ಧಾರಾವಾಹಿ ಸಂಗಾತಿ
ಕಂತು ಎರಡು
ಸವಿತಾ ದೇಶಮುಖ
ಜಯದೇವಿ ತಾಯಿ ಲಿಗಾಡೆ
ಜೀವನಗಾಥೆ
ಕನ್ನಡ ಏಕೀಕರಣ ಮತ್ತು ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾಚೇತನ



ಜಯದೇವಿ ತಾಯಿಯವರ ತಾಯಿ-ತಂದೆ ಸಂಗವ್ವ ಬಾಯಿ, ಚನ್ನಬಸಪ್ಪ
ಕನ್ನಡದ ತಾಯಿ-ಜಯದೇವಿತಾಯಿ- ಲಿಗಾಡೆ
ಬದುಕು- ಬರಹ- ಬದ್ಧತೆ-(.ಜೀವನದ ವೃತ್ತಾಂತ)
ಬೆಳಗಿನ ಮಂಜಿನ ಹನಿಗಳು ಹಸಿರು ಎಲೆಗಳ ಮೇಲೆ ಮುತ್ತಿಟ್ಟಂತೆ ಮಲಗಿದ್ದವು….!!!. ಆಗಸದಿಂದ ಕೆಳಗೆ ನುಗ್ಗುವ ಸೂರ್ಯಕಿರಣಗಳು ಭೂವಿ ಮೇಲೆ ಚಿನ್ನದ ರೇಖೆಗಳನ್ನು ಎಳೆಯುತ್ತಿದ್ದವು…. ಇನ್ನೊಂದೆಡೆ ಎಲೆಗಳ ನಡುವೆ ಅಡಗಿದ ಬೆಳಗಿನ ಬೆಳಕಿನಲಿ… .ಚಿಲಿಪಿಲಿ ಗುಟ್ಟುವ ಹಕ್ಕಿಗಳನಾದ ನಡುವೆ …ಬಣ್ಣ ಬಣ್ಣದಲಿ ಅಡಗಿದ ಹೂವಿನ ನಗೂ…. ರಂಗು ರಂಗಿನ ಪಾದರಗಿತ್ತಿಗಳ ಝಂಗನೇ ಹಾರಾಟ …. !!!!!!
ಎಲ್ಲವ…. ನೋಡುತ ನಿಂತ ಆರು ವರ್ಷದ ಜಯದೇವಿ….. ಸುಂದರ ದೃಶ್ಯದ ಬಗ್ಗೆ ತಂದೆಗೆ ಅನೇಕ ಬಾರಿ ಪ್ರಶ್ನೆಗಳನ್ನು ಕೇಳುತ್ತಿದ್ದ ಸಂದರ್ಭಗಳನ್ನು ತಾಯಿಯವರು ನೆನೆಯುತ್ತಿದ್ದರು…
ಸೂರ್ಯನನು ಹುಟ್ಟಿಸಿದವರು ಯಾರು??…ಬೆಳಕು ಎಲ್ಲಿಂದ ಬಂತು?!! ಅನುಜನ ತಂದೆ ತಾಯಿ ಯಾರು?!! ಹ**** ಪಕ್ಷಿಗಳು ಎಲ್ಲಿಂದ ಬಂದವು …!! ಹೂವುಗಳಿಗೆ ಬಣ್ಣವ ಕೊಟ್ಟವರಾರು!!??…ದನಗಳು ಹಾಲು ಏಕೆ ಕೊಡುವುವು..??!!ಬೆಳೆಯುವ ಪೈರು ಹುಟ್ಟಿಕೊಳ್ಳುವುದು ಹೇಗೆ!???.. ಹೀಗೆ ಅನೇಕ ಪ್ರಶ್ನೆಗಳು ಹಸುಳೆಯ ಮನಕ್ಕೆ ಕಾಡುತ್ತಿದ್ದವು…..!!!?
ಎಲ್ಲವನ್ನೂ ಆಳವಾಗಿ ಅನುಭವಿಸುವ ಎಳೆಯ ಜಯದೇವಿ ತಾಯಿಯವರ ತಂದೆಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಅದೆಷ್ಟು ಬಾರಿ ಉತ್ತರವೇ ಇರುತ್ತಿರಲಿಲ್ಲ. ಆದರೆ ತಂದೆ ಹೇಳಿದ ಒಂದು ಮಾತು ಮಾತ್ರ ಅವರ ಎದೆಯಲ್ಲಿ ಭದ್ರಗೊಂಡಿತ್ತು.
“ಅಗಮ್ಯ ಜೀವನದ ಸತ್ಯವನು… ಒಂದೇ ಮಾತಿನಲ್ಲಿ ತಿಳಿಸಿದ್ದರು .”ಈ ಸೃಷ್ಟಿಗೆ ಆ ದೇವನೊಬ್ಬನೇ ಕಾರಣ ಬ್ರಹ್ಮಾಂಡದಲಿ ಅವ್ಯಕ್ತವಾಗಿ ಕೆಲಸ ಮಾಡುವ ಅದೊಂದು ಶಕ್ತಿಯ..ಅಗೋಚರವಾದ ಪ್ರವಾಹ… ಎಲ್ಲ ಸೃಷ್ಟಿಗೆ ಕಾರಣ ಅವನೇ …ನಮ್ಮನ್ನೇಲ್ಲ ಆಳುತ್ತಿರುವುನು!!!
ನಮ್ಮ ಜೀವನದಲಿ ಅವನ ಕರುಣೆಯನ್ನು ಅನುಭವಿಸಿ ಸಾರ್ಥಕ ಗೊಳಿಸಬೇಕು “ಅನ್ನುತ್ತಿದ್ದರು.
ಹಾಗಿದ್ರೆ ಅವನನ್ನು ಒಲಿಸುವ ಪರಿ ಯಾವುದು ಅಂತ…??? ಕೇಳುತ್ತಿದ್ದರು ಜಯದೇವಿ…
.”ಆ ದೇವರನ್ನು ಒಲಿಸುವುದು ತ್ಯಾಗದ ಜೀವನದಿಂದ ಸಾಧ್ಯ , ಕಾಯಕನಿಷ್ಠ ರಾಗಿರಬೇಕು- ಸತ್ಯದ ನಡತೆ ಇರಬೇಕು…!!!!!
ಇಂಥ ಅನುಭಾವದ ಮಾತುಗಳು ಎಳೆಯ ಜಯದೇವಿ ಅವರ ಮನಸ್ಸು ಸಂಸ್ಕಾರಗೊಂಡಿತ್ತು.
ಸೊಲ್ಲಾಪುರದ ಬಿಸಿಲಿನ ಬೇಗೆಯನ್ನು ತಾಳಲಾರದ ಆಗರ್ಭ ಶ್ರೀಮಂತ ಮನೆತನದವರು ಸುತ್ತಲಿರುವ ‘ಪಂಚಗಣಿ ‘,’ಮಹಾಬಳೇಶ್ವರ’ ಅಂಥ ಸ್ಥಳಗಳಲ್ಲೆಲ್ಲಾ ಆರು ತಿಂಗಳವರೆಗೆ ಕಾಲ ಕಳೆಯುತ್ತಿದ್ದರು .ಅದೇ ರೀತಿ ಸೊಲ್ಲಾಪುರದ ವಾರದ , ಮಡಿಕೆ, ಲಿಗಾಡೆ ಮನೆತನದವರು ಮೂರು ತಿಂಗಳು ಮಹಾಬಲೇಶ್ವರದಲ್ಲಿ ಮೂರು ತಿಂಗಳು ತೋಟದ ಮನೆಯಗಳಲ್ಲಿ ಕಾಲ ಕಳಿಯುತ್ತಿದ್ದರು.

ಎಡದಿಂದ ಬಲಕ್ಕೆ ಶಿವಶಂಕರ ಮಡಕಿ, ರಾಜಶೇಖರ್ ಮಡಕಿ, ಶ್ರೀದೇವಿ ಗಾಡವೆ ಪುಣೆ, ಸುಮತಿ ಅಷ್ಟುರೆ ಬಾಲ್ಕಿ
ಜಯದೇವಿ ತಾಯಿಯವರು ಹೆಚ್ಚಾನ ಹೆಚ್ಚಾಗಿ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದರು.
ತಮ್ಮ ಬಾಲ್ಯದ ದಿನಗಳನ್ನು ರೈತಪಿ ಜನರ ಬದುಕಿನ ಮಧ್ಯದಲ್ಲಿ ಬದುಕಿದ್ದರು.ಅಲ್ಲಿ ಅವರ ಕಷ್ಟ ಸುಖಗಳ ಸ್ಥಿತಿಗತಿಗಳನ್ನು ಅರಿತವರಾಗಿದ್ದರು…. ಅವರ ತಾಯಿ ಸಂಗವ್ವನವರು ಅಲ್ಲಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.. ಅಲ್ಲಿಯ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವವರು… ಬಾಣಂತಿ ಮಕ್ಕಳ ಆರೋಗ್ಯದ ಕ್ಷೇಮವನ್ನು ನೋಡಿಕೊಳ್ಳುವರು.
ಅನರಕ್ಷತಾ ಹೆಣ್ಣು ಮಕ್ಕಳನ್ನು ಅವರನ್ನು “ಸರಸ್ವತಿ ಸದನಕೆ” ತಂದು ಶಿಕ್ಷಣವನ್ನು ಕೊಡಿಸುತ್ತಿದ್ದರು. ಅವರಿಗೆ ಮಕ್ಕಳ ಪಾಲನೆ ಘೋಷಣೆ ಸ್ವಚ್ಛತೆಯ ಬಗ್ಗೆ ತಿಳಿ ಹೇಳುತ್ತಿದ್ದರು. ಕುಟುಂಬ ಯೋಜನೆಗಳ ಬಗ್ಗೆ ಮಾಹಿತಿ ಕೊಡುವರು,ಉದ್ಯೋಗ ತರಗತಿಗಳ ಬಗ್ಗೆ ಮಾಹಿತಿ.. ನೀಡುತ್ತಿದ್ದರು.
ತಾಯಿ ಸಂಗವ್ವನವರು ಪುರಾಣ ಪುಸ್ತಕಗಳನು ಅರಗಿಸಿಕೊಂಡಿದ್ದರು . ಶ್ರಾವಣ ಮಾಸದಲ್ಲಿ ಪುರಾಣ-ಪ್ರವಚನವನ್ನು ಅಲ್ಲಲ್ಲಿ ಹೇಳುತ್ತಿದ್ದರು. ಅವುಗಳನ್ನು ಸತತವಾಗಿ ಕೇಳುತ್ತ ಬೆಳೆದರು ಜಯದೇವಿ ತಾಯಿಯವರು. ತಾಯಿಯೊಂದಿಗೆ ಸಭೆ ಸಮಾರಂಭಗಳಲ್ಲಿ ತಿರುಗಾಡುವುದರಿಂದ ತನ್ನ ತಾಯಿಯಂತೆ ಭಾಷಣ ಮಾಡುವ ಕೌಶಲ್ಯವನ್ನು ತಾಯಿಯವರು ಕಲಿತರು ಎನ್ನುತ್ತಿದ್ದರು.
ಶರಣ ಸಂಸ್ಕೃತಿ, ನಾಡ ನುಡಿಗಳ ಚಿಂತನೆ ಕೂಟವನ್ನು ಹಮ್ಮಿಕೊಳ್ಳುತ್ತಿದ್ದರು .ಕನ್ನಡ ನೆಲದ ಶರಣರ ವಚನಗಳನ್ನು ಬಿತ್ತರಿಸುತ್ತಿದ್ದರು. ಮನೆಗೆ ವಾರದ ಪಾಠಶಾಲೆಯಿಂದ ಬರುವ ಮಕ್ಕಳಿಗೆ ವಚನ ಪಠಣ ,ಭಾಷಣ ಕವನ ಲೇಖನ ಓದುವ – ಮನನ ಮಾಡುವ ವಿಧಾನ ತಿಳಿಸುತ್ತಿದ್ದರು ತಾಯಿ ಸಂಗವ್ವನವರನು .
ತಂದೆ ತಾಯಿಯಂದಿರು ಆ ದೇವರ ಮೇಲೆ ಇಟ್ಟು ಅಗಾಧ ನಂಬಿಕೆಯು ಜಯದೇವಿ ತಾಯಿಯವರ ಮೇಲೆ ಗಾಢ ಪರಿಣಾಮ ಬೀರಿತು ಅಂತ ಹೇಳುತ್ತಿದ್ದರು.
ವಿಶೇಷವಾಗಿ ಸಂಗವ್ವನವರು…. ಶರಣರ ವೇಷವನ್ನು ಮಕ್ಕಳಿಗೆ ಉಡಿಸಿ ನಾಟಕಗಳನ್ನು ಆಯೋಜಿಸುತ್ತಿದ್ದರು .
ಗಡಿನಾಡವಾದ ಸೊಲ್ಲಾಪುರದಲ್ಲಿ ಆಗ “ಕನ್ನಡ” ಶಾಲೆಗಳು ಇರಲಿಲ್ಲ ಹೀಗಾಗಿ ಜಯದೇವಿ ತಾಯಿಯವರಿಗೆ ಮರಾಠಿ ಶಾಲೆಗಳಿಗೆ ಹೋಗಬೇಕಾಗಿ ಬಂತು. ಮರಾಠಿಯನ್ನು ಕೂಡ ಅವರು ಅತ್ಯಂತ ಅದ್ಭುತವಾಗಿ ಕರಗಿಸಿ ಕುಡಿದವರು.
ಮರಾಠಿ ಭಾಷೆಯು ಕೂಡ (ಗೋಡ)ಮಧುರವಾದ ಭಾಷೆ ಅಂತಲೇ ಹೇಳುತ್ತಿದ್ದರು.
ವಿದ್ಯಾರ್ಥಿಯಾಗಿದ್ದಾಗ ಜಯದೇವಿ ತಾಯಿಯವರು ಅನೇಕ ವೀರರ ,ತ್ಯಾಗಜೀವಿಗಳ,ಶರಣರ ,ಹುತಾತ್ಮರ ಸ್ವಾತಂತ್ರ ಹೋರಾಟಗಾರರ,ದೊಡ್ಡ ವ್ಯಕ್ತಿಗಳ ಸಾಧನೆ ಮಾಡಿದವರ ಪುಸ್ತಕಗಳನ್ನು ಮನನ ಮಾಡಿದ್ದರು ..ಎನ್ನುವದ ಬಹಳಷ್ಟು ಸಲ ನಮ್ಮೊಂದಿಗೆ ತಾಯಿಯವರು ಹಂಚಿಕೊಂಡಿದ್ದರು.
“ಆಗ ಮರಾಠಿಯಲ್ಲಿ ಐತಿಹಾಸಿಕ ಕಾದಂಬರಿಗಳನ್ನು ಬರೆಯುತ್ತಿದ್ದ ‘ಹರಿಬಾವು ಆಪಟೆ’ಅವರ …”
ಸ್ವರಾಜ್ಯ ಚಾ ಶ್ರೀ ಗಣೇಶ” “ಐತಿಹಾಸಿಕ ಸ್ತ್ರೀ ರತ್ನ”,
ಸ್ವರಾಜ್ಯ ಚಾ ಓ ನಾಮಾ” ಮುಂತಾದ ಕೃತಿಗಳನ್ನು ಓದುತ್ತಿದೆ ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರಾದ ಮಹಾತ್ಮ ಗಾಂಧೀಜಿ, ಅಂಬೇಡ್ಕರ್,ವಿವೇಕಾನಂದ ,ಪರಮಹಂಸ, ಶಾರದಾ ಮಾತೆ, ಅರವಿಂದ್ ಘೋಷರಂಥ ಜೀವನ ಚರಿತೆಯನ್ನು ನಾನು ಓದುತ್ತಿದ್ದೆ…… ಅವರಂತೆ ಒಂದು ಹೆಜ್ಜೆಯಾದರು ನಾನು ಇಡಬೇಕು ಅನ್ನುವ ಸತತ ಪ್ರಯತ್ನದಲ್ಲಿ ನಾನ್ ಇರ್ತಿದ್ದೆ … ” ಅಂತ ಜಯದೇವಿ ತಾಯಿಯವರು ಹೇಳುವರು.
ಒಳ್ಳೋಳ್ಳೆ ಸಾಹಿತ್ಯವನ್ನು ಸೃಷ್ಟಿಸಿ ಬರೆಯ ಬೇಕಾದರೆ ಮೊದಲು ಮಹಾನ್ ಶ್ರೇಷ್ಠ ವ್ಯಕ್ತಿಗಳು ನಡೆದು ಬಂದ ದಾರಿಯನ್ನು ನಾವು ಗಮನಿಸಬೇಕು …. ಅವರಂತೆ ಬದುಕನ್ನು ಬದುಕಬೇಕು ಅನ್ನುತ್ತಿದ್ದರು. ಅಂದರೆ ಮಾತ್ರ ಒಳ್ಳೆ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ”” ಅನ್ನುತಿದ್ದರು.
ಅದೇ ರೀತಿ ನಮಗೆಲ್ಲರಿಗೂ ಕೂಡ ಅತ್ಯಮೂಲ್ಯವಾದ ಪುಸ್ತಕಗಳನ್ನು ಓದುತ್ತಿರಬೇಕು ಅನ್ನುವ ಹುಮ್ಮಸ್ಸು ನಮ್ಮಲ್ಲಿ ತುಂಬುತ್ತಿದ್ದರು.
ತಾಯಿಯವರು ಸೃಷ್ಟಿಸುತ್ತಿದ್ದ ಸಾಹಿತ್ಯವನ್ನು ಗಮನಿಸಿದಾಗ…ಆ ಭಾಷೆಯ ಮೇಲಿನ ಹಿಡಿತ ಅಕ್ಷರಗಳ ತಾಳ ಮೇಳ ಆ ಶಬ್ದ ಸಂಪತ್ತನ್ನು ನೋಡಿ ಬಹಳ ಬೆರಗಾಗುತ್ತಿದೆ . ಕೇವಲ ಎಂಟು ದಿನದಲ್ಲಿ ಕನ್ನಡವನ್ನು ಕಲಿತವರು….. ಈ ಶಬ್ದಗಳನ್ನು ಬಳಿಸಲು ಹೇಗೆ ಸಾಧ್ಯ ಅಂತ ನನ್ನ ಅಜ್ಜಿಗೆ ಕೇಳಿದರೆ ಹೇಳ್ತಿದ್ರು
“ಶರಣರ ಕರುಣೆಯ /ಕಾಸಾರ ಕವಲೊಡೆದು
ಹರಿದು ಹಾಯ್ಯಿದ್ದಿತ್ತ ಎನ ಮೇಲೆ- ಸಿದ್ದನ
ವರವಾಗಿತ್ತ ಬರೆಯುವದಕ…”
ಎಲ್ಲವೂ ಸಿದ್ದರಾಮಯ ಎದ್ದರೆ ,ಕುಳಿತರೆ, ಮಲಗಿದ್ದರೆ, ಬರೆದರೆ ….ಉಸಿರಾಡಿದರೆ ಎಲ್ಲವೂ ಸಿದ್ದರಾಮಯ ವಾಗಿರುತಿತ್ತು..,.. “ಭೂವಿಯಲ್ಲಿಯ ಒಂದು ತೃಣವು ಅಲಗಾಡಬೇಕಾಗಿದ್ದರೆ ಅವನ ಕೃಪೆಯಿಂದಲೇ ಅನ್ನುವರು….. ಎಲ್ಲವು ಎಲ್ಲರೂ ಅವನಿಂದಲೇ “ಅಂತ ಹೇಳುವರು.
ಇದೇ ಸಮಯದಲ್ಲಿ ಜಯದೇವಿ ತಾಯಿಯವರ ತಾಯಿ ಸಂಗವ್ವನವರು “ಮಹಿಳಾ ಜ್ಞಾನ” ಮಂದಿರಕ್ಕೆ ತಪ್ಪದೇ ಭೇಟಿ ಕೊಡುತ್ತಿದ್ದರು . ಅಲ್ಲಿ ಸಭೆಗಳಲ್ಲಿ ಧರ್ಮದ ಕುರಿತು-ಬಸವ ಚಿಂತನೆ ನಡೆಯುತ್ತಿದ್ದವು. ಅವರ ತಂದೆ -ತಾಯಿ- ತಾತ ಎಲ್ಲರೂ ಶರಣ ಸಿದ್ದರಾಮೇಶ್ವರರ ಆರಾಧ್ಯ ಭಕ್ತರಾಗಿದ್ದರು.
ಈ ಕಾರಣದಿಂದಲೇ ಕನ್ನಡದ ಭಾವನೆಯು ಜಯದೇವಿ ತಾಯಿಯವರಲ್ಲಿ ಗಾಢವಾಗಿ ಬೆಳೆಯಹತ್ತಿತ್ತು….. ಅಂತ ಹೇಳಬಹುದು …… ಮಹಿಳಾ ವಿಮೋಚನೆ ,ಮಹಿಳೆಯರ ಶಿಕ್ಷಣ ಅವಳ ಸ್ವಾತಂತ್ರ್ಯದ… ಶಿಕ್ಷಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು .
ಸ್ವಾತಂತ್ರ ಹೋರಾಟದಲ್ಲಿ ಕೆಲವು ಮಹಿಳೆಯರಷ್ಟೇ ಪಾಲುಕೊಳ್ಳುತ್ತಿದ್ದರು. ಎನ್ನುವದ ಗಮನಿಸಿದ ಸಂಗವ್ವನವರು ಹೆಣ್ಣುಮಕ್ಕಳನ್ನು ಪಾಲುಕೊಳ್ಳಲು ಹುರಿದುಂಬಿಸುತ್ತಿದ್ದರು.ಜಯದೇವಿ ತಾಯಿಯವರು ಅವರೊಂದಿಗೆ ಕೈಜೋಡಿಸಲಾರಂಭಿಸಿದ್ದರು.
ಬಾಲ್ಯದಿಂದಲೂ ವಚನವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದರು .ವಚನಗಳೆಲ್ಲವೂ ಕನ್ನಡದಲ್ಲಿ ಇದ್ದಿದ್ದರಿಂದಲೇ ಕನ್ನಡ ಕಲಿಯುವ ಉತ್ಕಟ ಆಸೆ ಹೆಚ್ಚಾಗ ಹತ್ತಿತ್ತು.
ಕನ್ನಡದ ಭಾಷೆಯ ಅರಿವನ್ನು ವಿಸ್ತರಿಸಿದವರು ವಾರದ ಮಲ್ಲಪ್ಪ ,ಗೌರವ ಬಾಯಿ, ತಾಯಿ ಸಂಗವ್ವ ಮತ್ತು ತಂದೆ ಚನ್ನಬಪ್ಪನವರು ……
ವಚನ ಸಾಹಿತ್ಯದ ಹಸ್ತ ಪ್ರತಿಗಳು ಹಾಳಾಗಬಾರದು ಎಂದು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪುಸ್ತಕ ರೂಪದಲ್ಲಿ ಒಂದೇಡೆ ಹೊಂದಿಸಿ ಇಡಲಾಗುತ್ತಿತ್ತು.
ಕನ್ನಡದಲ್ಲೂ ಹಾಗೂ ಅನ್ಯ ಭಾಷೆಗಳಿಗೆ ಭಾಷಾಂತರಿಸಿ ಅವುಗಳ ಮರು ಹೊಂದಾಣಿಕೆ ಮಾಡಲಾಗುತ್ತಿತ್ತು. ಶರಣ ರೂಪಕ ಪ್ರದರ್ಶನಗಳ ಮೂಲಕ ಜನತೆಯಲ್ಲಿ ಕನ್ನಡದ ಅರಿವು ಹುಟ್ಟಿಸಿದರು.
ಜಯದೇವಿ ತಾಯಿಯವರು ಏಳೆಂಟು ವರ್ಷದವರಿದ್ದಾಗಲೇ ಆ ಕೂಡಿಟ್ಟ ವಚನಗಳನ್ನು ತೆಗೆದು ಓದುವ ಆಸೆ ಪೂರ್ತಿ ಆಗುತ್ತಿರಲಿಲ್ಲ….. ಯಾಕೆಂದರೆ ಕನ್ನಡದ ಅಕ್ಷರದ ಜ್ಞಾನ ಇರಲಿಲ್ಲ. ಕೊನೆಗೆ ಹಟಕ್ಕೆ ಬಿದ್ದು ಕನ್ನಡ ಭಾಷೆಯನ್ನು ಅವರು ಕೇವಲ 8 ದಿನದಲ್ಲೇ ನುಡಿ ಕಲಿತರು ಇದನ್ನು ಕೇಳಿದರೆ ಆಶ್ಚರ್ಯವಾಗಬಹುದು… ಅಲ್ಲವೇ…!!!
ಇದೇ ಸಂದರ್ಭದಲ್ಲಿ ಉದ್ಯೋಗವನ್ನು ಅರಿಸಿ ಬರುತ್ತಿರುವ ಅನ್ಯಭಾಷಿಕರ ಒತ್ತಡವು ಕನ್ನಡದ ಮೇಲೆ ಪ್ರಭಾವ ಬೀರಲಾರಂಭಿಸಿತು .ಆಡಳಿತದ ವ್ಯವಹಾರಿಕ ಭಾಷೆಯು ….ಕನ್ನಡ ಪ್ರದೇಶ ಮರಾಠಿಮಯವಾಗ ತೊಡಗಿದ್ದನ್ನು ಕಂಡು ಕನ್ನಡ ಕಲಿಕೆ ಕನ್ನಡ ನುಡಿಯ ಉಳಿವಿಗಾಗಿ ಹೋರಾಡುವ ಧೋರಣೆ ಅಚಲವಾಗಿತ್ತು…
ಕನ್ನಡದ ಉಳಿವಿಗಾಗಿ ವಾರದ ಮಲ್ಲಪ್ಪನವರಿಂದ ಹಿಡಿದು ತಾಯಿ ಸಂಗವ್ವನವರು ಮುಂದೆ ಜಯದೇವಿ ತಾಯಿಯವರು ಮುಂದುವರಿಸಿದರು ….(ಮುಂದುವರಿಯುವುದು)
ಸವಿತಾ ದೇಶಮುಖ





ಅತ್ಯುತ್ತಮವಾಗಿ ಬಂದಿದೆ ಮುಂದುವರೆಯಲಿ