತೆಯ ಗುಣವಂತ
ಸಂಪತ್ತು ಆಶಾಶ್ವತವೆಂದು ತಿಳಿದಿರುವ ಹಣವಂತ
ಅನ್ಯೋನ್ಯತೆಯ ದಾಂಪತ್ಯಕೆ ನೀನಾದೆನಗೆ ಸಮ್ಮತ


About The Author

Leave a Reply

You cannot copy content of this page

Scroll to Top