ಕಾವ್ಯ ಸಂಗಾತಿ
ಕವಿತೆಗಳ ರಾಣಿ

ಕವಿತೆಗಳ ರಾಣಿ ಬಣ್ಣಿಸಿದ ಕವಿ
ಕಿವಿಗಳಿಗೆ ಇoಪು ಮಾತಿನ ಸವಿ
ಹರ್ಷಗೊಂಡಿತು ಹೃದಯ ಸಿಹಿ
ಮರೆಯಿತು ಮನದೊಳಗಿನ ಕಹಿ
ಕವಿತೆಯ ಸಾಲುಗಳಲಿ ನಾ ಬಂಧಿಯಾದೆ
ಪ್ರೀತಿಯ ಸಾಲಿನಲಿ ನೀ ಬರಹವಾದೆ
ಸಂತಸದ ಮಳೆ ಸುರಿವ ಮುಗಿಲಾದೆ
ಗರಿಬಿಚ್ಚಿ ನರ್ತಿಸುವ ನಾಟ್ಯದ ನವಿಲಾದೆ
ಜೀವನದ ಬೇಸರದಲ್ಲಿ ಜೊತೆಯಾದೆ
ಬರವಣಿಗೆಯ ಬೆರಳಲ್ಲಿ ಸಾಲದೆ
ಜೀವನ ಉತ್ಸಾಹಕ್ಕೆ ಕಾರಣವಾದೆ
ಜೀವನದಿ ಬದುಕುವ ಆಸೆ ತಂದೆ
ನಾನೇಗೆ ನಿನ್ನನ್ನು ಪದಗಳಲಿ ವರ್ಣಿಸಲಿ
ಶೃಂಗಾರದಲ್ಲಿ ಬಣ್ಣಿಸಿ ನಾನೆಂತು ಚಿತ್ರಿಸಲಿ
ನನ್ನೊಳಗೆ ನೀನಿರುವೆ ಹೇಗೆ ಮೋಹಿಸಲಿ
ಎಂದೆಂದೂ ಜೊತೆಯಾಗಿರು ಈ ಜನ್ಮದಲಿ.
ಲತಾ ಎ ಆರ್ ಬಾಳೆಹೊನ್ನೂರು




