ಕಾವ್ಯ ಸಂಗಾತಿ
ಗೀತಾ ಆರ್
“ಸುಗ್ಗಿ ಸಂಕ್ರಾಂತಿ”


ಹೊಸ ವರುಷದ ಹೊಸತು
ಬೆಳೆ ಹರುಷದಲಿ….
ಸುಗ್ಗಿ ಸುಗ್ಗಿ ಸಂಭ್ರಮವು
ಮನೆಯಲಿ ಸಡಗರವು….
ಕಷ್ಟವೆಂಬ ಕಹಿಎಳ್ಳು ಮರೆವ
ಕಬ್ಬು ಬೆಲ್ಲದ ಸವಿಯಲಿ…
ಸೂರ್ಯ ಪಥ ಬದಲಿಸುವ
ಸಂಚಲನ ಕಾಲಚಕ್ರದಲಿ…
ತುಂಬಿರಲಿ ಸುಖ ಸಂತೋಷ
ಮಕರ ಸಂಕ್ರಾಂತಿಯಲಿ….
ರಂಗೋಲಿಯ ಬಣ್ಣಗಳಲ್ಲಿ
ಪಚ್ಚೆ ತಳಿರುತೋರಣದಲಿ…
ಜೀವನದ ನೋವುಗಳೆಲ್ಲಾ
ಮರೆವ ನಾವು ಬಾಳಿನಲ್ಲಿ….
ಸ್ನೇಹ ಪ್ರೀತಿ ಸಂಬಂಧಗಳು
ಇರಲಿ ಸಾಮರಸ್ಯದಲಿ….
ಆಯುಷ್ಯ ಆರೋಗ್ಯ ಆನಂದ
ಪ್ರಾರ್ಥಿಸು ದೇವರಲಿ….
ಧನ ಧಾನ್ಯ ಸಂಪತ್ತು ಸಮೃದ್ಧಿ
ಏಲ್ಲಾರ ಬದುಕಿನಲಿ….
ಸುಖ ಶಾಂತಿ ನೆಮ್ಮದಿ ಸಿಗಲಿ
ಎಲ್ಲಾರಿಗೂ ಸುಗ್ಗಿಯಲಿ…
ಸಂಭ್ರಮಿಸಿರಿ ಏಲ್ಲಾರೂ
ಮಕರ ಸಂಕ್ರಾಂತಿಯಲಿ….
ಗೀತಾ ಆರ್.



