ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
“ಬಾಡದಿರಲಿ ಅನ್ನದಾತನ ಮುಖದ ಕಾಂತಿ”


ಮೈ ನಡುಗುವ ತಂಪುಗಾಳಿಯು
ಕಂಪ ಸೂಸುತ್ತಿತ್ತು ಅದು…
ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು.
ಹಚ್ಚಹಸುರಿನ ಪಚ್ಚೆಪೈರಿನ
ಬೆಳೆಯ ನೋಡುತ ಕೋಗಿಲೆ
ಕೂಗುತ್ತಿತ್ತು. ಬರುವ ಸಂಕ್ರಾಂತಿ
ಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು.
ಉಡಿತುಂಬಿದ ಧರೆ
ಮುಡಿಗೇರಿದ ಫಸಲು
ಮುತ್ತಿಕ್ಕುವ ಚಳಿ ತಾ….
ಮುನುಗುತ್ತಾ ಸುಗ್ಗಿಯಹಾಡ
ಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕು
ಎಂದು ದೇವರ ಬೇಡುತ್ತಿತ್ತು.
ತಳಿರು ತೋರಣ ಕಟ್ಟುತ
ಚಾಮರ ಬೀಸಿದೆ ಮಾಮರ.
ಕರಗದಿರಲಿ ಅನ್ನದಾತನ ಕನಸು
ಈ ವರುಷ ಬರದೇ ಇರಲಿ ಬರ.
ಹಸನಾಗಿರಲಿ ಅನ್ನದಾತನ ಮನಸು
ಹರಿದೋಗಿ ಬಿಡಲಿ ಈ ವರುಷ.
ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು.
ಆ ಪಥ ಬದಲಿಸಿ ಈ ಪಥದಲಿ
ಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿ
ಕತ್ತೆ.ಕಪ್ಪೆ.ಗೋವು.ಮಾವು
ಯಾವುದೇ ವಾಹನ ಏರು
ಮಡಿವಾಳರ ಮನೆಯಲ್ಲೇ ವಾಸವಿರು
ಮಡಿಯುಳ್ಳವರ ಮನೆಯಲ್ಲೇ ಮಲಗು
ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತ
ವಾಗಿರಲು ಬಂದುಬಿಡು
ಸಂಕ್ರಾಂತಿ ಬಾಡದಿರಲಿ
ಅನ್ನದಾತನ ಮುಖದ ಕಾಂತಿ
ಇಮಾಮ್ ಮದ್ಗಾರ



