ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ

ಕಾವ್ಯ ಸಂಗಾತಿ ಡಾ ಬಿ ಎನ್‌ ತಾರಾ ಧಾರವಾಡ “ಸಾವ ತುಟಿಯೂ ನಗು ಹೊತ್ತಿರಬೇಕು” ಬದುಕು ಹೆಂಗಿರಬೇಕು,ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕು.ಹಸಿವು ಅಸಾಧ್ಯವಾದರೂಆಸೆಯ ದೀಪವೊಂದುಎದೆಯಲಿ ಹೊತ್ತಿರಬೇಕು.ಬಿದ್ದೆವೆಂದು ಭಯಪಟ್ಟು ಮೌನವಾದರೆ,ಬದುಕು ಪಾಠಕಲಿಸೋದಿಲ್ಲ.ಕಣ್ಣೀರ ಹನಿಗಳು ನೆಲ ಸೇರುವ ಮುನ್ನ, ಮುತ್ತಾಗುವಷ್ಟುಮೌಲ್ಯವಿರಬೇಕು.ಹಾರದೆ ಮುರಿದ ಕನಸುಗಳ  ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.ನೋವಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ,ಅರ್ಥವುಮೌನವಾಗಿ ನಗಬೇಕು.ಸೋಲಿನ ನೆರಳು ಮೇಲೆ ಬಿದ್ದರೂ,ಕಾಲದ ಹೊಡೆತಎದೆ ಚೂರಿದರೂಧೈರ್ಯವೆಂಬ ಬೇರು ಇರಬೇಕು. ನಗು  ನಗುತಿರಬೇಕು ಸಾವಿರ ನೋವಿಗೆಉತ್ತರವಾಗಬೇಕು.ಕೊನೆಯ ಉಸಿರಿನ ಕ್ಷಣದಲ್ಲೂ,ಜೀವನ ಜಯಿಸಿದತೃಪ್ತಿಯಿರಬೇಕು.ಸಾವ ಬಂದಾಗದೇಹ ಮೌನವಾದರೂ,ಮನಸ್ಸು ಮಾತ್ರ ರಾಗ ಹಾಡುತ್ತಿರಬೇಕು. ಬದುಕಿದ ಜೀವಕ್ಕೆಸಾವ ತುಟಿಯೂನಗುವ ಹೊತ್ತಿರಬೇಕು.ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕ,ಕಣ್ಣೀರ ಹನಿಗಳುನೆಲ ಸೇರುವ ಮುನ್ನ,ಮುತ್ತಾಗುವಷ್ಟ ಮೌಲ್ಯವಿರಬೇಕು.ಆಕಾಶಕ್ಕೆ ಹಾರದೆ ,ಹೊಸ ಕನಸಿನ ಬೀಜನೋವಿನ ಪ್ರತಿಯೊಂದುಹೆಜ್ಜೆಯ ಹಿಂದೆಯೂ,ಅರ್ಥ ಮೌನವಾಗಿ ನಗಬೇಕು.ಭ್ರಮಿಸಬಾರದು.ಕಾಲದ ಹೊಡೆತ ಎದೆ ಚೂರಿದರೂ ಸಹ,ಧೈರ್ಯವೆಂಬ ನಡುಗದ ಬೇರು ಇರಬೇಕು. ನಗು ಸಣ್ಣದಾದರೂ ಸಾಕು,ಅದು ಸಾವಿರ ನೋವಿಗೆ ಉತ್ತರವಾಗಬೇಕು. ಉಸಿರಿನ  ಕ್ಷಣದಲ್ಲೂ,ಜೀವನ ಜಯಿಸಿದೆವೆಂಬ ತೃಪ್ತಿಯಿರಬೇಕು.ಮನಸ್ಸು  ಹಾಡುತ್ತಿರಬೇಕು.ಸಾವ ತುಟಿಯೂನಗುವ ಹೊತ್ತಿರಬೇಕು. ಡಾ ತಾರಾ ಬಿ ಎನ್ ಧಾರವಾಡ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನೆನಪಾಗುತ್ತಾರೆ” ಗೆಳೆಯರೆಸತ್ಯ ಶುದ್ಧತೆಗೆಇಲ್ಲ ಬೆಲೆ ಗೌರವಉಪ್ಪಿನಲ್ಲಿ ಕಾಣದ ಇರುವೆಗಳುಸಕ್ಕರೆಯಲ್ಲಿ ಮುಕ್ಕುತ್ತವೆ.ಹಾಲು ಮಾರುವವನುಓಣಿ ಕೇರಿ ತಿರುಗಬೇಕುಹಾಲು ಕೊಳ್ಳುವವರು ಕೇಳುತ್ತಾರೆನೀರೆಷ್ಟು ಬೆರೆಸಿದೆಯೆಂದುಆಲ್ಕೊಹಾಲ್ ಮಾರುವವನಅಂಗಡಿಯಲ್ಲಿ ಜನ ಜಂಗುಳಿಅವರೆ ಸಾರಾಯಿಯಲ್ಲಿನೀರು ಸೋಡಾ ಬೆರೆಸಿ ಸಂಭ್ರಮಿಸುತ್ತಾರೆಮನುಷ್ಯನಿಗೆ ಪಶುವೆಂದರೆಎಲ್ಲಿಲ್ಲದ ಕೋಪಸಿಂಹ ಹುಲಿಯೆಂದರೆಹಿಗ್ಗಿ ಕುಣಿಯುತ್ತಾನೆ.ಪಾಪ ಅವನಿಗೆ ಗೊತ್ತಿಲ್ಲಅವುಗಳು ಪಶುವೆಂದುತಿಳಿ ನೀರಿನಲ್ಲಿ ಎಂದೂ ಮೀನು ವಾಸಿಸುವುದಿಲ್ಲಕೊಳಚೆಯಲ್ಲಿ ಅವುಗಳ ಸಂತೆಸತ್ಯ ಹೇಳುವವನಿಂದುಒಂಟಿಯಾಗುತ್ತಿದ್ದಾನೆಸುಳ್ಳಿಗೆ ಸನ್ಮಾನದ  ಪಟ್ಟನೆನಪಾಗುತ್ತಾರೆಬುದ್ಧ ಬಸವ ಬಾಪುಸತ್ಯ ಹೇಳಿ ಬಿಟ್ಟು ಹೋದರು ಜಗವ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ” Read Post »

ಕಥಾಗುಚ್ಛ

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ

ಕಥಾ ಸಂಗಾತಿ ನಾಗರಾಜ ಬಿ. ನಾಯ್ಕ “ಒಬ್ಬ”  ಗುಡ್ಡದ ತುದಿಗೆ ಒಂಟಿ ಮನೆ. ಅಲ್ಲಿಂದ ಹೊರಗೆ ನೋಡಿದರೆ ಕಣ್ಣು ಮುಟ್ಟುವಷ್ಟು ಕಡಲು. ಅವನು ಆಗಾಗ ನಿಂತು ಆ ಕಡಲನ್ನು ನೋಡುವನು. ಅಲೆಗಳ ಕುಣಿತ ಅವನೊಳಗೆ ಹೊಸ ಸಂಚಲನವ ನೀಡುವುದು.  ತನಗೆ ಎಷ್ಟು ವರ್ಷ ಗೊತ್ತಿಲ್ಲ ಅವನಿಗೆ. ತನ್ನವರು ಎನ್ನುವರು ಯಾರೂ ಪರಿಚಯವಿಲ್ಲ ಅವನಿಗೆ. ಸುಮ್ಮನೆ ದುಡಿಯುವುದು, ತಿನ್ನುವುದು ಅದೊಂದೇ ಅವನ ಗುರುತು. ಎಲ್ಲರಿಗೂ ಅವನು ಬೇಕು. ಆದರೆ ಅವನು ಮಾತ್ರ ಒಂಟಿ. ಯಾವ ಹಂಗೂ ಇರದ ಬದುಕು ಅವನದ್ದು . ಒಮ್ಮೊಮ್ಮೆ ಆಕಾಶ ನೋಡುತ್ತಾ ಮಲಗುವ. ನೋಡಿದ ಆಗಸದಲ್ಲಿ ಯಾರದೋ ಮುಖ ಅವನಿಗೆ ಕಾಣುವುದು. ವಿಚಿತ್ರ ಎನಿಸುವುದು ಅವನಿಗೆ ಮೋಡಗಳಲ್ಲಿ, ಆಕಾಶದಲ್ಲಿ ಮುಖಗಳು ಕಾಣುವುದು. ಒಮ್ಮೊಮ್ಮೆ ಓಡಾಡುವ ಜನರ ನಡುವಿನ ಮುಖದ ಭಾವವನ್ನ ಅವನು ಗುರುತಿಸುವ. ಅವರಾರು ತನ್ನವರಲ್ಲ ಎನಿಸುವುದು ಅವನಿಗೆ. ವ್ಯವಹಾರ ಎನಿಸುವ ಜೀವನ ಅವನಿಗೆ ಬೇಸರ ತರಿಸುವುದು. ಆದರೂ ಅವನು ಬದುಕುವನು ಅವರೊಟ್ಟಿಗೆ. ಅವರೆಲ್ಲರೂ ಒಂಟಿ ಅಂದುಕೊಳ್ಳುವನು ಆಗಾಗ. ಆದರೆ ಅವರ ಮುಖಭಾವದಲ್ಲಿ ಅವರಾರು ಒಂಟಿ ಎನ್ನುವುದು ಇರುವುದಿಲ್ಲ ಎಂದುಕೊಂಡು ಮನೆಗೆ ಹೋದರೆ ಮಾತನಾಡಿಸುವ ಜೀವಗಳು ಅನೇಕ ಅವರಿಗೆ ಎಂದುಕೊಳ್ಳುವನು. ಆದರೆ ಅವನಿಗೆ ಯಾರಿಲ್ಲ ಮಾತನಾಡುವವರು. ಯಾರು ಇಲ್ಲದ ಮನೆಯಲ್ಲಿ ಸಾಕಿದ ಬೆಕ್ಕು, ಸಾಕಿದ ನಾಯಿ ಒಂದೆರಡು ಆಕಳು ಇವುಗಳನ್ನು ಬಿಟ್ಟರೆ ಅವನಿಗೆ ತನ್ನವರು ಎನ್ನುವರು ಯಾರು ಇಲ್ಲ. ಆದರೆ ಅವುಗಳೇ ಅವನ ಸರ್ವಸ್ವ. ಕಾಡಿನ ದಾರಿ. ದಿನಾಲು ಒಂಟಿ ಸಾಗುವವನು. ಅವನೆಂದುಕೊಂಡಂತೆ ಅವನ ಬದುಕು. ಹಸಿವೆಯಾದರೆ ತಿನ್ನುವನು ಅನ್ನವನ್ನು. ಯಾರೋ ಕೊಟ್ಟ ಹಣ್ಣನ್ನು ,ಯಾರು ಕಟ್ಟಿಕೊಟ್ಟ ರೊಟ್ಟಿಯನ್ನು. ಹಸಿವಿಗೆ ಎಂದು ಉಣ್ಣುವಾಗ ಕೊಟ್ಟ ಕರಗಳನ್ನು ಎಣಿಸುವ ಆತ ಮುಖವನ್ನ ಸ್ಮರಿಸುವ ಹಂಚಿ ತಿನ್ನುವ ತನ್ನೊಟ್ಟಿಗೆ ಬಂದ ಬೆಕ್ಕು ನಾಯಿ ದನ ಕರುಗಳ ಜೊತೆ.        ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಅವನಲ್ಲಿ ಹೊಸ ಹುರುಪು. ಮರದ ನೆರಳಿಗೆ ಎಂದು ಬಂದು ಕುಳಿತಾಗ ಹಕ್ಕಿಗಳು ಉಲಿವವು. ಸುತ್ತ ಹುಟ್ಟಿದ ಮರಗಿಡಗಳಲ್ಲಿ ಅನೇಕ ಹಕ್ಕಿಗಳು ಬಂದು ಚಿಲಿಪಿಲಿ ಎನ್ನುವವು. ತಿಂದು ಎಸೆದ ಬೀಜಗಳು ಸಸಿಯಾಗಿ ಹುಟ್ಟಿ ಮರವಾಗಿ ಬೆಳೆದು ನಿಂತು ಉಪಕರಿಸುವ ರೀತಿಗೆ ಅವನು ಸೋಲುತ್ತಾನೆ. ಎತ್ತರವಾಗಿ ಬೆಳೆದು ನಿಂತ ಮರದ ನೆರಳಿಗೆ ಕುಳಿತು ಗುಡ್ಡದ ಕೆಳಗೆ ಇರುವ ಕಡಲಲ್ಲಿ ರವಿ ಮುಳುಗುವ ವಿಹಂಗಮ ನೋಟವನ್ನು ಕಾಣುತ್ತಾನೆ. ಸೂರ್ಯ ಒಂದು ಪ್ರಶ್ನೆ ಅವನಿಗೆ. ಎಷ್ಟೆಲ್ಲಾ ಕಲಾಕೃತಿಗಳು ಅವನ ಬೆಳಕಿನ ಸೃಷ್ಟಿ ಎಂಬುದರಿತು ಹೆಮ್ಮೆ ಪಡುತ್ತಾನೆ. ಕೆಂಬಣ್ಣದ ಆಗಸದಲ್ಲಿ ಬೆಳ್ಳಕ್ಕಿಗಳ ಸಾಲೊಂದು ಓಡುವ ಸಂಭ್ರಮವ ನೋಡಿ ಅಂತರಂಗದಿ ಕರಗುತ್ತಾನೆ. ಪಯಣದ ದಿಕ್ಕುಗಳ ನೋಡಿ ಆನಂದಿಸಿ ಸುಮ್ಮನಾಗುತ್ತಾನೆ. ತನ್ನೊಳಗೆ ತಾನೇ ಪ್ರಶ್ನೆಯ ಎಳೆದುಕೊಂಡು ಎಲ್ಲೆಲ್ಲೂ ಸುತ್ತಿ ಬರುತ್ತಾನೆ. ಸಂಜೆಯ ಕತ್ತಲಿಗೆ ಗುಡ್ಡದ ಜೀರುಂಡೆಗಳ ಸದ್ದು ಕೇಳುತ್ತದೆ. ಮರಗಿಡಗಳಲ್ಲಿ ಹಕ್ಕಿ ಮಲಗಿರುವ ಮೌನ ಕತ್ತಲೆಗೆ ಒರಗಿ ನಿದ್ದಿಸುವ ಕೌತುಕಕ್ಕೆ ಬೆರಗಾಗುತ್ತಾನೆ. ಕತ್ತಲೆಯ ಮಧ್ಯೆ ಬೆಳಗುವ ಚಂದಿರನ ಕಂಡು ನಸು ನಗುತ್ತಾನೆ. ನನ್ನಂತೆ ನೀನು ಸುಖಿ ಎನ್ನುತ್ತಾನೆ. ಅಚ್ಚರಿಗಳ ಆಶಾ ಗೋಪುರ ಅವನದಾಗುತ್ತದೆ. ತಾನು ಒಬ್ಬನೇ ಎನ್ನುವ ಅವನಲ್ಲದ ಭಾವ ಅವನನ್ನು ತಾಕದೇ ಮರೆಯಾಗುತ್ತದೆ. ಹಸಿವೆ, ನಿದ್ದೆಯ ದಾಟಿ ಬೆಳಕು ಹರಿಯುತ್ತದೆ. ಹೊಸ ಬೆಳಕಿನ ಸೃಷ್ಟಿಗೆ ಕಾದು ಎದ್ದು ಹೊರಡುತ್ತಾನೆ. ಬಾಗಿಲಿಲ್ಲದ ಮನೆಯ ಬಿಟ್ಟು. ಸಾಕಿದ ಬೆಕ್ಕು ಬಂದು ಮ್ಯಾಂವ್ ಎಂದು ಕಳುಹಿಸಿ ಹೋಗುತ್ತದೆ. ಊರ ದಾರಿಗಳಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಡೆವ. ನಡೆವಾಗ ಎದುರಾದ ಯಾರೋ ಹೆಸರು ಹೇಳಿ ಕರೆಯುವರು. ಓ ಎಂದು ನಾಲ್ಕು ಮಾತು ಆಡಿ ಹೋಗಿಬಿಡುವ. ಕರೆದ ಮನೆಯ ಅಂಗಳದಲ್ಲಿ ಕುಳಿತು ಕೊಟ್ಟ ಕೆಲಸವ ಮಾಡಿ ಹೊರಡುವವ. ಅವನ ಕೆಲಸದ ಚಾಕ ಚಕ್ಯತೆ ಒಂದು ಕುಶಲತೆ ಎನಿಸುತ್ತಿತ್ತು. ಅವನು ನೆಟ್ಟ ಗಿಡ ತಾನೇ ತಾನಾಗಿ ಚಿಗುರು ಬಿಡುತ್ತಿತ್ತು. ಹಸಿರು ಅವನ ಕೈಯಾರೆ ಬೆಳೆದು ಇಳೆಯ ಹಸಿರಿಗೊಂದು ಹೆಸರಾಗುತ್ತಿತ್ತು. ಆತ್ಮ ಅಭಿಮಾನ ಗೌರವಕ್ಕೆ ಋಣಿ ಎಂದುಕೊಳ್ಳುತ್ತಿದ್ದ. ಅವನೇ ಬೆಳೆಸಿ ಉಪಕರಿಸಿದ ಮರಗಳು ಬೆಳೆದು ಊರ ತುಂಬಾ ಹರಡಿದ್ದವು.              ಕಾಲದ ಕನ್ನಡಿಗೆ ಹಲವು ಗುರುತು. ಅವನು ಆಗಾಗ ಅಂದುಕೊಳ್ಳುವ. ಅದಾರೋ ಕೊಟ್ಟ ತಿಂಡಿ ತಿಂದು ಅಲ್ಲಿ ಇಲ್ಲಿ ಬೆಳೆದು ದೊಡ್ಡವನಾದ ಮೇಲೆ ಈ ಊರಿಗೆ ಬಂದು ನಿಂತವ. ತನ್ನವರಲ್ಲದ ಜನರ ನಡುವೆ ಜಾತ್ರೆಗೆಂದು ಬಣ್ಣ ತುಂಬಲೆಂದು ಬಂದವ. ಅದೇನೋ ಖುಷಿ ಅನಿಸಿ ಈ ರೀತಿ ದಿನ ಒಂದೊಂದು ಊರು ಅಲೆಯುವುದು ಸಾಕಾಗಿ ಇಲ್ಲೇ ಉಳಿದರೆ ಸಾಕು ಎಂದು ಉಳಿದವ. ದೂರದ ಗುಡ್ಡದಂಚಿನ ಮರದ ಕೆಳಗೆ ಮಲಗಿ ಹಲವು ದಿನ ಕಳೆದವ. ಒಂಟಿತನ ಕಾಡಲಿಲ್ಲ ಅವನಿಗೆ. ಏಕೆಂದರೆ ಒಂಟಿಯಾಗಿ ಬೆಳೆದವನಿಗೆ ಅದು ಕರಗತ. ಈಗೀಗ ನಗುವುದು ಕಲಿತಿದ್ದ. ತನ್ನಂತೆ ಇದ್ದ ಇತರರ ನೆನಪಿಸಿಕೊಂಡ. ಅವರೆಲ್ಲಾ ಎಲ್ಲಿ ತಲುಪಿರಬಹುದು ಎಂದು ಯೋಚಿಸಿದ. ತಾನೇ ಸುಖಿ ಎಂದುಕೊಂಡ. ಹಸಿವೆಯಾದಾಗ ಗುಡ್ಡದಿಂದ ಇಳಿದು ಬಂದು ಊರ ದಾರಿ ಹಿಡಿದ. ಯಾರೋ ಊಟ ಕೊಟ್ಟರು. ಕೆಲಸ ಕೊಟ್ಟರು. ಒಂಟಿಯಾದರೂ ಜೀವನ ಸಾಗಿತು. ಅದೊಂದು ದಿನ ವಯಸ್ಸಾದ ಅಜ್ಜಿಯೊಬ್ಬಳ ಮನೆಗೆ ಹೋಗಿದ್ದ. ಇದ್ದ ಒಬ್ಬ ಮಗ ಬಾರದ ನೋವು ಅಜ್ಜಿಗೆ ಕಾಡಿತ್ತು. ತುಂಬಾ ಮಾತನಾಡಿದ ಅಜ್ಜಿ ಜೊತೆಗೆ. ಅಜ್ಜಿಗೆ ಮಗ ಸಿಕ್ಕಂತಾಯಿತು. ಅವನೂ ಖುಷಿ ಪಟ್ಟ. ಈ ಲೋಕದ ಮಾಯೆಗೆ ಬೆರಗಾದ. ಕಾಲದ ಕರೆಗಂಟೆಯಲ್ಲಿ ಕರಗಿಹೋದ ನೋವುಗಳ ಎಣಿಸಿದ. ಅವನ ಮನೆಗೆ ಕಿಟಕಿ ಬಾಗಿಲು ಯಾವುದು ಇರಲಿಲ್ಲ. ಚಪ್ಪರದೊಳಗಿನ ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿದ್ದ. ಹತ್ತಾರು ವರ್ಷಗಳ ಕಾಲ ಉಳಿದ. ಈಗ ಅವನಿಗೆ ಊರಿನ ಜನರ ನಂಟು ಹೆಚ್ಚಾಗಿತ್ತು ‌. ಕರೆವವರು ಬಹಳ ಅವನಿಗೆ. ಅದೊಂದು ದಿನ ಆ ಊರಿನ ಜಾತ್ರೆ ನಡೆಯುತ್ತಿತ್ತು. ಅವನು ಜಾತ್ರೆಗೆ ಹೋದ‌. ಕಂಡ ಮುಖಗಳಲ್ಲಿ ಬದುಕಿನ ಭಾವಗಳ ಹುಡುಕಿದ. ಅರೇ ಹೌದಲ್ಲ ಇದೇ ನನ್ನ ಬದುಕಾಗಿತ್ತು. ಜಾತ್ರೆಗೆ ಬಂದ ಎಲ್ಲರೂ ಸೇರಿ ಸಂಭ್ರಮದಿಂದ ನಡೆವಾಗ ಹೆಮ್ಮೆ ಎನಿಸುತ್ತಿತ್ತು. ಅದೆಷ್ಟು ಜಾತ್ರೆಗಳ ಸುತ್ತಿದ್ದ ಅವನು. ಮತ್ತೆ ಅದೇ ಬದುಕು ಅವನ ಸುತ್ತಿ ಕೊಂಡಿತು. ಜಾತ್ರೆ ಇದ್ದಷ್ಟು ದಿನ ಅಲ್ಲೇ ಉಳಿದ. ಜಾತ್ರೆ ಮುಗಿಯಿತು. ಬಂದವರು ಹೊರಟರು ಒಂಟಿಯಾಗಿ. ಅವನೆಂದುಕೊಂಡ ಇವರೊಡನೆ ಹೊರಟರೆ ಹೇಗೆ ಅಂದುಕೊಂಡ. ಆ ಗುಡ್ಡದ ಗುಡಿಸಲೇ ವಾಸಿ ಎನಿಸಿ ಮರಳಿದ…….. ಇರುವವರೆಗೆ ಒಬ್ಬನಾಗಿಯೇ ಉಳಿದ. ಊರಿಗೆ ಮರಳಿದ ಅವನ ಕಂಡವರಿಗೆ ಖುಷಿ ಎನಿಸಿತು. ತಾನೇ ಕಟ್ಟಿದ ಗುಡಿಸಲಿಗೆ ಬಂದು ಕುಳಿತು ಹೊರಗೆ ನೋಡಿದ. ಅಸ್ತದ ವಿಶಾಲ ನೋಟ ಅಚ್ಚರಿಯೊಳಗಿನ ಬಂಧುತ್ವ ಎನಿಸಿತು. ಜಗದ ನಿಯಮಕೆ ಎಲ್ಲವೂ ವಾಸ್ತವದ ಪ್ರತಿಬಿಂಬಗಳು. ನನ್ನ ಉಸಿರು ಕೂಡಾ ಹಾಗೆ ಅಂದುಕೊಂಡ. ಬದುಕಿದ. ಎಲ್ಲರೊಳಗೆ ನಾನು ಒಬ್ಬ ಎಂದು ಅಂದುಕೊಂಡ. ಸಾಗುವ ಬದುಕಿನ ಚಿತ್ರದಲ್ಲಿ ಸಾಗಿ ಹೋದ ಒಬ್ಬನಾಗಿ. ನಾಗರಾಜ ಬಿ. ನಾಯ್ಕ.

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ Read Post »

ಇತರೆ, ಜೀವನ

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಜಪಾನೀಯರ ದೀರ್ಘಾಯುಷ್ಯದ ಗುಟ್ಟು”  ಇತ್ತೀಚಿಗಿನ ವರದಿಯ ಪ್ರಕಾರ ಜಪಾನಿನಲ್ಲಿ 95,000ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆರೋಗ್ಯವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಬದುಕನ್ನು ನಡೆಸುತ್ತಿರುವ ಅವರನ್ನು ನೋಡಿದಾಗ ಅಬ್ಬಾ ಎಂಥ ಅದೃಷ್ಟವಂತರು ಇವರು ಎಂದು ನಮಗೆ ಅನಿಸಿದರೆ ತಪ್ಪಿಲ್ಲ.  ಆದರೆ ಇಲ್ಲಿ ಕೇವಲ ಅದೃಷ್ಟದ ಪಾಲು ಇಲ್ಲ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಂತೂ ಮೊದಲೇ ಇಲ್ಲ….. ಹಾಗಿದ್ದರೆ ಅವರ ದೀರ್ಘಾಯುಷ್ಯದ ಗುಟ್ಟೇನು? ಎಂದು ಕೇಳಿದರೆಅವರ ಶಾಂತ ಸ್ವಭಾವ, ಉದ್ದೇಶ ಹಾಗೂ ಆಳವಾದ ಬುದ್ದಿವಂತಿಕೆ ಎಂದು ಹೇಳಬಹುದು.  ಬದುಕಿನಲ್ಲಿ ಅವರ ಕೆಲವು ಅಭ್ಯಾಸಗಳನ್ನು  ಅರ್ಥಮಾಡಿಕೊಳ್ಳೋಣ* ಅವರು ಅತ್ಯಂತ ಧಾನಪೂರ್ವಕವಾಗಿ ಆಹಾರವನ್ನು ಸೇವಿಸುತ್ತಾರೆ ಹಾಗೂ ಅನವಶ್ಯಕವಾಗಿ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಅವರು ಸೇವಿಸುವ ಆಹಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.ತಾಜಾ ಆಗಿರುವ, ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ, ಹಣ್ಣು, ಆಹಾರಗಳನ್ನು ಅವರು ಸೇವಿಸುತ್ತಾರೆ.ಸಾಧ್ಯವಿದ್ದಷ್ಟು ತರಕಾರಿಗಳು, ಅಕ್ಕಿ, ಮೀನು ಹಾಗೂ ಹುದುಗು ಬರಿಸಿದ ಆಹಾರ ಪದಾರ್ಥಗಳು ಅವರ ಮೊದಲ ಆದ್ಯತೆ. ತಮ್ಮ ಅವಶ್ಯಕತೆಯ 80% ನಷ್ಟು ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ…. ಅಂದರೆ ಹೊಟ್ಟೆ ತುಂಬುವ ಮುನ್ನವೇ ಅವರು ಆಹಾರ ಸೇವನೆಯನ್ನು ನಿಲ್ಲಿಸುತ್ತಾರೆ.‘ಹರಾ ಹಚೀ ಬು’ ಎಂದರೆ ನಿಮ್ಮ ಅವಶ್ಯಕತೆಯ ಕೇವಲ 80 ಶೇಕಡಾ ಆಹಾರವನ್ನು ನೀವು ಸೇವಿಸಿ ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ. *ಸಾಮಾನ್ಯವಾಗಿ ಅವರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಪ್ರತಿದಿನ ನಡೆದಾಡುತ್ತಾರೆ.ಮನೆಯ ಕೈದೋಟಗಳನ್ನು ನಿರ್ವಹಿಸುತ್ತಾ ಓಡಾಡುತ್ತಾರೆ.ಇತರರನ್ನು ಅವಲಂಬಿಸದೆ ಮನೆಯ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಚಿಕ್ಕ ಪುಟ್ಟ ದೂರವನ್ನು ಮಾತ್ರವಲ್ಲದೆ ತುಸು ಹೆಚ್ಚಿನ ದೂರವನ್ನು ಕೂಡ ಅವರು ನಡೆದು ಪೂರೈಸುತ್ತಾರೆಪ್ರತಿದಿನ ಕೆಲ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾರೆ.ಅವರು ವ್ಯಾಯಾಮ ಮಾಡಲು ಜಿಮ್ ನಂತಹ ಯಂತ್ರಗಳ ಅವಲಂಬನೆಯನ್ನು ಮಾಡದೆ ಅತ್ಯಂತ ಸಹಜವಾಗಿ ಅವರು ಓಡಾಡಿಕೊಂಡು ತಮ್ಮ ನಿತ್ಯ ಬದುಕನ್ನು ನಡೆಸುತ್ತಾರೆ. ಪ್ರತಿದಿನ ಮುಂಜಾನೆ ಬೇಗನೆ ಏಳಲು ಅವರಿಗೆ ಅವರದ್ದೇ ಆದ ಕಾರಣವಿದೆ. ಇಕಿಗಾಯಿ ಎಂದು ಅದಕ್ಕೆ ಹೆಸರು. ಅದೆಷ್ಟೇ ಚಿಕ್ಕದಾದ ವಸ್ತು, ವಿಷಯವಿರಲಿ ಅದರಲ್ಲಿ ಒಂದು ಉದ್ದೇಶವನ್ನು ಅವರು ಹೊಂದಿರುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ.ಎಂದೂ ನಿವೃತ್ತರಾಗುವುದಿಲ್ಲ. ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿ ಹುಟ್ಟುಹಬ್ಬಕ್ಕೂ ಮತ್ತಷ್ಟು ಆರೋಗ್ಯವಂತರಾಗಿರುವ ಆಶಯವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. *ಮಕ್ಕಳನ್ನು, ಮೊಮ್ಮಕ್ಕಳನ್ನು ಕಾಳಜಿ ಮಾಡುವ ಅವರೇ ಎಲ್ಲ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಲು ಸಹಾಯ ಮಾಡುವರು. ಚಿಕ್ಕ ಸಸಿ ಇರಲಿ ದೊಡ್ಡ ಮರವಿರಲಿ ಅದನ್ನು ಕೂಡ ಅತ್ಯಂತ ಕಾಳಜಿ ಪೂರ್ವಕವಾಗಿ ಬೆಳೆಸುತ್ತಾರೆ . ಸಮಾಜದ ಹಾಗೂ ಸಮುದಾಯದ ಕುರಿತು ಕೂಡ ಅದೇ ಪ್ರಮಾಣದ ಕಾಳಜಿಯನ್ನು ಅವರು ಹೊಂದಿರುತ್ತಾರೆ. ತಮ್ಮನ್ನು ತಾವು ಅತ್ಯಂತ ಉಪಯುಕ್ತ ಮತ್ತೊಬ್ಬರ ಅವಶ್ಯಕತೆಗೆ ಜೊತೆಯಾಗುವ ಹಾಗೂ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ   ಅತ್ಯಂತ ಬಲವಾದ ಸಾಮಾಜಿಕ ಬಂಧುಗಳನ್ನು ಕೂಡ ಅವರು ಕಾಯ್ದುಕೊಳ್ಳುತ್ತಾರೆ *ಕುಟುಂಬ ಮತ್ತು ನೆರೆಹೊರೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹಾಗೂ ನಿರಂತರ ಸಂಪರ್ಕವನ್ನು ಹೊಂದಿರುತ್ತಾರೆ. ಹಿರಿಯರಿಗೆ ಅನಾದರ ತೋರದೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.ಒಂಟಿತನವನ್ನು ಅವರು ಬಯಸುವುದಿಲ್ಲ ಸದಾ ಸಮಾಜದ ಸಮುದಾಯದ ಜೊತೆ ಬೆರೆತು ಅದರ ಆಗುಹೋಗುಗಳಲ್ಲಿ ಒಂದಾಗಿ ನಡೆಯುತ್ತಾರೆ ಅತ್ಯಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಇದು ಅವರ ನರವ್ಯೂಹವನ್ನು ಶಾಂತಗೊಳಿಸುತ್ತದೆ. ಬದುಕಿನಲ್ಲಿ ಅತ್ಯಂತ ಕಡಿಮೆ ಅವಶ್ಯಕತೆಗಳು ಹಾಗೂ ಹೆಚ್ಚು ಉಪಯುಕ್ತತೆ ಯನ್ನು ಬಯಸುವ ವ್ಯಕ್ತಿತ್ವ ಅವರದಾಗಿದ್ದು ಅತ್ಯಂತ ನಿಧಾನ ಆದರೆ ಅಷ್ಟೇ ಅರ್ಥಪೂರ್ಣವಾದ ಶೈಲಿಯ ಬದುಕು ಅವರದಾಗಿರುತ್ತದೆ. ನಿರಂತರವಾಗಿ ಎಲ್ಲವನ್ನು ವಿರೋಧಿಸದೆ  ಒಪ್ಪಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ.ಹಣ, ಆಸ್ತಿ, ಅಂತಸ್ತುಗಳ ಕುರಿತು ಅವರಿಗೆ ವಿಶೇಷ ಮೋಹ ಇರುವುದಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ವ್ಯಥೆ ಪಡುವ ಸ್ವಭಾವ ಕೂಡ ಅವರದಲ್ಲ. * ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಅವರದ್ದುಮನೆಯಲ್ಲಿ ಅತಿಯಾಗಿ ಲೈಟುಗಳನ್ನು ಫ್ಯಾನುಗಳನ್ನು ಉರಿಸುವುದಿಲ್ಲ ನೈಸರ್ಗಿಕ ಗಾಳಿ, ಬೆಳಕನ್ನು ಹೆಚ್ಚು ಆಸ್ವಾದಿಸುತ್ತಾರೆ. ಅವರ ದಿನಚರ್ಯ ಹಾಗೂ ಋತುಚರ್ಯಗಳಿಗೆ ಅನುಸಾರವಾಗಿ ಬದುಕನ್ನು ನಡೆಸುತ್ತಾರೆ. ಬದುಕಿನ ಕುರಿತು ಅಪಾರ ಗೌರವವನ್ನು ಹೊಂದಿರುವ ಅವರು ಆಹಾರ ಸೇವನೆಯ ಕುರಿತು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರುತ್ತಾರೆ ಯಾವುದನ್ನೇ ಆಗಲಿ ಪೋಲು ಮಾಡದೆ ಬಳಸುವ ರೂಢಿಯನ್ನು  ಹೊಂದಿರುತ್ತಾರೆ.ತಮ್ಮ ದೇಹದ ಕುರಿತು ಕೂಡ ಅಷ್ಟೇ ಕಾಳಜಿ, ಗೌರವವನ್ನು ಹೊಂದಿದ್ದು ಪ್ರೀತಿಪೂರ್ವಕ ಪೋಷಣೆ ಅವರದ್ದಾಗಿರುತ್ತದೆ. *ಸಂತೋಷಕ್ಕಾಗಿ ಅವರು ಹಪಹಪಿಸುವುದಿಲ್ಲ ಬೆನ್ನತ್ತುವುದಿಲ್ಲ…. ಅವರು ಬದುಕಿನಲ್ಲಿ ಸಮತೋಲನವನ್ನು ಇಚ್ಚಿಸುತ್ತಾರೆ ಹಾಗೂ ಅದನ್ನೇ ಅಳವಡಿಸಿಕೊಳ್ಳುತ್ತಾರೆ.ಅವರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆಬದುಕಿನ ತಾತ್ಕಾಲಿಕ ವಿಷಯ ಸುಖಗಳ ಕುರಿತು ಅವರಿಗೆ ಅರಿವು ಇದ್ದು ಅಶಾಶ್ವತತೆಯನ್ನು ಒಪ್ಪಿಕೊಂಡು ಬಾಳುತ್ತಾರೆ.ಯಾವುದೇ ರೀತಿಯ ದ್ವೇಷ ಅಸಹನೆ ಅಸಮಾಧಾನಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಮಾನಸಿಕವಾಗಿ ಬೇಯುವುದಿಲ್ಲ…. ಹೋಗಲಿ ಬಿಡು ಎಂದು ವಿಷಯಗಳನ್ನು ಅವು ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುತ್ತಾರೆ.  ನೋಡಿದಿರಾ ಸ್ನೇಹಿತರೆ,ಬುದ್ಧನ ಎಲ್ಲ ಬೋಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು ಹೇರಳತೆಯ ವಿರುದ್ಧ ವಿರಳತೆಯನ್ನು ಅತಿ ಬಳಕೆಯ ವಿರುದ್ಧ ಸರಳತೆಯನ್ನು ಭೋಗ ಮತ್ತು ಲಾಲಸೆಯ ಬದುಕಿನ ಮೇಲೆ ಮಿತಿಯನ್ನು ತಮ್ಮನ್ನು ವಿಚಲಿತಗೊಳಿಸುವ ವಿಷಯಾಸಕ್ತಿಗಳ ಕುರಿತು ಅರಿವನ್ನು ಹೊಂದಿರುತ್ತಾರೆಒಬ್ಬಂಟಿತನದ ವಿರುದ್ಧ ಸಮುದಾಯದ ಜೊತೆಗಿನ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ. ಇವೆಲ್ಲವೂ ಬೌದ್ಧ ಧರ್ಮದ ಬೋಧನೆಯ ಜಾಣ್ಮೆಯನ್ನು ಬದುಕಿನ ಕನ್ನಡಿಯಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಅವರು ಬಳಸುವ ವಿಧಾನಗಳು. ಅಂತಿಮವಾಗಿ ದೀರ್ಘಾಯುಷ್ಯ ಎಂದರೆ ಬದುಕಿನ ದಿನಗಳಿಗೆ ಮತ್ತಷ್ಟು ಆಯುಷ್ಯವನ್ನು ತುಂಬುವುದು ಅಲ್ಲ.ಮತ್ತಷ್ಟು ಹೆಚ್ಚು ವರ್ಷ ಬಾಳುವುದಂತೂ ಅಲ್ಲವೇ ಅಲ್ಲ…. ಇದು ಬದುಕಿನಲ್ಲಿ ನಮಗೆ ನಿಧಾನ ವಿಷವಾಗಿ ಪರಿಣಮಿಸುವ ವಸ್ತು, ವಿಷಯ ಹಾಗೂ ವ್ಯಕ್ತಿಗಳನ್ನು ನಿರಾಕರಿಸುವ ದೂರವಿಡುವ ಒಂದು ಪ್ರಕ್ರಿಯೆ.  ಹಾಗಾದರೆ ಬದುಕಿನಲ್ಲಿ ನಿಧಾನ ವಿಷವಾಗಿ ಪರಿಣಮಿಸುವ ವಿಷಯಗಳು ಯಾವುವು ಎಂದರೆ* ಅತಿಯಾದ ಒತ್ತಡ *ಅತಿಯಾದ ಆಹಾರ ಸೇವನೆ *ಒಬ್ಬಂಟಿತನ *ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು /   ಆತುರತೆಯನ್ನು ತೋರುವುದು *ಅರ್ಥ ರಹಿತ ಬದುಕನ್ನು ನಡೆಸುವುದು ಹಾಗೂ ಅಂತಿಮವಾಗಿ ಇನ್ನೊಬ್ಬರೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು ವ್ಯಕ್ತಪಡುವುದು ಸ್ನೇಹಿತರೇ…ಜಪಾನೀಯರು ದೀರ್ಘಾಯುಷಿಗಳಾಗಲು ಕಾರಣ ಅವರು ಹೆಚ್ಚೇನು ಮಾಡಿಲ್ಲ ಬದಲಾಗಿ ಜಾಣತನದಿಂದ ತಮ್ಮ ಬದುಕನ್ನು ನಡೆಸುವ ಮೂಲಕ ಅನಾವಶ್ಯಕ ವಿಷಯಗಳನ್ನು ದೂರವಿಟ್ಟಿದ್ದಾರೆ.ಬಹಳಷ್ಟು ಬಾರಿ ದೀರ್ಘಾಯುಷ್ಯದ ಗುಟ್ಟು ಯಾವುದೇ ಔಷಧಿ ಚಿಕಿತ್ಸೆಗಳಲ್ಲಿ ಇಲ್ಲ… ಬೇರೆಯವರು ನಮ್ಮ ಕುರಿತು ಗಮನ ಹರಿಸದೇ ಇದ್ದಾಗಲೂ ಕೂಡ ನಾವು ಹೇಗೆ ನಮ್ಮ ಬದುಕನ್ನು ನಡೆಸುತ್ತೇವೆ ಎಂಬುದು ನಮ್ಮ ದೀರ್ಘಾಯುಷ್ಯದ ಗುಟ್ಟಾಗಿರಬೇಕು. ವೀಣಾ ಹೇಮಂತ್ ಗೌಡ ಪಾಟೀಲ್

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ ಅನಂತತೆಯ ಹರವಿನಲಿ ನಾನೊಂದು ಬಿಂದುಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದುಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಶರಣಾಗಿರುವೆ ನಿನಗೀಗ” ಓ ಮೌನವೇ! ಮಹಾಮೌನವೇ!ನೀರವ ನಿರಾಳ ಮೌನವೇ!ಬಾ ನನ್ನೆದೆಯಾಳದಲಿನಿಶ್ಚಲವಾಗಿ ನೆಲೆಸುಶರಣಾಗಿರುವೆ ನಿನಗೀಗಸೋತು ಬಂದಿರುವೆ ನಿನ್ನ ಬಳಿಗೀಗಕರುಣೆದೋರು ದಯೆತೋರಿ|| ಓ!ಅನಂತ ಮಹಾಮೌನವೇ!ನಿನ್ನ ಮೌನಗರ್ಭದಲಿ ಮಿಸುಕಾಡುತಿರುವಭಾವಕೂಸುಗಳೆಲ್ಲ ಸುಂದರ ಪದಗಳೇಒಂದೊಂದು ಮೌನ ಮಹಾಕಾವ್ಯಗಳೇ|| ತೀಡಿ ಬಂದ ತಂಗಾಳಿಯುತೂಗಿ ತಂದ ಮಣ್ಣ ಗಂಧವೆಲ್ಲಬಾಳ ಗಂಧವೇlತುಂಬಿ ಬಂದ ತಾಯ್ ಮಮತೆಯೆಲ್ಲಮಡಿಲ ಮಗುವಿಗೆ ಜೋಗುಳವೇ lಮೌನದ ಬಿಸಿ ಅಪ್ಪುಗೆಯದುಸುಂದರ ಭಾಷೆಯೇ ll ಪ್ರಕೃತಿಯ ಭಾಷೆಯೆಲ್ಲವೂ ಮೌನವೇlಮೊಗ್ಗೆಯೊಡೆದು ಅರಳುವ ಅರಳೇ!ಒಲವಿನ ಬೆಳಕೇ!ಸದ್ದಿಲ್ಲದೇ ನಡೆಯುವ ಸಂಭ್ರಮವೇ! ಓ ಮೌನವೇ!ಸೂರ್ಯೋದಯ ಚಂದ್ರೋದಯನಿನ್ನ ಪದ ಲಾಲಿತ್ಯವೇ lದಣಿದ ಮನಗಳಿಗೆ ನಿನ್ನ ಮಡಿಲದುಹೂವಿನ ಹಾಸಿಗೆಯೇ ll ಗಾಳಿಯ ಮೃದು ಸ್ಪರ್ಶಕೆ ತೂಗುವಸಸ್ಯ ಕುಲವೇ ಭೂ ದೇವಿಯ ದಣಿವಿಗೆಬೀಸಿದ ಮೌನ ಚಾಮರವೇ llಅಯ್ಯೋ!ಗಳಿಗೆಗೊಂದು ತೆರೆ ಬಂದುಕಲಕುತಿದೆ ಕಡಲ ಧ್ಯಾನವನೆ lಹಕ್ಕಿಗಳಿಂಚರವದು ತೇಲಿ ಬಂದುಕದಡುತಿದೆ ಅನಂತಕಾಲದ ಬನದ ತಪವನೆ lನೀರವತೆಯಲೂ ಮೌನವೇಸದ್ದಿನಲ್ಲೂ ನಿದ್ದೆಯೇ lಮೌನವೇ ಇದೆಲ್ಲ ನಿನ್ನ ಲೀಲೆಯೇ ll ಋಷಿಮುನಿಗಳ ಕವಿಪುಂಗವರೆದೆಯಲಿವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!ಜಗದ ಸುಂದರ ಭಾಷಿಣಿ ನೀನೆಯೇ llಕರುಣೆದೋರಿ ಬಾ ನನ್ನೊಳಗೆ ತಾಯಿಯೇ lಮೌನದೇವಿಯೇ!ಅನಂತಯಾನಕೆ ಮೌನದಲಿಕೈಹಿಡಿದು ನಡೆಸೆನ್ನನುl ಶರಣಾಗಿರುವೆ ನಾನೀಗ ನಿನಗೆಓ!ಮೌನದೇವತೆಯೇನಾನೀಗ ಶರಣಾಗಿರುವೆ ನಿನ್ನಡಿಗಳಿಗೆಓ!ಮೌನ ದೇವತೆಯೇಶರಣಾಗಿರುವೆ ನಿನಗೀಗ ಶರಣಾಗಿರುವೆ. ಡಾ. ಪುಷ್ಪಾವತಿ ಶಲವಡಿಮಠ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ” Read Post »

You cannot copy content of this page

Scroll to Top